ಜುಲೈ 29ರಂದು “ಅಧೀರ” ಟೀಸರ್ ಬಿಡುಗಡೆ

‘ಕೆಜಿಎಫ್ 2’ ಸಿನಿಮಾದ ಮುಖ್ಯ ಪಾತ್ರವಾದ ಅಧೀರನ ಪಾತ್ರದ ಟೀಸರ್ ಜುಲೈ 29ರಂದು ಬಿಡುಗಡೆ ಆಗುವ ಸಾಧ್ಯತೆ ಇದೆ.

‘ಕೆಜಿಎಫ್ 2’ ಚಿತ್ರದಲ್ಲಿ ಅಧೀರನ ಪಾತ್ರದಲ್ಲಿ ಸಂಜಯ್ ದತ್ ನಟಿಸಿದ್ದಾರೆ. ಅವರ ಹುಟ್ಟುಹಬ್ಬ ಜುಲೈ 29ಕ್ಕೆ ಇದ್ದು ಅಂದು ‘ಕೆಜಿಎಫ್ 2’ ಚಿತ್ರತಂಡ ಅಧೀರನ ಪಾತ್ರದ ಪ್ರೋಮೊ ಅಥವಾ ಟೀಸರ್ ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಬಿಡುಗಡೆ ಆಗಿರುವ ಸಿನಿಮಾದ ಟೀಸರ್‌ನಲ್ಲಿ ‘ಅಧೀರ’ ಪಾತ್ರದ ಮುಖದರ್ಶನ ಆಗಿಲ್ಲ. ಜುಲೈ 29ಕ್ಕೆ ಅಧೀರನ ಪಾತ್ರ ಪರಿಚಯಕ್ಕಾಗಿಯೇ ವಿಶೇಷ ಟೀಸರ್ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

‘ಕೆಜಿಎಫ್ 2’ ಚಿತ್ರ ಅಧೀರ v/s ರಾಕಿ ಭಾಯ್ ಕತೆ ಹೊಂದಿದೆ. ‘ಕೆಜಿಎಫ್’ ನಲ್ಲಿ ಗರುಡನನ್ನು ಚಾಕಚಕ್ಯತೆಯಿಂದ ಹೊಡೆದುರುಳಿಸಿದ ರಾಕಿ ಭಾಯ್‌ಗೆ ಎರಡನೇ ಭಾಗದಲ್ಲಿ ಅಧೀರ ಬಹಳ ದೊಡ್ಡ ಸವಾಲಾಗಲಿದ್ದಾನೆ. ಗರುಡನಿಗಿಂತ ಬಲಶಾಲಿ, ಬುದ್ಧಿವಂತ ಆಗಿರುವ ಅಧೀರನನ್ನು ರಾಕಿ ಭಾಯ್ ಸೋಲಿಸುತ್ತಾನೆ ಎನ್ನುವುದನ್ನು ಸಿನಿಮಾ ಒಳಗೊಂಡಿದೆ.
ಕೆಜಿಎಫ್ ತಂಡ ಸಿನಿಮಾ ಬಿಡುಗಡೆ ಮುಂದೂಡಿರುವುದರ ಹೊರತಾಗಿ ಬೇರೆ ಯಾವುದೇ ಸುದ್ದಿ ನೀಡಿಲ್ಲ. ಅಭಿಮಾನಿಗಳು ಚಿತ್ರ ಬಿಡುಗಡೆಯ ದಿನಾಂಕಕ್ಕೆ ಕಾಯುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!