ಧೈರ್ಯಂ ಸರ್ವತ್ರ ಸಾಧನಂ ಚಿತ್ರದ ನಾಯಕ ನಟ ವಿವಾನ್ ಕೆಕೆ ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಧೈರ್ಯಂ ಸರ್ವತ್ರ ಸಾಧನಂ ಚಿತ್ರ ಫೆಬ್ರವರಿ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲಕ ಭರವಸೆಯ ನಟನಾಗಿ ನೆಲೆಯೂರುವ ವಿಶ್ವಾಸವನ್ನು ವಿವಾನ್ ಹೊಂದಿದ್ದಾರೆ.
ಇವರು ಮೂಲತಃ ಕೋಲಾರದವರು. ಇವರ ತಂದೆ ಉದ್ಯಮಿ. ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗದ ಬಳಿಕ ಚಿತ್ರರಂಗದ ಕಡೆಗೆ ಆಕರ್ಷಣೆಗೊಂಡು ಕಳೆದ ನಾಲ್ಕು ವರ್ಷದಿಂದ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಭಿನಯ, ನೃತ್ಯ, ಸಾಹಸ ವಿಭಾಗಗಳಲ್ಲಿ ಪರಿಣತಿಯನ್ನು ಪಡೆದಿದ್ದಾರೆ. ಧೈರ್ಯಂ ಸರ್ವತ್ರ ಸಾಧನಂ ಚಿತ್ರದ ನಿರ್ದೇಶಕರು ಪರಿಚಯಗೊಂಡ ಬಳಿಕ ಸಿನಿಮಾದ ಪಾತ್ರಕ್ಕಾಗಿ ಶೂಟಿಂಗ್ ಲೊಕೇಶನ್ ನಲ್ಲಿ ಐದು ತಿಂಗಳುಗಳ ಕಾಲ ವಾಸ ಇದ್ದು ತಯಾರಿ ನಡೆಸಿದ್ದಾರೆ. ಕೊಟ್ಟಿಗೆಯಲ್ಲಿ ಹಸುಗಳ ಕಸ ಗುಡಿಸಿ, ಮೇಕೆ ಮೇಯಿಸುವುದು, ಕಾಡಿನಲ್ಲಿ ರಾತ್ರಿ ಹೊತ್ತು ಪ್ರಾಣಿಗಳನ್ನು ನೋಡಲು ಹೋಗುವುದು ಈ ರೀತಿ ಚಿತ್ರಕ್ಕಾಗಿ ತಯಾರಿ ನಡೆಸಿದ್ದಾರೆ. ಶೂಟಿಂಗ್ ವೇಳೆ ವಿಷಕಾರಿ ಹಾವುಗಳಿಂದ ಪಾರಾಗಿರುವುದಾಗಿ ವಿವಾನ್ ಹೇಳಿದ್ದಾರೆ.
ಧೈರ್ಯಂ ಸರ್ವತ್ರ ಸಾಧನಂ ಚಿತ್ರವನ್ನು ಕನ್ನಡ ಪ್ರೇಕ್ಷಕರು ಮೆಚ್ಚುವ ವಿಶ್ವಾಸದಲ್ಲಿ ವಿವಾನ್ ಇದ್ದಾರೆ.
___


Be the first to comment