ಅ.24ಕ್ಕೆ ʼಸಖತ್ʼ ಟೀಸರ್ ರಿಲೀಸ್

ಗೋಲ್ಡನ್ ಸ್ಟಾರ್ ಗಣೇಶ್ ನಟನೆ, ಸಿಂಪಲ್ ಸುನಿ ನಿರ್ದೇಶನದ ಬಹುನಿರೀಕ್ಷಿತ ʼಸಖತ್ʼ ಸಿನಿಮಾದ ಟೀಸರ್ ಅಕ್ಟೋಬರ್ 24ರಂದು ಬಿಡುಗಡೆಯಾಗಲಿದೆ.

ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ನಡಿ ನಿಶಾ ವೆಂಕಟ್ ಕೋಣಂಕಿ, ಸುಪ್ರೀತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದಾರೆ.

ಈಗಾಗಲೇ ಈ ಸಿನಿಮಾ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಈ ಚಿತ್ರದಲ್ಲಿ ಕುರುಡನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕೆಲದಿನಗಳ ಹಿಂದೆ ಈ ಚಿತ್ರದ ವಿಡಿಯೋ ಸಾಂಗ್ ‘ ಪ್ರೇಮಕ್ಕೆ ಕಣ್ಣಿಲ್ಲ ‘ ಬಿಡುಗಡೆ ಆಗಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಗಣೇಶ್ ಅವರ ಮಗ ವಿಹಾನ್ ಕನ್ನಡ ಚಿತ್ರರಂಗಕ್ಕೆ ಈ ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದ ಪೋಸ್ಟರ್ ಈಗಾಗಲೇ ವೈರಲ್ ಆಗಿದೆ.

ಸಖತ್ ಸಿನಿಮಾದಲ್ಲಿ ಗಣೇಶ್ ಅವರ ಚಿಕ್ಕ ವಯಸ್ಸಿನ ಪಾತ್ರದಲ್ಲಿ ವಿಹಾನ್ ಅಭಿನಯಿಸುತ್ತಿದ್ದಾರೆ. ಅವರು ಜೂನಿಯರ್ ಬಾಲು ಆಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಜೂನಿಯರ್ ಬಾಲು ಚೆಂಡು ಹಿಡಿದಿರುವ, ಪುಟ್ಬಾಲ್ ಆಡುವ, ಓಡುವ ಫೋಟೋಗಳಿವೆ. ಬಾಲ್ಯದ ಆಟದ ಬದುಕು ಈ ಪಾತ್ರದಲ್ಲಿ ಇರುವಂತೆ ಕಾಣುತ್ತಿದೆ.

ಗಣೇಶ್ ಅಭಿಮಾನಿಗಳು ಚಿತ್ರವನ್ನು ಎದುರು ನೋಡುತ್ತಿದ್ದು, ಟೀಸರ್ ಮೂಲಕ ಚಿತ್ರದ ಮೇಕಿಂಗ್ ಅರಿಯುವ ಉತ್ಸಾಹದಲ್ಲಿದ್ದಾರೆ.
________

Be the first to comment

Leave a Reply

Your email address will not be published. Required fields are marked *

Translate »
error: Content is protected !!