ತಾರಕಾಸುರ’ ಚಿತ್ರದ ಟ್ರೈಲರ್​​​ ಬಿಡುಗಡೆ

ಬೆಂಗಳೂರಿನ ಒರಾಯನ್ ಮಾಲ್​​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ಡಾಲಿ ಧನಂಜಯ್​​ ಟ್ರೈಲರ್ ಲಾಂಚ್​​ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ರು. ಅಲ್ಲದೆ, ಟ್ರೈಲರ್​​ ತುಂಬಾ ಕುತೂಹಲಕಾರಿಯಾಗಿದ್ದು, ಇದು ಕನ್ನಡದ ಒಳ್ಳೆ ಸಿನಿಮಾ ಆಗುತ್ತೆ ಎಂದು ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನಾಡಿದ್ರು.

ಇನ್ನು ಇದುವರೆಗೂ ಚಿತ್ರ ಕಥೆ ಬಗ್ಗೆ ಗುಟ್ಟು ಕಾಯ್ದುಕೊಂಡು ಬಂದಿದ್ದ ನಿರ್ದೇಶಕರು, ನಿನ್ನೆ ಚಿತ್ರ ಕಥೆಯ ಎಳೆ ಬಿಚ್ಚಿಟ್ಟರು. ಇಂದಿನ ಪೀಳಿಗೆಯ ಬಹುತೇಕರು ಮರೆತು ಹೋಗಿರುವ ಜನಪದ ಕಲೆ ‘ಬುಡುಬುಡುಕೆ’ ಸಮುದಾಯದ ಸುತ್ತ ಸಿನಿಮಾದ ಕಥೆ ಹೆಣೆಯಲಾಗಿದೆ. ಕಲೆ, ಕಲೆಯಿಂದಾಗಿಯೇ ಉದ್ಭವವಾಗುವ ಸಮಸ್ಯೆಗಳು ಚಿತ್ರದ ಕಥೆ ಎಂದು ಬಂಡಿಯಪ್ಪ ಬಾಯಿಬಿಟ್ಟರು.

ಬುಡುಬುಡುಕೆ ಜನಾಂಗದ ಯುವಕನ‌ ಪಾತ್ರವನ್ನು ಮಾಡಿರುವ ಯುವ ನಟ ವೈಭವ್, ಎರಡು ಮೂರು ದಿನ ಆ ಸಮುದಾಯದ ಜನರ ಜತೆ ಕಾಲ ಕಳೆದು, ಪಾತ್ರಕ್ಕಾಗಿ ಹೋಮ್​​​ ವರ್ಕ್ ಮಾಡಿದ್ರಂತೆ. ಚಿತ್ರದಲ್ಲಿ ಮಾಟ ಮಂತ್ರಕ್ಕಾಗಿ ಅಮವಾಸ್ಯೆ ದಿನ ಸ್ಮಶಾನದಲ್ಲಿ ಹೂತಿರುವ ಗರ್ಭಿಣಿ ಶವದ ಕೈಯನ್ನು ಕತ್ತರಿಸುವಂತಹ ಸನ್ನಿವೇಶ ಚಿತ್ರದಲ್ಲಿದ್ದು, ಚಿತ್ರ ನೋಡಿದ ಸೆನ್ಸಾರ್ ಮಂಡಳಿ ಚಿತ್ರವನ್ನು ಬ್ಯಾನ್ ಮಾಡುವುದಾಗಿ ಹೇಳಿತ್ತಂತೆ .

ಆದ್ರೆ, ನಿರ್ದೇಶಕರ ಹಾಗೂ ನಿರ್ಮಾಪಕರ ಜೊತೆ ಸತತ ಎರಡು ಗಂಟೆಗಳ ಕಾಲ ಚಿತ್ರದ ಕಥೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಯಾವುದೇ ಸೀನ್​​​ಗೆ ಕತ್ತರಿ ಹಾಕದೆ, ಎರಡು ಡೈಲಾಗ್​​ ಮ್ಯೂಟ್ ಮಾಡಿ ‘ಎ’ ಸರ್ಟಿಫಿಕೇಟ್ ನೀಡಿದೆ ಎಂದು ನಿರ್ದೇಶರು ತಿಳಿಸಿದ್ರು.

ಈ ಚಿತ್ರದಲ್ಲಿ ಟಗರು ಪುಟ್ಟಿ ಮಾನ್ವಿತಾ ಕಾಮತ್​ ನಾಯಕಿಯಾಗಿ ಸ್ರ್ಕೀನ್ ಶೇರ್ ಮಾಡಿದ್ದು,
ಚಿತ್ರದಲ್ಲಿನ ಪಾತ್ರದ ಬಗ್ಗೆ ಗುಟ್ಟು ಬಿಟ್ಟುಕೊಡದೆ ಬಬ್ಲಿ ಕ್ಯಾರಕ್ಟರ್ ಪ್ಲೇ ಮಾಡಿರುವುದಾಗಿ ಹೇಳಿದ್ರು.

ಚಿತ್ರಕ್ಕೆ ಧರ್ಮ ವಿಶ್ ಸಂಗೀತವಿದೆ. ನರಸಿಂಹಲು ಚಿತ್ರದ ನಿರ್ಮಾಪಕರು. ನವೆಂಬರ್ ಎರಡನೇ ವಾರದಲ್ಲಿ ಚಿತ್ರದ ಬಿಡುಗಡೆಗೆ ಚಿತ್ರತಂಡ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

 

This Article Has 1 Comment
  1. Pingback: DevSecOps definition

Leave a Reply

Your email address will not be published. Required fields are marked *

Translate »
error: Content is protected !!