ಅ.6ಕ್ಕೆ ಪ್ರೇಮಂ ಪೂಜ್ಯಂ ರಿಲಿಕಲ್ ಸಾಂಗ್ ರಿಲೀಸ್

ಸದ್ದು ಮಾಡುತ್ತಿರುವ ಲವ್ಲೀ ಸ್ಟಾರ್ ಪ್ರೇಮ್ ನಟನೆಯ ಪ್ರೇಮಂ ಪೂಜ್ಯಂ ಚಿತ್ರದ ” ನಿನ್ನ ಬಿಟ್ಟು “ವಿಡಿಯೋ ಲಿರಿಕಲ್ ಸಾಂಗ್ ಅ. 6ರಂದು ಸಂಜೆ 6 ಗಂಟೆಗೆ ಬಿಡುಗಡೆ ಆಗಲಿದೆ.

ಈ ಸಾಂಗ್ ಈ ಹಿಂದೆ ಪ್ರೀತಿಯಲ್ಲಿ ಬಿದ್ದ, ಇನ್ನು ಮುಂದೆ ಬೀಳುವವರಿಗೆ ಅನ್ವಯಿಸುತ್ತದೆ ಎಂದು ಚಿತ್ರತಂಡ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಈಗಾಗಲೆ ‘ ಸ್ನೇಹವೇ, ಸ್ನೇಹವೇ, ಮರೆಯಾಗಿ ಹೋಗುವೆಯಾ? ‘ ಲಿರಿಕಲ್ ಸಾಂಗ್ ಬಿಡುಗಡೆ ಆಗಿದ್ದು ಸಿನಿಪ್ರೇಮಿಗಳಿಂದ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಾಡನ್ನು ಸಾಧುಕೋಕಿಲಾ ಹಾಡಿದ್ದು, ಹಾಡು ಭಾವನೆಯ ಹೊಳೆಯನ್ನೇ ಹರಿಸುತ್ತಿದೆ.

ಅಕ್ಟೋಬರ್ 29ರಂದು ಬೆಳ್ಳಿತೆರೆಗೆ ಬರಲಿರುವ ಪ್ರೇಮಂ ಪೂಜ್ಯಂ ಚಿತ್ರದ ಇನ್ನೊಂದು ವಿಡಿಯೋ ಲಿರಿಕಲ್ ಸಾಂಗ್ ಯೂ ಟ್ಯೂಬ್ ನಲ್ಲಿ ಕೆಲ ದಿನಗಳ ಹಿಂದೆ ಬಿಡುಗಡೆ ಆಗಿದ್ದು ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೋ ಸಾಂಗ್ ನಲ್ಲಿ ಪ್ರೇಮ್ ಜೊತೆಗೆ ಮಾಸ್ಟರ್ ಆನಂದ್ ಕಾಣಿಸಿಕೊಂಡಿದ್ದಾರೆ. ಡಾ. ಸಂದೀಪ್ ಅವರ ಕಂಠಸಿರಿಯಲ್ಲಿ ಮೂಡಿ ಬಂದ ಈ ಹಾಡು ಸ್ನೇಹದ ಗಾಢ ಸಂಬಂಧದ ಕುರಿತಾಗಿದೆ.

ಪ್ರೇಮಂ ಪೂಜ್ಯಂ ಚಿತ್ರ ನಟ ಪ್ರೇಮ್ ಅವರ 25 ನೇ ಸಿನಿಮಾ ಆಗಿದ್ದು, ಈ ಕಾರಣದಿಂದ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈ ಚಿತ್ರಕ್ಕೆ ಡಾ. ಬಿ. ಎಸ್. ರಾಘವೇಂದ್ರ ನಿರ್ದೇಶನ ಇದೆ. ರಕ್ಷಿತ್ ಕೆಡಂಬಾಡಿ, ಡಾ.ರಾಜ್ ಕುಮಾರ್ ಜಾನಕಿ ರಾಮನ್, ಡಾ. ರಾಘವೇಂದ್ರ ಎಸ್, ಮನೋಜ್ ಕೃಷ್ಣನ್ ಅವರು ಬಂಡವಾಳ ಹಾಕಿದ್ದಾರೆ.

ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ ಇದೆ. ರೋಮ್ಯಾಂಟಿಕ್ ಜಾನರ್ ಆಗಿರುವ ಸಿನಿಮಾದಲ್ಲಿ ಪ್ರೇಮ್ ಹಲವು ಶೇಡ್ ಗಳಲ್ಲಿ ನಟಿಸುತ್ತಿದ್ದಾರೆ. ಬೃಂದಾ ಆಚಾರ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪ್ರೇಮ್ ಜೊತೆ ಐಂದ್ರಿತಾ ರೇ, ಮಾಸ್ಟರ್ ಆನಂದ್, ಮಾಳವಿಕಾ ಅವಿನಾಶ್ ಮುಂತಾದವರು ನಟಿಸಿದ್ದಾರೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!