ದುನಿಯಾ ವಿಜಯ್ ನಟನೆಯ 28ನೇ ಸಿನಿಮಾ, ನಿರ್ದೇಶನದ ಎರಡನೇ ಚಿತ್ರದ ಟೈಟಲ್ ಮಹಾಶಿವರಾತ್ರಿಯಂದು ಘೋಷಣೆಯಾಗಲಿದೆ.
ಈ ಸಿನಿಮಾವನ್ನು ಶಿವಣ್ಣ ನಟಿಸುತ್ತಿರುವ ‘ಬೈರಾಗಿ’ ಸಿನಿಮಾದ ನಿರ್ಮಾಪಕ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಸಂಬಂಧಿಸಿದಂತೆ ರಕ್ತ ಕಲೆಗಳಾಗಿರುವ ಕೈ, ಯಮಹ ಆರ್ ಎಕ್ಸ್ 100 ಬೈಕ್ ಇರುವ ಅನೌನ್ಸ್‌ಮೆಂಟ್ ಪೋಸ್ಟರ್ ರಿಲೀಸ್ ಆಗಿದ್ದು, ಈ ಬಗ್ಗೆ ಶಿವರಾತ್ರಿ ಹಬ್ಬದಂದು ಹೆಚ್ಚಿನ ಮಾಹಿತಿ ಸಿಗಲಿದೆ.
‘ಸಲಗ’ ಬಳಿಕ ದುನಿಯಾ ವಿಜಯ್‌ಗೆ ಆಫರ್ ಸಾಕಷ್ಟು ಹೆಚ್ಚಾಗಿವೆ. ಈ ನಡುವೆ ದುನಿಯಾ ವಿಜಯ್ ತೆಲುಗು ಚಿತ್ರರಂಗದ ಕಡೆ ಮುಖ ಮಾಡಿದ್ದು, ಬಾಲಕೃಷ್ಣ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮುಗಿದ ಬಳಿಕ ದುನಿಯಾ ವಿಜಯ್ ತಮ್ಮ ಹೊಸ ಸಿನಿಮಾವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಈ ಶಿವರಾತ್ರಿಗೆ ಟೈಟಲ್ ಘೋಷಣೆ ಮಾತ್ರ ಆಗಬಹುದು ಎನ್ನುವ ಸುದ್ದಿ ಹರಿದಾಡುತ್ತಿದೆ.
‘ಸಲಗ’ ಗೆದ್ದ ಬಳಿಕ ದುನಿಯಾ ವಿಜಯ್ ಮತ್ತೆ ನಿರ್ದೇಶನಕ್ಕೆ ಇಳಿಯುತ್ತಾರಾ ಎನ್ನುವ ಪ್ರಶ್ನೆ ಹಲವರನ್ನು ಕಾಡಿದೆ. ಈ ಪ್ರಶ್ನೆಗೆ ಸ್ವತ: ದುನಿಯಾ ವಿಜಯ್ ಕೂಡ ಉತ್ತರಿಸಿದೆ ಮೌನವಾಗಿದ್ದರು.ಈಗ ಕುತೂಹಲಕ್ಕೆ ತೆರೆ ಬಿದ್ದಿದ್ದು, ದುನಿಯಾ ವಿಜಯ್ ಈ ಸಿನಿಮಾದಲ್ಲಿ ನಟಿಸುವ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಇನ್ನೂ ಟೈಟಲ್ ಅನೌನ್ಸ್ ಮಾಡದ ಈ ಚಿತ್ರ ವಿಜಯ್ ನಿರ್ದೇಶಿಸುತ್ತಿರುವ 2ನೇ ಸಿನಿಮಾ ಆಗಲಿದೆ.
ಹೊಸ ಪ್ರಯತ್ನಕ್ಕೆ ಕೈ ಹಾಕಬೇಕಾದ ಅನಿವಾರ್ಯತೆಗೆ ಸಿಲುಕಿದ ದುನಿಯಾ ವಿಜಯ್ ಸಲಗ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದರು. ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದ ದುನಿಯಾ ವಿಜಯ್ ಚೊಚ್ಚಲ ಪ್ರಯತ್ನದಲ್ಲಿ ಗೆದಿದ್ದರು. ಈಗ ಎರಡನೇ ಬಾರಿ ಸಿನಿಮಾ ನಿರ್ದೇಶನಕ್ಕೆ ಮುಂದಾಗಿರುವ ವಿಜಯ್ ಚಿತ್ರದ ಟೈಟಲ್ ರಿಲೀಸ್ ಮಾಡಲು ಸಿದ್ಧತೆ ನಡೆಸಿದ್ದಾರೆ.
Be the first to comment