ಕಿಚ್ಚನ ಬಣ್ಣದ ಬದುಕಿನ ಬೆಳ್ಳಿ ಹೆಜ್ಜೆಗೆ ಬೆಳ್ಳಿ ನಾಣ್ಯ ಬಿಡುಗಡೆ

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಮಿಂಚುತ್ತಿರುವ ಸುದೀಪ್ ನಟ , ನಿರೂಪಕ, ನಿರ್ದೇಶಕ, ನಿರ್ಮಾಪಕ, ಗಾಯಕನಾಗಿ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಈ ಸಂಭ್ರಮವನ್ನು “ಸುದೀಪ್ ಸಾಂಸ್ಕೃತಿಕ ಪರಿಷತ್ತು” ಅರ್ಥ ಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ. ಸಿನಿಮಾ ರಂಗದಲ್ಲಿ ಅನೇಕ ಮೈಲಿಗಲ್ಲುಗಳ ರೂವಾರಿಯಾಗಿರುವ ಸುದೀಪ್ ಅವರ ವೃತ್ತಿ ಜೀವನದ ಅವಿಸ್ಮರಣೆಗಾಗಿ “ಸುದೀಪ್ ಸಾಂಸ್ಕೃತಿಕ ಪರಿಷತ್ತು” ವಿಶೇಷ 25 ಗ್ರಾಮ್ ನ 1000 ಬೆಳ್ಳಿ ನಾಣ್ಯವನ್ನು ಬಿಡುಗಡೆ ಮಾಡಲಿದೆ.

ಈ ಸಂದರ್ಭದಲ್ಲಿ ಸುದೀಪ್ ರವರಿಗೆ ಉಡುಗೊರೆಯಾಗಿ 100 ಗ್ರಾಮ್ ಬೆಳ್ಳಿ ನಾಣ್ಯವನ್ನು ಸುದೀಪ್ ರವರು ಬೆಂಗಳೂರಿಗೆ ಮರಳಿದ ನಂತರ ನೀಡಲಾಗುವುದು. ಸುದೀಪ್ ಅವರ ವೃತ್ತಿ ಜೀವನದ 25 ವರ್ಷಗಳನ್ನು ಸ್ಮರಿಸುವ ಅವರ ಭಾವ ಚಿತ್ರವಿರುವ “25 ಗ್ರಾಮ್ ಬೆಳ್ಳಿ ನಾಣ್ಯಗಳನ್ನು” ಅಭಿಮಾನಿಗಳು ಸಹ ಪಡೆಯಬಹುದಾಗಿದೆ.

ಮೊನ್ನೆಯಷ್ಟೇ ಸುದೀಪ್ ತಮ್ಮ ಇಪ್ಪತ್ತೈದು ವರ್ಷದ ಸಿನಿ ಪಯಣದ ಕುರಿತು ಮಾಧ್ಯಮಗಳೊಂದಿಗೆ ದುಬೈ ಮೂಲಕವೇ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುತ್ತಾ ತಮ್ಮ ಸಿಹಿ ಕಹಿ ನೆನಪುಗಳನ್ನು ಮೆಲುಕು ಹಾಕಿದರು. ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಭದ್ರ ಚಾಪನ್ನು ಹೊಂದಿರುವಂಥ ಸುದೀಪ್ ಅವರ ಬಾಲ್ಯದ ಕನಸಾದ ಕ್ರಿಕೆಟ್ ರಂಗವು ಬೇರೆ ರೂಪದಲ್ಲಿ ಅವರ ಬಳಿ ಬಂದಿದೆ.

ಒಟ್ಟಾರೆ ಅದೃಷ್ಟ ಜೊತೆಗೆ ಶ್ರಮ ಇದ್ದರೆ ಖಂಡಿತ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಕಿಚ್ಚ ಸುದೀಪ್ ನಿದರ್ಶನ ಎಂದೇ ಹೇಳಬಹುದು. ಮನೆಯವರ ಬೆಂಬಲ , ಸ್ನೇಹಿತರ ವಿಶ್ವಾಸ ಹಾಗೂ ಅಭಿಮಾನಿಗಳ ಪ್ರೀತಿ ಕಿಚ್ಚ ಸುದೀಪ್ ಗೆ ಸದಾ ಇರಲಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!