10 ಲಕ್ಷ ದಾಟಿದ “ಪ್ರೇಮಂ ಪೂಜ್ಯಂ” ಟ್ರೈಲರ್ ವೀಕ್ಷಣೆ

ನೆನಪಿರಲಿ ಪ್ರೇಮ್ ನಟನೆಯ ಬಹು ನಿರೀಕ್ಷಿತ “ಪ್ರೇಮಂ ಪೂಜ್ಯಂ” ಚಿತ್ರದ ಟ್ರೈಲರ್ 10 ಲಕ್ಷ ವೀಕ್ಷಣೆ ದಾಟಿದ್ದು, ಚಿತ್ರ ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಅ. 14ರಂದು ಬಿಡುಗಡೆ ಆಗಿರುವ ಟ್ರೈಲರ್ ಅನ್ನು 37 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಕಥೆ, ಸಿನಿಮಾಟೋಗ್ರಾಫಿ, ಎಡಿಟಿಂಗ್ ಮೂಲಕ ಗಮನಸೆಳೆದಿರುವ ಚಿತ್ರ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಲವ್ಲಿ ಸ್ಟಾರ್ ಪ್ರೇಮ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಸ್ನೇಹ, ಪರಿಶುದ್ಧ ಪ್ರೇಮದ ಸುತ್ತ ಹೆಣೆದುಕೊಂಡಿದೆ.

ಸಿನಿಮಾ ಅಕ್ಟೋಬರ್ 29ರಂದು ಬೆಳ್ಳಿತೆರೆಗೆ ಬರಲಿದ್ದು ಚಿತ್ರತಂಡ ಅದಕ್ಕಾಗಿ ಸಿದ್ಧತೆ ಮಾಡಿಕೊಂಡಿದೆ.
12 ಹಾಡು ಇರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯ ಜೊತೆಗೆ ಸಂಗೀತವನ್ನೂ ಡಾ. ಬಿ. ಎಸ್. ರಾಘವೇಂದ್ರ ನೀಡಿದ್ದಾರೆ. ಪ್ರೇಮ್ ಜೊತೆಗೆ ಬೃಂದಾ ಆಚಾರ್ಯ, ಐಂದ್ರಿತಾ ರೇ, ಸಾಧು ಕೋಕಿಲ, ಮಾಸ್ಟರ್‌ ಆನಂದ್‌, ಅನು ಪ್ರಭಾಕರ್‌, ಮಾಳವಿಕಾ ಅವಿನಾಶ್‌, ನಾಗಾಭರಣ ಮುಂತಾದವರು ನಟಿಸಿದ್ದಾರೆ.

ಚಿತ್ರಕ್ಕೆ ರಕ್ಷಿತ್ ಕೆಡಂಬಾಡಿ, ಡಾ.ರಾಜ್ ಕುಮಾರ್ ಜಾನಕಿ ರಾಮನ್, ಡಾ. ರಾಘವೇಂದ್ರ ಎಸ್, ಮನೋಜ್ ಕೃಷ್ಣನ್ ಅವರು ಬಂಡವಾಳ ಹಾಕಿದ್ದಾರೆ. ನವೀನ್ ಕುಮಾರ್ ಅವರ ಛಾಯಾಗ್ರಹಣ, ಹರೀಶ್ ಕೊಮ್ಮೆ ಅವರ ಸಂಕಲನ ಈಗಾಗಲೇ ಟ್ರೈಲರ್ ಮೂಲಕ ವೀಕ್ಷಕರ ಗಮನ ಸೆಳೆದಿದೆ.

ಲವ್ ರೋಮ್ಯಾಂಟಿಕ್ ಆಗಿರುವ ಈ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು, ಪ್ರೇಕ್ಷಕರ ಕುತೂಹಲ ತಣಿಸಲು ಅ.29ರವರೆಗೆ ಕಾಯುವುದು ಅನಿವಾರ್ಯ ಆಗಿದೆ.

 

 

Be the first to comment

Leave a Reply

Your email address will not be published. Required fields are marked *

Translate »
error: Content is protected !!