‘ವಿದ್ಯಾಪತಿ’ ನಾಯಕಿ ಮಲೈಕಾ ವಸುಪಾಲ್

‘ಉಪಾಧ್ಯಕ್ಷ’ದ ಮೂಲಕ ಚಂದನವನದ ಪಯಣ ಆರಂಭಿಸಿದ ಮಲೈಕಾ ಟಿ. ವಸುಪಾಲ್,  ನಾಗಭೂಷಣ್‌ ನಟನೆಯ ‘ವಿದ್ಯಾಪತಿ’ ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ.

‘ಹಿಟ್ಲರ್‌ ಕಲ್ಯಾಣ’ ಧಾರಾವಾಹಿಯಲ್ಲಿ ಮಿಂಚಿದ ದಾವಣಗೆರೆಯ ಮಲೈಕಾ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ತಿಂಗಳು ಸಿನಿಮಾದ ಚಿತ್ರೀಕರಣದಲ್ಲಿ ಮಲೈಕಾ ಭಾಗಿಯಾಗಲಿದ್ದಾರೆ.

ಡಾಲಿ’ ಧನಂಜಯ ತಮ್ಮ ಡಾಲಿ ಪಿಕ್ಚರ್ಸ್ ಮೂಲಕ ‘ವಿದ್ಯಾಪತಿ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಕರಾಟೆ ಕಿಂಗ್‌ ಆಗಿ ನಾಗಭೂಷಣ್‌ ಕಾಣಿಸಿಕೊಳ್ಳಲಿದ್ದಾರೆ. ಮಲೈಕಾ ‘ವಿದ್ಯಾ’ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು, ಸರಳ ವ್ಯಕ್ತಿತ್ವದ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

‘ವಿದ್ಯಾಪತಿ’ ಡಾಲಿ ಪಿಕ್ಚರ್ಸ್‌ನ 4ನೇ ಸಿನಿಮಾವಾಗಿದೆ. ಈ ಹಿಂದೆ ನಾಗಭೂಷಣ್‌ ನಟನೆಯ ‘ಇಕ್ಕಟ್‌’ ಸಿನಿಮಾ ನಿರ್ದೇಶಿಸಿದ್ದ ಇಶಾಂ ಖಾನ್‌ ಹಾಗೂ ಹಸೀಂ ಖಾನ್‌ ‘ವಿದ್ಯಾಪತಿ’ ಸಿನಿಮಾದ ಸಾರಥಿಗಳಾಗಿದ್ದಾರೆ. ಈ ಚಿತ್ರದ ಸಂಕಲನದ ಜವಾಬ್ದಾರಿಯನ್ನೂ ಅವರು ಹೊತ್ತುಕೊಂಡಿದ್ದಾರೆ.

ಆಕ್ಷನ್ ಕಾಮಿಡಿ ಕಥಾಹಂದರ ಹೊಂದಿರುವ ‘ವಿದ್ಯಾಪತಿ’ ಚಿತ್ರಕ್ಕೆ ಲವಿತ್ ಛಾಯಾಗ್ರಹಣವಿದೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!