ಪುನೀತ್ ಬಗ್ಗೆ ಸುಳ್ಳು ಪೋಸ್ಟ್: ಸ್ಪಷ್ಟೀಕರಣ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಮಾಜ ಸೇವೆಯ ಬಗ್ಗೆ ಅಪ್ಪು ಅಭಿಮಾನಿಗಳು ಪೋಸ್ಟ್‌ಗಳನ್ನು ಹಾಕುತ್ತಿದ್ದು, ಈ ಪೋಸ್ಟ್ ಪೈಕಿ ಸುಳ್ಳು ಪೋಸ್ಟ್ ಒಂದು ಸದ್ದು ಮಾಡಿದೆ.

“ಬುಲೆಟ್ ಪ್ರಕಾಶ್ ನಿಧನ ಹೊಂದಿದಾಗ ಬುಲೆಟ್ ಪ್ರಕಾಶ್ ಮನೆಗೆ ತೆರಳಿದ್ದ ಪುನೀತ್ ರಾಜ್‌ಕುಮಾರ್ ಅವರ ಕುಟುಂಬಕ್ಕೆ ಐದು ಲಕ್ಷ ಹಣ ಕೊಟ್ಟು ಬಂದಿದ್ದರು. ಹೀಗೆಂದು ಬುಲೆಟ್ ಪುತ್ರ ಹೇಳಿಕೊಂಡಿದ್ದಾನೆ” ಎನ್ನುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇದು ಸುಳ್ಳೆಂದು ಸ್ವತಃ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಸ್ಪಷ್ಟೀಕರಣ ನೀಡಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ರಕ್ಷಕ್, ”ನನಗೆ ಪುನೀತ್ ರಾಜ್‌ಕುಮಾರ್ ಹಾಗೂ ಅಣ್ಣಾವ್ರ ಕುಟುಂಬದ ಮೇಲೆ ಅಪಾರ ಗೌರವ, ಪ್ರೀತಿ ಇದೆ. ಆದರೆ ಪುನೀತ್ ಅವರು ನಮ್ಮ ಮನೆಗೆ ಬಂದು ಐದು ಲಕ್ಷ ಹಣ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿ ಸುಳ್ಳು. ಪುನೀತ್ ನಮಗೆ ಹಣ ನೀಡಿಲ್ಲ” ಎಂದಿದ್ದಾರೆ.

ಪುನೀತ್ ರಾಜ್‌ಕುಮಾರ್ ಸಾಕಷ್ಟು ಸಮಾಜ ಸೇವೆಗಳನ್ನು ಮಾಡಿದ್ದಾರೆ. ಆ ಬಗ್ಗೆ ಸಾರ್ವಜನಿಕರು ಸಾಕಷ್ಟು ಹೆಮ್ಮೆ ಪಟ್ಟಿದ್ದಾರೆ. ಆದರೆ ಕೆಲವರು ಸುಳ್ಳು ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟು ಪುನೀತ್ ರಾಜ್ ಕುಮಾರ್ ಘನತೆಗೆ ಕುಂದು ತರುವ ಕೆಲಸವನ್ನು ಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಪೋಷಕ ನಟ ಆಗಿದ್ದ ಬುಲೆಟ್ ಪ್ರಕಾಶ್ ಅವರು ಅನಾರೋಗ್ಯದಿಂದ 2020 ರ ಏಪ್ರಿಲ್ 20 ರಂದು ನಿಧನ ಹೊಂದಿದ್ದರು. ಆಗ ಬುಲೆಟ್ ಪ್ರಕಾಶ್ ಮಗಳ ವಿದ್ಯಾಭ್ಯಾಸ, ಮದುವೆಯ ಜವಾಬ್ದಾರಿಯನ್ನು ತಾವು ವಹಿಸುವುದಾಗಿ ನಟ ದರ್ಶನ್ ಭರವಸೆ ನೀಡಿದ್ದರು.
ಈಗ ರಕ್ಷಕ್ ತಮ್ಮತಂದೆಯ ಆಸೆಯಂತೆ ಸಿನಿಮಾ ರಂಗಕ್ಕೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಸಂದರ್ಶನಗಳಲ್ಲಿ ಮಾತನಾಡಿರುವ ರಕ್ಷಕ್, ”ನಾನು ರೋಸ್ ಹಿಡಿದು ಬರಲ್ಲ. ಲಾಂಗ್ ಹಿಡಿದು ಬರುತ್ತೀನಿ” ಎಂದಿದ್ದು, “ದರ್ಶನ್ ಅಭಿಮಾನಿಗಳು ನನಗೂ ಸಹಾಯ ಮಾಡ್ತಾರೆ” ಎನ್ನವ ಭರವಸೆ ವ್ಯಕ್ತಪಡಿಸಿದ್ದಾರೆ.
________

Be the first to comment

Leave a Reply

Your email address will not be published. Required fields are marked *

Translate »
error: Content is protected !!