ಅಮೆರಿಕದಲ್ಲಿ ‘ಟಾಕ್ಸಿಕ್’ 1.2 ಮಿಲಿಯನ್ ಡಾಲರ್ ಕಲೆಕ್ಷನ್

ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರಕ್ಕೆ ಅಮೆರಿಕದಲ್ಲಿ ಭರ್ಜರಿ ಅಡ್ವಾನ್ಸ್ ಬುಕಿಂಗ್  ಆಗಿದ್ದು, ಇಲ್ಲಿಯವರೆಗೆ 5,500 ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ.

ಅಮೆರಿಕದಲ್ಲಿ ಮುಂಗಡ ಬುಕಿಂಗ್ ಮೂಲಕ ಚಿತ್ರ 1.2 ಮಿಲಿಯನ್ ಡಾಲರ್ ಗಳಿಸಿದೆ. ಈ ಚಿತ್ರ  204 ಸ್ಥಳಗಳು ಮತ್ತು 589 ಪ್ರದರ್ಶನ ಕಾಣುತ್ತಿದ್ದು, 5,550 ಕ್ಕೂ ಹೆಚ್ಚು ಟಿಕೆಟ್‌ಗಳ ಮಾರಾಟ ಆಗಿದೆ.  ಮುಂಗಡ ಮಾರಾಟದಲ್ಲಿ ಈಗಾಗಲೇ 1 ಕೋಟಿ ರೂ.ಗಳ ಗಡಿಯನ್ನು ದಾಟಿದೆ. ಬಿಡುಗಡೆಗೆ ಮುನ್ನವೇ ಬುಕಿಂಗ್ ಮುಂದುವರಿದಿರುವುದರಿಂದ ಮುಂದಿನ ದಿನಗಳಲ್ಲಿ ಅಮೆರಿಕದಲ್ಲಿ ಚಿತ್ರದ ಮುಂಗಡ ಟಿಕೆಟ್ ಮಾರಾಟದ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಅಮೆರಿಕದಲ್ಲಿ ಚಿತ್ರದ ಮುಂಗಡ ಬುಕಿಂಗ್ ಈಗಾಗಲೇ ಪ್ರಾರಂಭವಾಗಿದ್ದರೂ, ಭಾರತದಲ್ಲಿ ಬುಕಿಂಗ್ ಇನ್ನೂ ಆರಂಭವಾಗಬೇಕಿದೆ. ಆಗಸ್ಟ್ 26 ರಂದು ಬಿಡುಗಡೆಯಾಗಲಿರುವ  ಚಿತ್ರದ ಮುಂಗಡ ಬುಕಿಂಗ್ ಭಾರತದಲ್ಲಿ ಆಗಸ್ಟ್ 21 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ.

ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರ  ಭರ್ಜರಿ ಓಪನಿಂಗ್ ಕಾಣಲಿದೆ ಎಂದು  ತಜ್ಞರು ನಿರೀಕ್ಷಿಸುತ್ತಿದ್ದಾರೆ. ಮುಂಗಡ ಬುಕಿಂಗ್ ಪ್ರವೃತ್ತಿ ಇದೇ ರೀತಿ ಮುಂದುವರೆದರೆ ಚಿತ್ರ  ಬಿಡುಗಡೆಯ ದಿನದಂದೇ ಸುಮಾರು  100 ಕೋಟಿ ರೂ. ಗಳಿಸಬಹುದು ಎಂದು ಕೆಲವರು ಅಂದಾಜಿಸಿದ್ದಾರೆ.

ಟಾಕ್ಸಿಕ್’ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದೆ. ಇದನ್ನು ಇತರ ಭಾರತೀಯ ಭಾಷೆಗಳಿಗೂ ಡಬ್ ಮಾಡಲಾಗುತ್ತದೆ. ಯಶ್ ಅವರ ಜನಪ್ರಿಯತೆಯ ಕಾರಣದಿಂದಾಗಿ  ವಿಶೇಷ ಪ್ರದರ್ಶನಗಳ ಟಿಕೆಟ್ ದರಗಳು ಹೆಚ್ಚಿರಬಹುದು ಎಂದು ನಿರೀಕ್ಷಿಸಲಾಗಿದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬೆಳಿಗ್ಗೆ 6 ಗಂಟೆಯ ವಿಶೇಷ ಪ್ರದರ್ಶನಗಳ ಟಿಕೆಟ್ ದರಗಳು  500 ರಿಂದ  600 ರೂ.   ಇರಬಹುದು ಎಂದು ಅಂದಾಜಿಸಲಾಗಿದೆ. ಅದೇ ರೀತಿ ಸಾಮಾನ್ಯ ಪ್ರದರ್ಶನಗಳ ದರಗಳು ಎಂದಿಗಿಂತ   50 ರಿಂದ  100 ರೂ. ರಷ್ಟು ಹೆಚ್ಚಿರಬಹುದು. ಮುಂಬೈ ಮತ್ತು ದೆಹಲಿಯಲ್ಲಿ ಅತ್ಯಂತ ದುಬಾರಿ ಪ್ರದರ್ಶನಗಳ ಟಿಕೆಟ್ ದರವು 2,600 ರೂ. ರಷ್ಟಿರಬಹುದು ಎಂದು ಅಂದಾಜಿಸಲಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!