ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಸತೀಶ್​ ನೀನಾಸಂ

ಸ್ವಪ್ರತಿಭೆಯಿಂದಲೇ Sandalwood ನಲ್ಲಿ ಸೆಲೆಬ್ರಿಟಿ ನಟನಾಗಿ ಬೆಳೆದಿರುವ ಅಪ್ಪಟ ದೇಸಿ ಪ್ರತಿಭೆ, ಅಭಿನಯ ಚತುರ ಸತೀಶ್ ನೀನಾಸಂ ಈ ಸಲವೂ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಕಳೆದ ಸಲ ಲಾಖ್​ಡೌನ್​ನಿಂದಾಗಿ ಅವರು ಬರ್ತ್​ ಡೇ ಸೆಲಬ್ರೇಷನ್​ ಇಲ್ಲ ಎಂದಿದ್ದರು. ಈ ಸಲ ಸ್ನೇಹಿತ ಸಂಚಾರಿ ವಿಜಯ್​ ಅವರನ್ನು ಕಳೆದುಕೊಂಡ ನೋವಿನಲ್ಲಿದ್ದು, ಅದಕ್ಕೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ.

ಸಂಚಾರಿ ವಿಜಯ್​ ಅವರ ಅಗಲಿಕೆಯಿಂದ ಇನ್ನೂ ಅವರ ಕುಟುಂಬದವರು ಹಾಗೂ ಸ್ನೇಹಿತರ ಬಳಗ ಹೊರ ಬಂದಿಲ್ಲ. ವಿಜಯ್​ ಅವರು ಆಸ್ಪತ್ರೆಗೆ ದಾಖಲಾದಾಗಿನಿಂದ ಅಂತ್ಯಸಂಸ್ಕಾರದ ವರೆಗೆ ಸತೀಶ್ ನೀನಾಸಂ ಜೊತೆಯಲ್ಲೇ ಇದ್ದರು.

ಸ್ನೇಹಿತನ ಅಗಲಿಕೆಯಿಂದಾಗಿ ಇನ್ನೂ ನೋವಿನಿಂದ ಹೊರ ಬಾರದ ಅವರು ಈ ಸಲ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ವಿಜಿ ಇಲ್ಲದ ಈ ಸಂದರ್ಭದಲ್ಲಿ ತುಂಬ ನೋವಿನಲ್ಲಿ ನನ್ನ ಗೆಳೆಯರ ಬಳಗವಿದೆ. ಹಾಗಾಗಿ ಈ ಸಲ ಅಂದರೆ ನಾಳೆ ನನ್ನ ಹುಟ್ಟುಹಬ್ಬದ ಆಚರಣೆ ಹಾಗೂ ಯಾವುದೇ ಸಂಭ್ರಮಗಳಿರುವುದಿಲ್ಲ ಎಂದು ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಹಂಚಿಕೊಂಡಿದ್ದಾರೆ.

ಸತೀಶ್​ ನೀನಾಸಂ ಹುಟ್ಟುಹಬ್ಬದಂದು ಅವರ ಬಹುನಿರೀಕ್ಷಿತ ಸಿನಿಮಾ ಪೆಟ್ರೋಮ್ಯಾಕ್ಸ್​ ಟೀಸರ್ ರಿಲೀಸ್ ಮಾಡಲು ನಿರ್ಧರಿಸಲಾಗಿತ್ತು. ಆದರ ಈಗ ಪೆಟ್ರೋಮ್ಯಾಕ್ಸ್​ ಟೀಸರ್​ ರಿಲೀಸ್​ ದಿನಾಂಕವನ್ನೂ ಮುಂದೂಡಲಾಗಿದೆ. ಪೆಟ್ರೋಮ್ಯಾಕ್ಸ್​ ಸಿನಿಮಾದಲ್ಲಿ ಸತೀಶ್ ನೀನಾಸಂ ಅವರಿಗೆ ಹರಿಪ್ರಿಯಾ ಅವರು ನಾಯಕಿಯಾಗಿ ನಟಿಸಿದ್ದಾರೆ.

ನಟ ಸತೀಶ್​ ನೀನಾಸಂ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ನಟ ಸತೀಶ್​ ನೀನಾಸಂ ಸದ್ಯಕ್ಕೆ ಪೆಟ್ರೋಮ್ಯಾಕ್ಸ್​ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!