ಅಮೃತಾ ರಾಮಮೂರ್ತಿ ಸೀರಿಯಲ್ ಬಿಟ್ಟಿದ್ದೇಕೆ?

ವಿಲನ್ ಪಾತ್ರಗಳ ಮೂಲಕ ಗುರುತಿಸಿಕೊಂಡ ಅಮೃತಾ ರಾಮಮೂರ್ತಿ ಅವರು ಜನಪ್ರಿಯ ಧಾರಾವಾಹಿ ತೊರೆದಿರುವುದಕ್ಕೆ ಶಾಕ್ ಆಗುವ ಕಾರಣ ನೀಡಿದ್ದಾರೆ.

ಸಂದರ್ಶನ ಒಂದರಲ್ಲಿ ಮಾತನಾಡಿರುವ ಅವರು, “ಆ ಧಾರಾವಾಹಿಯ ಸೆಟ್ ಸಂಪೂರ್ಣ ಅಸ್ತವ್ಯಸ್ಥವಾಗಿತ್ತು. ಮೂಲಭೂತ ಸೌಲಭ್ಯಗಳೇ ಇರಲಿಲ್ಲ. ಹೆಣ್ಣುಮಕ್ಕಳಿಗೆ ಪ್ರತ್ಯೇಕ ಬಾತ್ರೂಂ ಕೇಳಿದರೂ ಕೊಡಲಿಲ್ಲ” ಎಂದು ಗಂಭೀರ ಆರೋಪ ಮಾಡಿದ್ದಾರೆ.

ಆದರೆ ಅವರು ಯಾವ ಧಾರಾವಾಹಿ ಬಗ್ಗೆ ಹೇಳಿದ್ದಾರೆ ಎಂದು ಹೆಸರು ಹೇಳಿಲ್ಲ. ಹಲವರು ಇದು ಆಸೆ ಧಾರಾವಾಹಿ ಇರಬಹುದು ಎಂದು ಅಂದಾಜು ಮಾಡಿದ್ದಾರೆ.

ಸೆಟ್‌ನಲ್ಲಿ ಕಂಫರ್ಟ್ ಇಲ್ಲದ ಕಾರಣ ಹಾಗೂ ವೈಯಕ್ತಿಕ ಒತ್ತಡದಿಂದ ಆ ಧಾರಾವಾಹಿ ತೊರೆಯುವ ನಿರ್ಧಾರ ತೆಗೆದುಕೊಂಡೆ ಎಂದು ಅವರು ತಿಳಿಸಿದ್ದಾರೆ.

“ಜನರು ನನ್ನನ್ನು ನಿಜ ಜೀವನದಲ್ಲೂ ವಿಲನ್ ಪಾತ್ರದ ರೀತಿಯಾಗಿ ನೋಡಲು ಆರಂಭಿಸಿದರು. ನನ್ನ ಮಗುವಿನ ಎದುರೇ ಈ ಬಗ್ಗೆ ಪ್ರಶ್ನೆ ಕೇಳಿ ಬೇಸರ ತಂದಿದ್ದಾರೆ” ಎಂದು ಅವರು ಹೇಳಿದ್ದಾರೆ.
_

Be the first to comment

Leave a Reply

Your email address will not be published. Required fields are marked *

Translate »
error: Content is protected !!