ವಿಕ್ಕಿ – ಕೈಫ್ ಜೋಡಿ ತೆರೆಯ ಮೇಲೆ ತರಲು ಕಸರತ್ತು

ಹೊಸದಾಗಿ ಮದುವೆಯಾದ ಬಾಲಿವುಡ್ ಜೋಡಿ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಅವರನ್ನು ತೆರೆಯ ಮೇಲೆ ತಂದು ಎನ್​ಕ್ಯಾಶ್​ ಮಾಡಿಕೊಳ್ಳಲು ಕೆಲವು ಪ್ರತಿಷ್ಠಿತ ಬ್ರ್ಯಾಂಡ್​ಗಳು ಮುಂದೆ ಬಂದಿವೆ.

ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್ ಅವರು ಟ್ರೆಂಡ್​ನಲ್ಲಿ ಇದ್ದಾರೆ. ಅವರನ್ನು ತೆರೆಯ ಮೇಲೆ ಕಾಣಲು ಸಿನಿಮಾಸಕ್ತರು ಕಾತರದಿಂದ ಕಾಯುತ್ತಿದ್ದಾರೆ. ಇದನ್ನು ಬಂಡವಾಳ ಮಾಡಿಕೊಂಡು ಕೆಲವು ಬ್ರ್ಯಾಂಡ್ ಗಳು ಅವರನ್ನು ಜೊತೆಯಾಗಿ ತೆರೆಯ ಮೇಲೆ ತರಲು ಮುಂದಾಗಿವೆ.

ರಾಜಸ್ಥಾನದಲ್ಲಿ ಮದುವೆ ಮುಗಿಸಿದ ಈ ಜೋಡಿ ಇದುವರೆಗೆ ವೃತ್ತಿಜೀವನದಲ್ಲಿ ತೆರೆ ಹಂಚಿಕೊಂಡಿಲ್ಲ. ಜಾಹೀರಾತು ಒಂದರಲ್ಲಿ ಈ ಜೋಡಿಯನ್ನು ಒಂದಾಗಿಸಲು ಪ್ಲ್ಯಾನ್​ ನಡೆದಿದೆ. ಅದು ಯಶಸ್ವಿಯಾದರೆ ಈ ಜೋಡಿ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದೆ.

ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಅವರ ಲವ್, ಮದುವೆ ಬಗ್ಗೆ ಅಭಿಮಾನಿಗಳು ಸಾಕಷ್ಟು ಕುತೂಹಲ ಹೊಂದಿದ್ದಾರೆ. ಈ ಬಗ್ಗೆ ತಿಳಿದುಕೊಳ್ಳುವ ಜೊತೆಗೆ ಈ ಜೋಡಿಯನ್ನು ತೆರೆಯ ಮೇಲೆ ನೋಡಲು ಕಾಯುತ್ತಿದ್ದಾರೆ. ಈ ಜೋಡಿಯ ಮದುವೆ ವಿಡಿಯೋ ಇನ್ನೂ ಲಭ್ಯವಾಗಿಲ್ಲ. ಈ ಬಗ್ಗೆ ಓಟಿಟಿ ಸಂಸ್ಥೆಯೊಂದು 100 ಕೋಟಿ ರೂಪಾಯಿಗಳಿಗೆ ಒಪ್ಪಂದ ಮಾಡಿಕೊಂಡಿದ್ದು, ಮದುವೆ ದೃಶ್ಯಗಳನ್ನು ಎಕ್ಸ್​ಕ್ಲೂಸಿವ್​ ಆಗಿ ಪ್ರಸಾರ ಮಾಡಲಿದೆ.

ಸದ್ಯ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಮದುವೆಯ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕತ್ರಿನಾ ‘ಜೀ ಲೇ ಝರಾ’, ‘ಫೋನ್​ ಭೂತ್​’ ಸಿನಿಮಾ ಶೂಟಿಂಗ್​ನಲ್ಲಿ ಪಾಲ್ಗೊಳ್ಳಬೇಕಿದೆ. ವಿಕ್ಕಿ ಕೌಶಲ್ ‘ಸ್ಯಾಮ್​ ಬಹದ್ದೂರ್​’ ಸಿನಿಮಾದ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!