Ek Love Ya Movie Review : ಅದ್ದೂರಿ ‘ಪ್ರೇಮ್​’ ಕಹಾನಿಯ ಮೂಲಕ ಪ್ರೇಕ್ಷಕರ ಮನ ಗೆದ್ದ ‘ಏಕ್ ಲವ್ ಯಾ’!

ಸಿನಿಮಾ: ಏಕ್​ ಲವ್​ ಯಾ

ಪಾತ್ರವರ್ಗ: ರಾಣ, ರಚಿತಾ ರಾಮ್​, ರೀಷ್ಮಾ ನಾಣಯ್ಯ, ಸುಚೇಂದ್ರ ಪ್ರಸಾದ್​, ಶಶಿಕುಮಾರ್, ಚರಣ್​ ರಾಜ್​ ಮೊದಲಾದವರು.

ನಿರ್ದೇಶನ: ‘ಜೋಗಿ’ ಪ್ರೇಮ್​

ನಿರ್ಮಾಣ: ರಕ್ಷಿತಾ ಪ್ರೇಮ್​

ಸಂಗೀತ: ಅರ್ಜುನ್​ ಜನ್ಯ

ರೇಟಿಂಗ್ ​: 4/5

ಬಹುನಿರೀಕ್ಷಿತ ‘ಜೋಗಿ’ ಪ್ರೇಮ್ ನಿರ್ದೇಶನದ, ರಕ್ಷಿತಾ ಪ್ರೇಮ್ ನಿರ್ಮಾಣದ ‘ಏಕ್ ಲವ್ ಯಾ’ ಇಂದು ರಾಜ್ಯಾಂದ್ಯಂತ ಬಿಡುಗಡೆಯಾಗಿದೆ.

ರಕ್ಷಿತಾ ಪ್ರೇಮ್ ಅವರ ಸಹೋದರ ರಾಣ ಅವರು ಮೊದಲ ಸಿನಿಮಾದಲ್ಲೇ ಮಾಸ್​ ಮತ್ತು ಕ್ಲಾಸ್ ಲುಕ್​ನಲ್ಲಿ ಮಿಂಚಿದ್ದಾರೆ. ಈ ಚಿತ್ರದಿಂದ ಅವರಿಗೆ ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆ ಹೆಚ್ಚಬಹುದು. ಈ ಮೂಲಕ, `ತಾನು ಸ್ಟಾರ್ ನಟರಿಗಷ್ಟೇ ಸ್ಟಾರ್ ಡೈರೆಕ್ಟರ್ ಅಲ್ಲ, ಸ್ಟಾರ್ ನಟರನ್ನು ಸೃಷ್ಟಿಸಬಲ್ಲ ನಿರ್ದೇಶಕ ಅನ್ನುವುದನ್ನು ಮತ್ತೆ ನಿರೂಪಿಸಿದ್ದಾರೆ.

ಹಾಗಿದ್ದರೆ ‘ಏಕ್ ಲವ್ ಯಾ’ದ ಅಸಲಿ ಕಹಾನಿ ಏನು? ಅಮರ್​ (ರಾಣ) ಬ್ರಿಲಿಯಂಟ್​ ಸ್ಟುಡೆಂಟ್​. ಆತ ಲಾ ಅಧ್ಯಯನ ಮಾಡುತ್ತಿರುತ್ತಾನೆ. ಆದರೆ, ಪ್ರೇಮ್ ಕಹಾನಿಯಿಂದಾಗಿ `ಲಾ’ಜಿಕ್ ಇಟ್ಟುಕೊಂಡೇ ಎಣ್ಣೆ ಏರಿಸುವ ಆಸಾಮಿ. ಎಣ್ಣೆ ಹೊಡೆದೇ ಕಾಲೇಜಿಗೆ ಬರುತ್ತಾನೆ. ಕಾಲೇಜ್​ ಫಂಕ್ಷನ್​ನಲ್ಲಿ ಖ್ಯಾತ ಕ್ರಿಮಿನಲ್​ ಲಾಯರ್ ವಿಶ್ವನಾಥ್​​ (ಚರಣ್​ ರಾಜ್​) ನೀಡುವ ಸಮಸ್ಯೆಯನ್ನು ಬಗೆಹರಿಸಿ, ಆ ಲಾಯರ್​ನ ಜ್ಯೂನಿಯರ್​ ಆಗಿ ಸೇರಿಕೊಳ್ಳುತ್ತಾನೆ. ಇಷ್ಟು ಬ್ರಿಲಿಯಂಟ್​ ಇರೋ ಅಮರ್​ ಈ ರೀತಿ ಕುಡಿಯೋದೇಕೆ? ಪ್ರೇಯಸಿ ಅನಿತಾಳನ್ನು (ರೀಷ್ಮಾ ನಾಣಯ್ಯ) ಕೊಲೆ ಮಾಡ್ತೀನಿ ಅಂತ ಓಡಾಡೋದು ಏಕೆ? ರಚಿತಾ ಆ ರೀತಿ ಬೋಲ್ಡ್​ ಪಾತ್ರದಲ್ಲಿ ಕಾಣಿಸಿಕೊಳ್ಳೋಕೆ ಕಾರಣವೇನು? ರಚಿತಾ-ರಾಣ ಮಧ್ಯೆ ಪ್ರೇಮ್​ ಕಹಾನಿ ನಡೆಯುತ್ತದೆಯೇ? ಎನ್ನುವ ಪ್ರಶ್ನೆಗೆ ಪ್ರಶ್ನೆ ಮತ್ತು ಗೊಂದಲಗಳಿಗೆ ಪ್ರೇಮ್, ನೀಡುವ ಸಮರ್ಥನೆಯನ್ನು ತೆರೆಯಮೇಲೆ ನೋಡಿ ಅನುಭವಿಸಿವುದೇ ಒಂದು ವಿಭಿನ್ನ ಅನುಭವ.

ಏಕ್​ ಲವ್​​ ಯಾ’ ಚಿತ್ರಕ್ಕೆ ಎರಡು ಟ್ರ್ಯಾಕ್​ ಇದೆ ಅಮರ್ ಬದುಕಿನಲ್ಲಿ ನಡೆದ ಅಪರೂಪದ ಪ್ರೇಮ ಕಥೆಯನ್ನು ಫ್ಲಾಶ್‌ಬ್ಯಾಕ್‌ನ ಮೂಲಕ ತೋರಿಸುವ ಪರಿಯೇ ಡಿಫೆರೆಂಟ್ ಆಗಿದೆ. ಪ್ರೌಢಶಾಲೆ ವಿಧ್ಯಾರ್ಥಿ ಅಮರ್, ಆ ಪ್ರಾಯದಲ್ಲೇ ಪ್ರೀತಿಯಲ್ಲಿ ಪ್ರೌಢಿಮೆಯನ್ನು ಮೆರೆಯುವಾಗಿನ ಅವರ ನಟನೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಚಿತ್ರದಲ್ಲಿನ ದೃಶ್ಯ ವೈಭವನ್ನು ಹಿರಿತೆರೆಯಲ್ಲಿ ನೋಡುವುದೇ ಹಬ್ಬ. ಇನ್ನು ಗುಡ್ಡಗಾಡಿನ ಲೊಕೇಷನ್​ಗಳಲ್ಲಿ ಸುತ್ತಿ ಬಳಸಿ ತೆರಳಿದ್ದಾರೆ. ಇಲ್ಲಿ ಸ್ವಲ್ಪ ಕಾಳಜಿ ವಹಿಸಿ ವೇಗ ಹೆಚ್ಚಿಸುವತ್ತ ನಿರ್ದೇಶಕ ‘ಜೋಗಿ’ ಪ್ರೇಮ್​ ಹೆಚ್ಚು ಗಮನ ಹರಿಸಬೇಕಿತ್ತು.

ಇನ್ನು ‘ಏಕ್​ ಲವ್​ ಯಾ’ ಚಿತ್ರದ ಮೊದಲಾರ್ಧದ ಕಥೆ ಹಿಲ್​ ಸ್ಟೇಷನ್​​ನಲ್ಲಿ ಸಾಗಿದೆ. ಹೀಗಾಗಿ, ಈ ದೃಶ್ಯ ವೈಭವ ಕಣ್ಣಿಗೆ ತಂಪೆನಿಸುತ್ತದೆ. ಈ ಸಿನಿಮಾಗಾಗಿ ತುಂಬಾನೇ ಅದ್ಭುತ ಲೊಕೇಶನ್​ಗಳನ್ನು ಆಯ್ಕೆ ಮಾಡಿದ್ದಾರೆ ಪ್ರೇಮ್​. ಈ ಸ್ಥಳಗ​ನ್ನು ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಮಹೇಂದ್ರ ಸಿಂಹ ಅವರ ಛಾಯಾಗ್ರಹಣದಿಂದ ಆಗಿದೆ. ಸದಾ ಮಂಜು ಮುಸುಕಿರುವ ಊರುಗಳು ಪ್ರೇಕ್ಷಕರಿಗೆ ಮುದ ನೀಡುತ್ತವೆ. ಇಡೀ ಸಿನಿಮಾ ರಿಚ್​ ಆಗಿ ಮೂಡಿ ಬಂದಿದೆ.

ಅಲ್ಲದೆ ಸಂಗೀತದ ಬಗ್ಗೆ ಹೇಳುವುದಾದರೆ.. ‘ಏಕ್ ಲವ್ ಯಾ’ದ ಮೂಲಕ ಪ್ರೇಮ್ ತಮ್ಮ ಹಿಂದಿನ ಚಿತ್ರಗಳ ಛಾಯೆ ಸೋಂಕದಂತೆ ಫ್ರೆಶ್ ಆದ ಸಂಗೀತ ಮತ್ತು ಹಿನ್ನಲೆ ಸಂಗೀತವನ್ನು ಅರ್ಜುನ್ ಜನ್ಯ ಅವರಿಂದ ತೆಗೆಸಿದ್ದಾರೆ. ಯೂಟ್ಯೂಬ್‌ನಲ್ಲಿ ರಿಲೀಸ್ ಆದ ಹಾಡುಗಳು ಥೀಯೇಟರ್‌ನಲ್ಲಿ ನೋಡಲು ಇನ್ನಷ್ಟು ಮುದ ನೀಡುತ್ತದೆ. ವಿಜಯ್ ಈಶ್ವರ್, ಶರಣ್‌ಕುಮಾರ್ ಗಜೇಂದ್ರಗಢ, ಮಂಜುನಾಥ್ ಮತ್ತು ಪ್ರೇಮ್ ಅವರ ಸಾಹಿತ್ಯ ಚಿತ್ರದ ಕತೆಗೆ ಪೂರಕವಾಗಿದೆ.

ನಟನೆಯ ವಿಚಾರಕ್ಕೆ ಬರೋದಾರೆ. ರಾಣ ಅವರು ಮೊದಲ ಸಿನಿಮಾದಲ್ಲೇ ಮಾಸ್​ ಮತ್ತು ಕ್ಲಾಸ್ ಲುಕ್​ನಲ್ಲಿ ಮಿಂಚಿದ್ದಾರೆ. ಈ ಚಿತ್ರದಿಂದ ಅವರಿಗೆ ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆ ಹೆಚ್ಚಬಹುದು. ಕೆಲ ರಿಸ್ಕಿ ಫೈಟ್​ಗಳನ್ನು ಮಾಡಿ ಗಮನ ಸೆಳೆದಿದ್ದಾರೆ.​ ಬೋಲ್ಡ್​ ಲುಕ್​ನಲ್ಲಿ ಮಿಂಚಿರೋ ರಚಿತಾ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಅವರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರೀಷ್ಮಾ ನಾಣಯ್ಯ, ಸುಚೇಂದ್ರ ಪ್ರಸಾದ್​, ಕಾಕ್ರೋಚ್​ ಸುಧಿ, ಯಶ್​ ಶೆಟ್ಟಿ, ಹೀರೋನ ಗೆಳೆಯರ ಪಾತ್ರ ಮಾಡಿದವರ ನಟನೆ ಉತ್ತಮವಾಗಿದೆ. ಹೀರೋನ ತಂದೆಯಾಗಿ ಶಶಿಕುಮಾರ್​ ಗಮನ ಸೆಳೆಯುತ್ತಾರೆ. ಖಡಕ್​ ಲಾಯರ್​ ಆಗಿರೋ ಚರಣ್​ ರಾಜ್​ ಅವರು ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತಾರೆ. ಈ ಚಿತ್ರಕ್ಕೆ ವಿಲನ್​ ಯಾರು ಅನ್ನೋದು ಸಸ್ಪೆನ್ಸ್. ಕ್ಲೈಮ್ಯಾಕ್ಸ್​ನಲ್ಲಿ ಈ ರಹಸ್ಯ ಬಯಲಾಗುತ್ತದೆ.

ಈ ಹಿಂದೆ, ಜೋಗಿ ಪ್ರೇಮ್ ಅವರು ತಾಯಿ ಸೆಂಟಿಮೆಂಟ್ ಸಿನಿಮಾ ಮೂಲಕ ಹಿಟ್ ಚಿತ್ರಗಳನ್ನು ಕೊಟ್ಟವರು. ಆದರೆ, ಈ ಬಾರಿ ಅವರು ತಾಯಿ ಸೆಂಟಿಮೆಂಟ್ ಹಿಂದೆ ಹೋಗದೆ ಬರೆಯದೇ ಕಥೆಗಳ ಮೂಲಕ, ಪ್ರೇಮ್ ತಮ್ಮ `ಫ್ರೇಮ್’ನಿಂದ ತಾವೇ ಹೊರಬಂದು ಕ್ರಿಯಾತ್ಮಕ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಕಥೆಯಲ್ಲಿನ ಗಟ್ಟಿತನ, ಹೊಸತನ ಚಿತ್ರದ ಬಹುದೊಡ್ಡ ಪ್ಲಸ್ ಪಾಯಿಂಟ್. ಚಿತ್ರದ ಆರಂಭದಲ್ಲಿನ ಡಬಲ್ ಮೀನಿಂಗ್ ಡೈಲಾಗ್ಗಳು, ಕೆಲ ದೃಶ್ಯಗಳು ಮುಜುಗರ ಅನ್ನಿಸಿದರೂ, ಚಿತ್ರದ ಸೆಕೆಂಡ್ ಹಾಫ್‌ನಲ್ಲಿ ಅವೆಲ್ಲಾ ಸಿಲ್ಲಿ ಅನ್ನಿಸಿ ಚಿತ್ರದ ಕತೆಯಷ್ಟೇ ಮನಸ್ಸಿಗೆ ನಾಟುತ್ತದೆ. ಒಟ್ಟಿನಲ್ಲಿ, ಬಹಳ ದಿನಗಳನಂತರ ‘ಏಕ್ ಲವ್ ಯಾ’ದ ಮೂಲಕ ಮತ್ತೆ ಕನ್ನಡ ಚಿತ್ರಗಳ ಸುವರ್ಣಯುಗ ಅರಂಭವಾಗುತ್ತಾ ಕಾದುನೋಡಬೇಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!