ಜೇಮ್ಸ್ ಬಿಡುಗಡೆಗೆ ಅದ್ಧೂರಿ ಕಾರ್ಯಕ್ರಮ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರ ಮಾ.17ರಂದು ಬಿಡುಗಡೆ ಆಗಲಿದೆ. ಅಪ್ಪು ನಟನೆಯ ಕೊನೆಯ ಚಿತ್ರವನ್ನು ಅಭಿಮಾನಿಗಳು ಸ್ವಾಗತ ಮಾಡಲು ಸಿದ್ಧತೆ ನಡೆಸಿದ್ದಾರೆ.

ಮಾರ್ಚ್ 16 ರ ಬೆಳಗ್ಗೆಯಿಂದ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮ ಶುರು ಮಾಡಿದ್ದಾರೆ. ಸಂಜೆ 7.30ಕ್ಕೆ ಸಿದ್ದೇಶ್ವರ ಚಿತ್ರಮಂದಿರದಲ್ಲಿ 31 ಚಿತ್ರದ ವಾಲ್ ಆಫ್ ಫ್ರೇಂ ಅನಾವರಣ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ರಾತ್ರಿ 11.59 ನಿಮಿಷಕ್ಕೆ ಅಣ್ಣಾವ್ರ ಮಕ್ಕಳು ಹಾಗೂ ಮೊಮ್ಮಕ್ಕಳು, ಅಭಿಮಾನಿಗಳಿಂದ ಹುಟ್ಟುಹಬ್ಬ ಆಚರಣೆ ನಡೆಯಲಿದೆ.

ಚಿತ್ರ ರಿಲೀಸ್ ದಿನವಾದ ಮಾರ್ಚ್ 17ರ ಬೆಳಗ್ಗೆ 5 ಗಂಟೆಗೆ ಕಮಲಾನಗರ ವೀರಭದ್ರೇಶ್ವರ ಹಾಗೂ ವೀರೇಶ್ ಚಿತ್ರಮಂದಿರಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೇಟಿ ನೀಡಲಿದ್ದಾರೆ. ಬೆಳಗ್ಗೆ 6 ಗಂಟೆಗೆ ರಾಘಣ್ಣ, ಶ್ರೀಮುರಳಿ, ಧ್ರುತಿ ಪುನೀತ್ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್, ಯುವ ರಾಜ್‌ಕುಮಾರ್, ಧೀರೇನ್, ಧನ್ಯಾ ರಾಮ್‌ಕುಮಾರ್ ಸೇರಿದಂತೆ ಇಡೀ ಕುಟುಂಬ ‘ಜೇಮ್ಸ್’ ಸಿನಿಮಾ ವೀಕ್ಷಣೆ ಮಾಡಲಿದೆ. ಬಳಿಕ ಇವರು ಬೆಳಗ್ಗೆ 10 ಗಂಟೆಗೆ ವೀರಭದ್ರೇಶ್ವರ ಚಿತ್ರಮಂದಿರಕ್ಕೆ ಭೇಟಿ ನೀಡಲಿದ್ದಾರೆ.

ಅಭಿಮಾನಿಗಳು ಎರಡು ಹೆಲಿಕಾಪ್ಟರ್‌ಗಳನ್ನು ಬುಕ್ ಮಾಡಿದ್ದು, ಒಂದು ಹೆಲಿಕಾಪ್ಟರ್‌ ಅಪ್ಪು ಪುಣ್ಯಭೂಮಿಗೆ 4 ಕಡೆಗಳಿಂದ ಬೆಳಗ್ಗೆ 9.30ಕ್ಕೆ ಹೂಮಳೆ ಸುರಿಸಲಿದೆ. ಬೆಳಗ್ಗೆ 9.40ಕ್ಕೆ ಕಮಲಾನಗರ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಮೇಲೆ ಹೂಮಳೆ ಸುರಿಸಲಿದೆ. ಎರಡನೇ ಹೆಲಿಕಾಪ್ಟರ್ ಬೆಳಗ್ಗೆ 9.35ಕ್ಕೆ ಪ್ರಸನ್ನ ಚಿತ್ರಮಂದಿರದ ಮೇಲೆ ಪುಷ್ಪಾರ್ಚನೆ, 9.40ಕ್ಕೆ ವೀರೇಶ್ ಚಿತ್ರಮಂದಿರದ ಮೇಲೆ ಪುಷ್ಪಾರ್ಚನೆ ಮಾಡಲಿದೆ.

ಮಾರ್ಚ್ 18ರಂದು ‘ಜೇಮ್ಸ್’ ಸಿನಿಮಾ ನೋಡಲು ಬರುವ ಜನರಿಗೆ ಅಪ್ಪು ಅಭಿಮಾನಿಗಳು ಅನ್ನದಾನ ಮಾಡಲಿದ್ದಾರೆ. ಮಾರ್ಚ್ 19ರಂದು ಕುರುಬರಹಳ್ಳಿ ಸರ್ಕಲ್‌ನಿಂದ ವೀರೇಶ್ ಚಿತ್ರಮಂದಿರದವರೆಗೆ ಸ್ಟಾರ್ ಮೆರವಣಿಗೆ ನಡೆಯಲಿದೆ. ಮಾರ್ಚ್ 20ರ ಭಾನುವಾರದಂದು ರಾಜಾಜಿನಗರ 6ನೇ ಬ್ಲಾಕ್‌ನಿಂದ ವೀರೇಶ್ ಚಿತ್ರಮಂದಿರದವರೆಗೆ ಅಪ್ಪು ಮೆರವಣಿಗೆ, ಬಳಿಕ ವೀರೇಶ್ ಚಿತ್ರ ಮಂದಿರದಲ್ಲಿ ಅಪ್ಪು ಅಭಿಮಾನಿಗಳಿಂದ ಸಂಭ್ರಮಾಚರಣೆ ನಡೆಯಲಿದೆ.

ಜೇಮ್ಸ್’ನಲ್ಲಿ ನಾಯಕಿಯಾಗಿ ತಮಿಳು ನಟಿ ಪ್ರಿಯಾ ಆನಂದ್ ನಟಿಸಿದ್ದಾರೆ. ‘ರಾಜಕುಮಾರ’ ಚಿತ್ರದಲ್ಲಿ ಪುನೀತ್ ತಂದೆಯಾಗಿ ಅಭಿನಯಿಸಿದ್ದ ಹಿರಿಯ ತಮಿಳು ನಟ ಶರತ್ ಕುಮಾರ್ ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರಕ್ಕೆ ಎ. ಹರ್ಷ ಕೊರಿಯೋಗ್ರಫಿ, ಸ್ಟಂಟ್ ಮಾಸ್ಟರ್ ವಿಜಯ್ ಫೈಟಿಂಗ್ ದೃಶ್ಯಾವಳಿ ನಿರ್ದೇಶಿಸಿದ್ದಾರೆ. ಕಿಶೋರ್ ಪತಿಕೊಂಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ, ಶ್ರೀಶ ಛಾಯಾಗ್ರಹಣ, ರವಿಸಂತೆ ಹೈಕ್ಲು ಕಲಾ ನಿರ್ದೇಶನ, ದೀಪು ಎಸ್‌.ಕುಮಾರ್‌ ಸಂಕಲನ ಇದೆ.

ಈ ಚಿತ್ರದಲ್ಲಿ ತೆಲುಗು ನಟ ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್, ರಂಗಾಯಣ ರಘು ಮತ್ತು ಮುಕೇಶ್ ರಿಷಿ ಸೇರಿದಂತೆ ದೊಡ್ಡ ತಾರಾಗಣ ನಟಿಸಿದೆ.
__

 

Be the first to comment

Leave a Reply

Your email address will not be published. Required fields are marked *

Translate »
error: Content is protected !!