ಮೂರು ಮುದ್ದು ಮನಸುಗಳ’ಯಾನ’ಟ್ರೇಲರ್

ಆಕ್ಮೆ ಮೂವೀಸ್ ಇಂಟರ್ ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಹರೀಶ್ ಶೇರೆಗಾರ್ ನಿರ್ಮಿಸುತ್ತಿರುವ ಚಿತ್ರಕ್ಕೆ ಸ್ವತಃ ವಿಜಯಲಕ್ಷ್ಮಿ ಸಿಂಗ್ ಆಕ್ಷನ್ ಕಟ್ ಹೇಳಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿದ್ದು, ಹಿರಿಯ ಕಲಾವಿದರಾದ ಜೈಜಗದೀಶ್ ಹಾಗೂ ವಿಜಯಲಕ್ಷ್ಮಿ ಸಿಂಗ್ ದಂಪತಿಯ ಮೂವರು ಪುತ್ರಿಯರ  ವೈನಿಧಿ,ವೈಭವಿ, ವೈಸಿರಿಗೆ ಶುಭ ಕೋರಿದ್ದಾರೆ “ನಾಲ್ಕು ವರ್ಷಗಳ ಹಿಂದೆ ರೆಬೆಲ್ ಸ್ಟಾರ್ ಅಂಬರೀಶ್ ಈ ಚಿತ್ರಕ್ಕೆ ಕ್ಲಾಪ್ ಮಾಡಿದ್ದರು. ಇಂದು ಅವರು ಇದ್ದಿದ್ದರೆ ಟ್ರೇಲರ್ ಬಿಡುಗಡೆಯ ಕಾರ್ಯಕ್ರಮ ಬೇರೆಯದೇ ಸ್ವರೂಪ ಪಡೆದುಕೊಳ್ಳುತ್ತಿತ್ತು” ಎಂದು ಯಶ್ ತಿಳಿಸಿದರು.

ಚಿತ್ರ ‘ಯಾನ’ ಜುಲೈ 12ರಂದು ತೆರೆಕಾಣಲಿದೆ.

This Article Has 1 Comment
  1. Pingback: plumbing contractor Ashley Heights NC

Leave a Reply

Your email address will not be published. Required fields are marked *

Translate »
error: Content is protected !!