ಭಾರೀ ಮೊತ್ತಕ್ಕೆ ಮದಗಜ ಸ್ಯಾಟಲೈಟ್ ರೈಟ್ ಸೇಲ್

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ‘ಮದಗಜ’ ಚಿತ್ರದ ಸ್ಯಾಟಲೈಟ್ ಹಕ್ಕು 6 ಕೋಟಿಗೆ ಸೇಲ್ ಆಗಿದೆ.

ಕಲರ್ಸ್ ಕನ್ನಡ ‘ಮದಗಜ’ ಹಕ್ಕು ಪಡೆದುಕೊಂಡಿದೆ. ಬಹು ತಾರಾಗಣದ ಮದಗಜ’ ಸಿನಿಮಾದ ಸ್ಯಾಟಲೈಟ್ ಹಕ್ಕು ಕೊಳ್ಳಲು ಸಾಕಷ್ಟು ಪೈಪೋಟಿ ಇತ್ತು. ಕೊನೆಗೂ ಕಲರ್ಸ್ ಕನ್ನಡ ದುಬಾರಿ ಮೊತ್ತಕ್ಕೆ ಸಿನಿಮಾದ ಹಕ್ಕು ಕೊಂಡುಕೊಂಡಿದೆ.

ಕೆಲವು ದಿನಗಳ ಹಿಂದೆ ಸಿನಿಮಾ ಡಬ್ಬಿಂಗ್ ರೈಟ್ಸ್ ಮಾರಾಟ ಮಾಡಿದ್ದ ಚಿತ್ರತಂಡ ಈಗ ಸ್ಯಾಟಲೈಟ್ ಹಕ್ಕುಗಳನ್ನು ದುಬಾರಿ ಮೊತ್ತಕ್ಕೆ ಸೇಲ್ ಮಾಡುವಲ್ಲಿ ಯಶಸ್ವಿಯಾಗಿದೆ.

ಡಿ.3ರಂದು ‘ಮದಗಜ’ ಸಿನಿಮಾ ಬಿಡುಗಡೆ ಆಗಲಿದೆ. ಥಿಯೇಟರ್ ಮುಂದೆ ಮದಗಜನ ಮಹೋತ್ಸವ ಮಾಡಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಕರ್ನಾಟಕ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿಮಾನಿಗಳ ಒಕ್ಕೂಟ, ಕೇಂದ್ರ ಸಮಿತಿಯಿಂದ ಪ್ರಮುಖ ಚಿತ್ರಮಂದಿರದ ಮುಂದೆ ಅನ್ನಸಂತರ್ಪಣೆ, ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ 80 ಸಾವಿರ ರೂಪಾಯಿಯ ಸೇಬು ಹಣ್ಣಿನ ಹಾರವನ್ನು ಶ್ರೀಮುರಳಿಗೆ ಥಿಯೇಟರ್‌ನಲ್ಲಿ ಹಾಕಲಾಗುವುದು.

ಮದಗಜ ಚಿತ್ರ ಶ್ರೀಮುರಳಿ ಅವರ 21ನೇ ಸಿನಿಮಾ. ಚಿತ್ರ ಬಿಡುಗಡೆ ದಿನ ಅಭಿಮಾನಿಗಳು 21 ಕೆಜಿ ಕೇಕ್ ಕಟ್ ಮಾಡಲಿದ್ದಾರೆ. ಅಂತೆಯೇ ಅನುಪಮ ಚಿತ್ರಮಂದಿರದ ಮುಂದೆ 21 ಸಾವಿರ ಪಟಾಕಿ ಸಿಡಿಸಿ ಸಂಭ್ರಮಿಸಲಿದ್ದಾರೆ. ಶ್ರೀಮುರಳಿ ಕಟೌಟ್‌ಗೆ 21 ಕುಂಬಳಕಾಯಿ ಒಡೆದು ಪೂಜೆ ಮಾಡಲು ನಿರ್ಧರಿಸಲಾಗಿದೆ.

ಮದಗಜ ಚಿತ್ರದಲ್ಲಿ ಶ್ರೀಮುರುಳಿ ಮತ್ತು ಆಶಿಕಾ ರಂಗನಾಥ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜಗಪತಿ ಬಾಬು ಅವರು ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ತಮಿಳು ನಟಿ ದೇವಯಾನಿ ಅವರು ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಮರಳಿದ್ದಾರೆ.

ಮೊದಲ ಬಾರಿಗೆ ಆಶಿಕಾ ಅವರು ಶ್ರೀಮುರಳಿ ಜೊತೆ ನಟಿಸುತ್ತಿದ್ದು, ಅವರು ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮೊದಲ ಪೋಸ್ಟರ್ ನಲ್ಲಿ ಆಶಿಕಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಮಾಸ್ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದರು.

ಬಹುನಿರೀಕ್ಷಿತ ‘ಮದಗಜ’ ಸಿನಿಮಾದ ತೆಲುಗು ಹಾಗೂ ತಮಿಳು ಭಾಷೆಯ ಟೀಸರ್ ಈಗಾಗಲೇ ರಿಲೀಸ್ ಆಗಿದೆ. ಚಿತ್ರ ಪೋಸ್ಟರ್ ಮತ್ತು ಟೀಸರ್ ಮೂಲಕ ಕುತೂಹಲ ಮೂಡಿಸಿದೆ. ಚಿತ್ರ ಬಿಡುಗಡೆಗೆ ಬಹುತೇಕ ಸಿದ್ಧತೆ ಮುಗಿದಿದೆ.

ಮಹೇಶ್ ಕುಮಾರ್ ಅವರು ನಿರ್ದೇಶಿಸಿರುವ ಈ ಸಿನಿಮಾಗೆ ಉಮಾಪತಿ ಅವರು ಹಣ ಹೂಡಿದ್ದಾರೆ.
__________

Be the first to comment

Leave a Reply

Your email address will not be published. Required fields are marked *

Translate »
error: Content is protected !!