ಉದಯ ಟಿವಿಯುಯಲ್ಲಿ ಹೊಸ ಷೋ “ತುತ್ತಾ ಮುತ್ತಾ”

ಕರ್ನಾಟಕದ ಹೆಮ್ಮೆಯ ವಾಹಿನಿಯಾದ ಉದಯ ಟಿವಿಯು ಹೊಸದೊಂದು ಕಾರ್ಯಕ್ರಮವನ್ನು ಜನತೆಗೆ ಪರಿಚಯಿಸಲು ಸಜ್ಜಾಗಿದೆ. ಉದಯ ವಾಹಿನಿಯ ಹತ್ತಾರು ಕ್ರಿಯಾಶೀಲ ರಿಯಾಲಿಟಿ ಶೋಗಳ ಪಟ್ಟಿಗೆ ಈ ಹೊಸ ಕಾರ್ಯಕ್ರಮ “ತುತ್ತಾ ಮುತ್ತಾ” ಸೇರ್ಪಡೆಯಾಗಲಿದೆ. ತನ್ನ ಮಾತಿನಿಂದಲೇ ನಗುವಿನ ಹೊಳೆ ಹರಿಸುವ ನಿರಂಜನ್‍ ದೇಶಪಾಂಡೆ ನಿರೂಪಕನಾಗಿ ಕಾರ್ಯ ವಹಿಸಲಿದ್ದಾರೆ. ಮನರಂಜನೆಯೇ ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಸವಾಲು ಜವಾಬುಗಳ ಜುಗಲ್ಬಂದಿಯಾಗಿ ತೆರೆಯಮೇಲೆ ಇದೊಂದು ಹೊಸ ರೀತಿಯ, ವಿನೂತನರಿಯಾಲಿಟಿ ಶೋ ಆಗಿ ಮೂಡಿಬರಲಿದೆ. ಕಾರ್ಯಕ್ರಮದಲ್ಲಿ ಹಿರಿತೆರೆ ಮತ್ತುಕಿರುತೆರೆಯತಾರೆಯರದಂಡು ಭಾಗವಹಿಸಲಿದ್ದಾರೆ. ತಾರೆಯರ ಮಡದಿ ಮತ್ತುತಾಯಂದಿರ ನಡುವೆ ನಡೆಯುವಜಟಾಪಟಿಯೇ “ತುತ್ತಾ ಮುತ್ತಾ”. ಆಟದಲ್ಲಿತಾರೆಯರತಾಯಿಒಂದುಕಡೆ, ಹೆಂಡತಿಒಂದುಕಡೆ ನಿಂತು ನಿರಂಜನ್ ಕೇಳುವ ಪ್ರಶ್ನೆಗಳಿಗೆ ಉತ್ತರಕೊಡುತ್ತಾರೆ. ಹನ್ನೆರಡು ಪ್ರಶ್ನೆಗಳಿಂದ ಐದು ಲಕ್ಷಗೆಲ್ಲುವ ಅವಕಾಶ ಇವರಿಗೆಇರುತ್ತದೆ. ಇದರಲ್ಲಿ ಸರಿಯಾಗಿ ಉತ್ತರಕೊಡುವವರು ಯಾರು ಎಂಬ ಆಯ್ಕೆ ಮಾತ್ರ ಬಂದತಾರೆಯರದ್ದು. ಉತ್ತರತಪ್ಪಾದಲ್ಲಿ ಬರೀ ಒಂದು ಕಡೆಯಿಂದ ಮಾತ್ರವಲ್ಲದೆ, ಆರೋಹಣ ಮತ್ತು ಅವರೋಹಣದ ಕ್ರಮದಲ್ಲಿ ಹಣ ಕಡಿತವಾಗುತ್ತ ಬರುತ್ತದೆ. ತಾಯಿ,ಮಗ, ಸೊಸೆಯ ನಡುವಿನ ಬಾಂಧವ್ಯ, ಸಂಬಂಧಗಳ ಮುಕ್ತ ಚರ್ಚೆ, ಹಾಗು ಪ್ರಶ್ನೆಗಳಿಗೆ ಉತ್ತರಕೊಡುವರೋಚಕತೆಯೇ ಈ “ತುತ್ತಾ ಮುತ್ತಾ”.

ವಾರಾಂತ್ಯದಲ್ಲಿ ಪ್ರಸಾರವಾಗುವ ಈ ಶೋನಲ್ಲಿಜನಕ್ಕೆತಮ್ಮ ನೆಚ್ಚಿನತಾರೆಯರ ಪರಿಚಯ, ಮತ್ತಷ್ಟು ಹತ್ತಿರದಿಂದ ಆಗುವುದರಲ್ಲಿ ಅನುಮಾನವೇ ಇಲ್ಲ. ಹಾಗೆ ಮಸ್ತಿ ಮತ್ತು ಮನರಂಜನೆಅನಿಯಮಿತವಾಗಿದೊರೆಯಲಿದೆ.ಈ ಶೋನಲ್ಲಿ ವಿಧವಿಧವಾದ ಸವಾಲುಗಳನ್ನು ಹಾಕಲಾಗುತ್ತದೆ. ಇದನ್ನೆಲ್ಲಾಉತ್ತರಿಸಲು ಸಿನಿಮಾ ಮತ್ತು ಸಣ್ಣಪರದೆಯ ತಾರೆಯರು ಬರುತ್ತಾರೆ. ಸಂಗೀತ ನಿರ್ದೇಶಕಗುರುಕಿರಣ್, ಹಾಸ್ಯ ನಟಕುರಿ ಪ್ರತಾಪ್ ಈಗಾಗಲೇ ಈ ಆಟದಲ್ಲಿ ಭಾಗವಹಿಸಿರುವ ತಾರೆಯರು. ಗುರುಕಿರಣ್‍ ಅವರ ತಾಯಿಯ ಮುಗ್ಧತೆ, ಮಡದಿಯ ಮುದ್ದು ಮಾತುಗಳು, ಗುರುಕಿರಣರ ಹಾಡುಗಳು ಆ ಕಂತಿನ ವಿಶೇಷತೆಯಾದರೆ, ಕುರಿ ಪ್ರತಾಪರ ಸಂಚಿಕೆ, ಹಾಸ್ಯ ಸಾಗರವನ್ನೇ ಸುರಿಸುವುದರಲ್ಲಿಅನುಮಾನವೇಇಲ್ಲ. “ತುತ್ತಾ ಮುತ್ತಾ”ಇದೇ ಶನಿವಾರದಿಂದರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

This Article Has 1 Comment
  1. Pingback: devsecops

Leave a Reply

Your email address will not be published. Required fields are marked *

Translate »
error: Content is protected !!