ಸಾಯಿ ಧನ್ಶಿಕಾ ಜೊತೆ ವಿಶಾಲ್ ನಿಶ್ಚಿತಾರ್ಥ

ನಟ ವಿಶಾಲ್ ನಟಿ ಸಾಯಿ ಧನ್ಶಿಕಾ ಅವರೊಂದಿಗೆ ನಿಶ್ಚಿತಾರ್ಥ   ಮಾಡಿಕೊಂಡಿದ್ದಾರೆ.

ಆಪ್ತ ಸ್ನೇಹಿತರು ಮತ್ತು ಕುಟುಂಬದ ಸಮ್ಮುಖದಲ್ಲಿ ಇಬ್ಬರು ಉಂಗುರ ಬದಲಿಸಿಕೊಂಡಿದ್ದಾರೆ. ನಟಿ ಸಾಯಿ ಧನ್ಶಿಕಾ ಅವರ ಯೋಗಿ ಡಾ ಚಿತ್ರದ ಪತ್ರಿಕಾಗೋಷ್ಠಿಗೆ   ಆಗಮಿಸಿದ್ದ ನಟ ವಿಶಾಲ್, ತಾವು ಬಹಳ ದಿನಗಳಿಂದ ಸಂಬಂಧದಲ್ಲಿದ್ದು, ಶೀಘ್ರದಲ್ಲೇ ಆ ಬಗ್ಗೆ ಮಾಹಿತಿ ನೀಡುವುದಾಗಿ ಘೋಷಿಸಿದ್ದರು.

ರಂಭದಲ್ಲಿ ವಿಶಾಲ್ ಅವರ ಜನ್ಮದಿನವಾದ ಆಗಸ್ಟ್ 29 ರಂದು ವಿವಾಹವಾಗಲು ಯೋಜಿಸಲಾಗಿತ್ತು. ನಾಡಿಗರ್ ಸಂಗಮ್‌ನ ಪ್ರಧಾನ ಕಾರ್ಯದರ್ಶಿ ವಿಶಾಲ್, ಹೊಸ ಕಟ್ಟಡ ಉದ್ಘಾಟನೆಯ ನಂತರವೇ ಮದುವೆಯಾಗಲು ಬಯಸುವುದಾಗಿ ಹೇಳಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿಶಾಲ್, ‘ನನ್ನ ಹುಟ್ಟುಹಬ್ಬದಂದು ನನಗೆ ಶುಭ ಹಾರೈಸಿ ಆಶೀರ್ವದಿಸಿದ್ದಕ್ಕಾಗಿ ವಿಶ್ವದ ಮೂಲೆ ಮೂಲೆಯಿಂದ ಬಂದ ನಿಮ್ಮೆಲ್ಲರಿಗೂ   ಧನ್ಯವಾದಗಳು. ಇಂದು ಸಾಯಿ ಧನ್ಶಿಕಾ ಅವರೊಂದಿಗೆ ನಡೆದ ನನ್ನ ನಿಶ್ಚಿತಾರ್ಥದ ಶುಭ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತೋಷವಾಗಿದೆ. ಸಕಾರಾತ್ಮಕ ಮತ್ತು ಆಶೀರ್ವಾದದ ಭಾವನೆ ಇದೆ. ಎಂದಿನಂತೆ ನಿಮ್ಮ ಆಶೀರ್ವಾದ ಮತ್ತು ಉತ್ತಮ ಭಾವನೆಗಳನ್ನು ಬಯಸುತ್ತೇನೆ’ ಎಂದು ಬರೆದಿದ್ದಾರೆ. ವಿಶಾಲ್  ನಿಶ್ಚಿತಾರ್ಥದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!