ಸದ್ದು ಮಾಡುತ್ತಿದೆ ಮ್ಯೂಸಿಕ್ ವಿಡಿಯೋ ‘ಭೇಟಿ’

ಪ್ರೀತಿಯ ಕಥೆ ಹೇಳುವ ಮ್ಯೂಸಿಕ್ ವಿಡಿಯೋ ‘ಭೇಟಿ’ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ವಿವೇಕ್ ಗೌಡ ಮತ್ತು ತಂಡ ಈ ಮ್ಯೂಸಿಕ್ ವಿಡಿಯೋ ನಿರ್ಮಿಸಿದ್ದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಮಂಗಳೂರಿನಲ್ಲಿ ಬ್ಲಿಂಕ್ ಫಿಲಂಸ್ ಹೆಸರಿನ ಸ್ವಂತ ಪ್ರೊಡಕ್ಷನ್ ಸಂಸ್ಥೆ ನಡೆಸುತ್ತಿರುವ ವಿವೇಕ್ ಅವರು ಮ್ಯೂಸಿಕ್ ವಿಡಿಯೋ ನಿರ್ದೇಶನ, ಸಿನಿಮೆಟೊಗ್ರಫಿ ಮತ್ತು ಎಡಿಟಿಂಗ್ ಮಾಡಿದ್ದಾರೆ. ಸಹ ನಿರ್ದೇಶನ ನೆಲ್ಸನ್ ಸಿಕ್ವೆರಾ, ಸಂಗೀತ ಪ್ರಸಾದ್ ಕೆ. ಶೆಟ್ಟಿ, ಗೀತ ರಚನೆ ಅರ್ಜುನ್ ಲೂಯಿಸ್, ಕಲರಿಸ್ಟ್ ಸುಮಂತ್ ಸುವರ್ಣ ಸೇರಿದಂತೆ ದೊಡ್ಡ ತಂಡ ಈ ಮ್ಯೂಸಿಕ್ ವಿಡಿಯೋ ಹಿಂದೆ ಕಾರ್ಯ ನಿರ್ವಹಿಸಿದೆ.

ಪ್ರೀತಿ ಮತ್ತು ಬದುಕಿನ ಸಮ್ಮಿಲನ ಎನ್ನುವುದು ಈ ಮ್ಯೂಸಿಕ್ ವಿಡಿಯೋದ ಸ್ಲೋಗನ್ ಆಗಿದೆ. ನಾಯಕನಿಗೆ ರಸ್ತೆ ಬದಿ ಸಿಗುವ ಅನಾಥ ನಾಯಿ ಮರಿ ಮುಂದೆ ನಾಯಕನಿಗೆ ಮ್ಯಾಚ್ ಆಗುವ ಹುಡುಗಿಯನ್ನು ಭೇಟಿಯಾಗುವಲ್ಲಿ ಹೇಗೆ ಪ್ರಮುಖ ಪಾತ್ರವಹಿಸುತ್ತದೆ ಎನ್ನುವುದನ್ನು ಇಲ್ಲಿ ಹೇಳಲಾಗಿದೆ.

ಹಾಡಿಗೆ ಇಂಡಿಯನ್ ಐಡಲ್ ಸಂಗೀತ ರಿಯಾಲಿಟಿ ಶೋ ಮೂಲಕ ದೇಶಾದ್ಯಂತ ಮನೆಮಾತಾಗಿರುವ ಕನ್ನಡಿಗ ನಿಹಾಲ್ ತಾವ್ರೊ ಧ್ವನಿ ನೀಡಿದ್ದಾರೆ. ‘ಲುಂಗಿ’ ಸಿನಿಮಾದ ನಟ ಪ್ರಣವ್ ಹೆಗ್ಡೆ ಮತ್ತು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್ ನಿರೂಪಕಿ ಮಧು ಮೈಲಂಕೋಡಿ ಅವರು ವಿಡಿಯೋದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ನಾಯಿಯ ಹೆಸರು ಸಾಶಾ ಆಗಿದ್ದು, ಇದರ ಮಾಲೀಕರು ವಿವೇಕ್ ಗೌಡ ಆಗಿದ್ದಾರೆ.

ಪೂರ್ಣ ಪ್ರಮಾಣದ ಸಿನಿಮಾ ನಿರ್ಮಾಣ ಮಾಡುವುದು ಈ ತಂಡದ ಗುರಿ ಆಗಿದ್ದು, ಅದಕ್ಕಾಗಿ ಸ್ಕ್ರಿಪ್ಟ್ ಕೆಲಸ ಕೂಡಾ ಆರಂಭ ಆಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!