‘ಗಂಗೂಬಾಯಿ ಕಾಠಿಯಾವಾಡಿ’ ಸಿನೆಮಾ ನೋಡಿದ ಸೆಲೆಬ್ರಿಟಿಗಳ ವಿಮರ್ಶೆ

ಸಿನೆಮಾ : ಗಂಗೂಬಾಯಿ ಕಾಠಿಯಾವಾಡಿ

ಪಾತ್ರವರ್ಗ : ಅಲಿಯಾ ಭಟ್‌, ಸೀಮಾ ಫಹ್ವಾ, ಅಜಯ್‌ ದೇವಗನ್‌, ಹುಮಾ ಖುರೇಷಿ ಮೊದಲಾದವರು

ನಿರ್ಮಾಣ : ಸಂಜಯ್​ ಲೀಲಾ ಬನ್ಸಾಲಿ

ನಿರ್ದೇಶಕ : ಜಯಂತಿಲಾಲ್ ಗಡಾ

ರೇಟಿಂಗ್ : 4/5

ಸಂಜಯ್​ ಲೀಲಾ ಬನ್ಸಾಲಿ ನಾಲ್ಕು ವರ್ಷದ ಬಳಿಕ ನಿಮಾರ್ಣದ, ಜಯಂತಿಲಾಲ್ ಗಡಾ ನಿರ್ದೇಶನದ ಹಾಗೂ ಅಲಿಯಾ ಭಟ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರವು ಇಂದು ಅದ್ದೂರಿಯಾಗಿ ತೆರೆಕಂಡಿದೆ

ಈ ಸಿನಿಮಾ ಬಿಡುಗಡೆ ಆಗುವುದಕ್ಕೂ ಮುನ್ನವೇ ಸೆಲೆಬ್ರಿಟಿಗಳಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಸಿನಿಮಾ ಕಣ್ತುಂಬಿಕೊಂಡ ಬಾಲಿವುಡ್​ ಸೆಲೆಬ್ರಿಟಿಗಳು ಮನಸಾರೆ ಹೊಗಳಿದ್ದಾರೆ. ಇದರಿಂದ ಚಿತ್ರತಂಡಕ್ಕೆ ದೊಡ್ಡ ಬಲ ಸಿಕ್ಕಂತಾಗಿದೆ. ಇನ್ನು ಆಲಿಯಾ ನಟನೆ ಹೇಗಿದೆ? ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಅವರು ಈ ಬಾರಿ ಏನು ಮೋಡಿ ಮಾಡಿದ್ದಾರೆ? ಈ ಕುರಿತು ಬಾಲಿವುಡ್​ ಸೆಲೆಬ್ರಿಟಿಗಳು ಮಾತನಾಡಿದ್ದಾರೆ.

ಬಾಲಿವುಡ್​ ಸೆಲೆಬ್ರಿಟಿಗಳಾದ ರಿತೇಶ್​ ದೇಶಮುಖ್​, ವಿಕ್ಕಿ ಕೌಶಲ್​, ಶಶಾಂತ್​ ಕೈತಾನ್​, ರಿದ್ಧಿಮಾ ಕಪೂರ್​ ಮುಂತಾದವರು ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ವೀಕ್ಷಿಸಿದ್ದು. ಎಲ್ಲರಿಗೂ ಈ ಚಿತ್ರ ಇಷ್ಟ ಆಗಿದೆ. ಈ ಸಿನಿಮಾವನ್ನು ಕಟ್ಟಿಕೊಡುವಲ್ಲಿ ತೋರಿದ ಬುದ್ಧಿವಂತಿಕೆ ಕಂಡು ನಾನು ಬೆರಗಾದೆ. ಸಂಜಯ್​ ಲೀನಾ ಬನ್ಸಾಲಿ ಸರ್​.. ನೀವು ಮಾಸ್ಟರ್​! ಆಲಿಯಾ ಭಟ್​ ಬಗ್ಗೆ ಏನು ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ. ಗಂಗೂಬಾಯಿ ಪಾತ್ರದಲ್ಲಿ ಆಲಿಯಾ ನಟನೆ ಅಮೇಜಿಂಗ್​. ನಿಮಗೆ ಹ್ಯಾಟ್ಸ್​ಆಫ್​. ದೊಡ್ಡ ಪರದೆಯ ಮ್ಯಾಜಿಕ್​ ಇದು. ಈ ಸಿನಿಮಾವನ್ನು ಯಾರೂ ಮಿಸ್​ ಮಾಡಿಕೊಳ್ಳಬೇಡಿ’ ಎಂದು ವಿಕ್ಕಿ ಕೌಶಲ್​ ಹೇಳಿದ್ದಾರೆ.

ನಟ ರಿತೇಶ್​ ದೇಶಮುಖ್​ ಅವರಿಗೂ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ತುಂಬ ಇಷ್ಟ ಆಗಿದ್ದು. ಇದೊಂದು ಮ್ಯಾಜಿಕಲ್​ ಅನುಭವ. ಸಿನಿಮಾದ ಕಥೆಯನ್ನು ಬರೆಯುವುದರಲ್ಲಿ ಸಂಜಯ್​ ಲೀಲಾ ಬನ್ಸಾಲಿ ಅವರು ನಿಜವಾದ ಮಾಸ್ಟರ್​. ಸಿನಿಮಾದ ಪ್ರತಿಯೊಂದು ಲೊಕೇಷನ್​ ಕೂಡ ಪರ್ಫೆಕ್ಟ್​ ಆಗಿದೆ. ಗಂಗೂಬಾಯಿ ಪಾತ್ರದಲ್ಲಿ ಆಲಿಯಾ ಭಟ್​ ಅವರ ನಟನೆ ಅದ್ಭುತ ಎಂದು ರಿತೇಶ್​ ದೇಶಮುಖ್​ ಟ್ವೀಟ್​ ಮಾಡಿದ್ದಾರೆ.

ಇನ್ನು ಖ್ಯಾತ ನಿರ್ದೇಶಕ ಶಶಾಂಕ್​ ಕೈತಾನ್​ ಅವರು ಆಲಿಯಾ ಭಟ್​ ಅಭಿನಯವನ್ನು ಕೊಂಡಾಡಿದ್ದಾರೆ. ಶಕ್ತಿ, ಸಂಪತ್ತು, ಸದ್ಬುದ್ಧಿ ಮತ್ತು ಪ್ರತಿಭೆ ಈ ಹುಡುಗಿಯ ಬಳಿ ಇದೆ ಎಂದು ಅವರು ಹೇಳಿದ್ದಾರೆ.

ಮುಂಬೈನ ಕಾಮಾಟಿಪುರದ ವೇಶ್ಯೆಯರು ಹಾಗೂ ಅವರ ಮಕ್ಕಳ ಹಕ್ಕುಗಳಿಗಾಗಿ ಹೋರಾಡುವ ಗಂಗೂಬಾಯಿಯ ಜೀವನವನ್ನು ಆಧರಿಸಿ ಚಿತ್ರವನ್ನು ತಯಾರಿಸಲಾಗಿದೆ. ಈ ಚಿತ್ರದಲ್ಲಿ ಸೀಮಾ ಫಹ್ವಾ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅತಿಥಿ ಪಾತ್ರದಲ್ಲಿ ನಟ ಅಜಯ್‌ ದೇವಗನ್‌ ಮತ್ತು ಹುಮಾ ಖುರೇಷಿ ಕಾಣಿಸಿಕೊಂಡಿದ್ದಾರೆ.

ಇನ್ನು ಚಿತ್ರ ಬಿಡುಗಡೆಗು ಮೊದಲು ಭನ್ಸಾಲಿ ಪ್ರೊಡಕ್ಷನ್ಸ್ ಗೆ ಸಿನಿಮಾ ಬಿಡುಗಡೆ ಮಾಡದಂತೆ ತಡೆ ನೀಡಬೇಕೆಂದು ಅರ್ಜಿಯಲ್ಲಿ ಗಂಗೂಬಾಯಿ ಅವರ ದತ್ತುಪುತ್ರ ಮನವಿ ಮಾಡಿದ್ದರು. ಗಂಗೂಬಾಯಿ ಅವರ ದತ್ತು ಪುತ್ರ ಬಾಬುಜೀ ರಾವ್ ಜಿ ಶಾ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಇಂದಿರಾ ಬ್ಯಾನರ್ಜಿ ಹಾಗೂ ಜೆ.ಕೆ ಮಹೇಶ್ವರಿ ಅವರಿದ್ದ ಪೀಠವು ಬುಧವಾರದಂದು ವಿಚಾರಣೆ ನಡೆಸಿತ್ತು.

ಸಿನಿಮಾಗೆ 7 ತಿಂಗಳಿಗಿಂತಲೂ ಹೆಚ್ಚಿನ ಕಾಲ ಪ್ರಚಾರ ನಡೆಸಿದೆ, ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳಿರುವಾಗ ಶೀರ್ಷಿಕೆ ಬದಲಾವಣೆ ಮಾಡುವುದಕ್ಕೆ ಅಸಾಧ್ಯ, ಅಲ್ಲದೆ ಸಮಾಜಿಕ ಜಾಲತಾಣದಲ್ಲಿ ಸಿನಿಮಾ ಪರ ಪ್ರಚಾರ ನಡೆಸಲಾಗಿದೆ. ಸಿನಿಮಾ ಅವಹೇಳನಕಾರಿಯಾಗಿಲ್ಲ. ಬದಲಾಗಿ ಗಂಗೂಬಾಯಿ ಅವರನ್ನು ವೈಭವೀಕರಿಸಲಾಗಿದೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಿಸಿತ್ತು.‌‌

 

Be the first to comment

Leave a Reply

Your email address will not be published. Required fields are marked *

Translate »
error: Content is protected !!