ಯಶ್ ಅಭಿನಯದ ನರ್ತನ್ ನಿರ್ದೇಶನದ ಚಿತ್ರ ಜೂನ್ 3 ರಂದು ಅನೌನ್ಸ್ ಆಗಲಿದೆ ಎಂದು ತಿಳಿದು ಬಂದಿದೆ.
ಜೂನ್ 3ರಂದು ಕೆಜಿಎಫ್ 2 ಬಿಡುಗಡೆ ಆಗಿ 50 ದಿನ ಆಗಲಿದೆ. ಈ ಖುಷಿಯಲ್ಲಿ ಯಶ್ ಅಭಿನಯದ ಹೊಸ ಸಿನಿಮಾ ಅನೌನ್ಸ್ ಆಗಲಿದೆ ಎನ್ನಲಾಗಿದೆ. ಯಶ್ 19 ನೇ ಸಿನಿಮಾವನ್ನು ಮಫ್ತಿ ಸಿನಿಮಾ ಖ್ಯಾತಿಯ ನರ್ತನ್ ನಿರ್ದೇಶನ ಮಾಡಲಿದ್ದಾರೆ. ಚಿತ್ರಕ್ಕೆ ಝೀ ಸ್ಟುಡಿಯೋಸ್ ಹಾಗೂ ಕೆವಿಎನ್ ಸಂಸ್ಥೆ ಬಂಡವಾಳ ಹಾಕಲಿದೆ ಎನ್ನಲಾಗಿದೆ.
ಈಗಾಗಲೇ ನಿರ್ಮಾಣದ ಎಲ್ಲಾ ತಯಾರಿ ನಡೆದಿದೆ. ಸದ್ಯ ಚಿತ್ರ ಅನೌನ್ಸ್ ಮಾಡಿ ಶೂಟಿಂಗ್ ಶುರು ಮಾಡುವುದಷ್ಟೇ ಬಾಕಿ ಇದೆ.
ಕೆಜಿಎಫ್ 2 ಬಳಿಕ ಯಶ್ ಅಭಿಮಾನಿಗಳು ಮುಂದಿನ ಸಿನಿಮಾ ಯಾವಾಗ ಅನೌನ್ಸ್ ಆಗುತ್ತದೆ ಎಂದು ಕಾಯುತ್ತಿದ್ದಾರೆ. ಈಗ ಅದಕ್ಕೆ ಮುಹೂರ್ತ ಕೂಡಿ ಬಂದಿದೆ ಎಂದು ಹೇಳಲಾಗುತ್ತಿದೆ.
ಕಳೆದ ಎಂಟು ವರ್ಷದಿಂದ ಒಂದೇ ಲುಕ್ ನಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಯಶ್ ಅಭಿಮಾನಿಗಳು ಹೊಸ ಸಿನಿಮಾವನ್ನು ಹೊಸ ಅವತಾರದಲ್ಲಿ ನೋಡಲು ಕಾತರರಾಗಿದ್ದಾರೆ.
____






Be the first to comment