ರಿಯಲ್ ಸ್ಟಾರ್’ ಉಪೇಂದ್ರ ಅಭಿನಯದ ‘ಹೋಮ್ ಮಿನಿಸ್ಟರ್’ ಸಿನಿಮಾ ಏಪ್ರಿಲ್ 1ಕ್ಕೆ ಬಿಡುಗಡೆಗೆ ಸಜ್ಜಾಗಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಈ ಚಿತ್ರ ರಿಲೀಸ್ ಆಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾದ ಕೆಲಸಗಳು ಲೇಟ್ ಆದವು. ‘ಲೇಟ್ ಆದ್ರೂ ಲೇಟೆಸ್ಟ್ ಆಗಿ ಬರುತ್ತೇವೆ’ ಎಂದು ಉಪೇಂದ್ರ ಹೇಳಿದ್ದಾರೆ. ಜೊತೆಗೆ ಸಿನಿಮಾದ ಬಗ್ಗೆ ಕೆಲವು ಮಾಹಿತಿ ಬಿಟ್ಟುಕೊಟ್ಟಿದ್ದಾರೆ.
‘ಹೋಮ್ ಮಿನಿಸ್ಟರ್’ ಶೀರ್ಷಿಕೆ ನೋಡಿದರೆ ಇದು ರಾಜಕೀಯಕ್ಕೆ ಸಂಬಂಧಿಸಿದ ಸಿನಿಮಾ ಎನಿಸಬಹುದು. ಆದರೆ ಅಸಲಿ ವಿಚಾರ ಬೇರೆಯೇ ಇದೆ. ‘ಇದು ವಿಭಿನ್ನವಾದಂತಹ ಪ್ರಯತ್ನ. ಸಿನಿಮಾ ನೋಡಿದರೆ ಜನರಿಗೆ ಗೊತ್ತಾಗುತ್ತದೆ. ನಾವು ಮಾಡಿದ ಸಿನಿಮಾವನ್ನು ನಾವೇ ಹೊಗಳಬಾರದು. ಹೋಮ್ ಮಿನಿಸ್ಟರ್ ಎಂಬ ಟೈಟಲ್ ಕೇಳಿ ಥಿಯೇಟರ್ ಒಳಗೆ ಹೋದರೆ ನೀವು ಶಾಕ್ ಆಗ್ತೀರಿ. ಅಲ್ಲಿ ಬೇರೆಯದೇ ಹೋಮ್ ಮಿನಿಸ್ಟರ್ ಇರುತ್ತಾರೆ. ಈ ಸಿನಿಮಾದಲ್ಲಿ ಅದೇ ಸಸ್ಪೆನ್ಸ್. ನನಗಿಂತ ವೇದಿಕಾ ಪಾತ್ರ ಹೆಚ್ಚು ಚೆನ್ನಾಗಿದೆ. ಸಿನಿಮಾದಲ್ಲಿ ಅವರು ನನ್ನನ್ನು ಆಟ ಆಡಿಸ್ತಾರೆ. ಅವರು ತುಂಬ ಚೆನ್ನಾಗಿ ನಟಿಸಿದ್ದಾರೆ. ಹಲವು ಹುಡುಗಿಯರು ಈ ಸಿನಿಮಾದಲ್ಲಿ ಇದ್ದಾರೆ. ನಮ್ಮ ನಿರ್ಮಾಪಕರಿಗೆ ಗ್ಲಾಮರ್ ಎಂದರೆ ಇಷ್ಟ. ಮಲೇಷಿಯಾ, ಥಾಯ್ಲೆಂಡ್ನಲ್ಲಿ ಶೂಟಿಂಗ್ ಮಾಡಲಾಗಿದೆ’ ಎಂದಿದ್ದಾರೆ ಉಪೇಂದ್ರ.
Be the first to comment