ನಯನತಾರಾ ‘ಟಾಕ್ಸಿಕ್’ ಫಸ್ಟ್ ಲುಕ್ ರಿಲೀಸ್

“ಟಾಕ್ಸಿಕ್ – ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್” ಚಿತ್ರತಂಡ  ನಟಿ ನಯನತಾರಾ ಅವರ ಫಸ್ಟ್ ಲುಕ್ ರಿಲೀಸ್ ಮಾಡಿದೆ.

ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ “ಟಾಕ್ಸಿಕ್ – ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್” ಚಿತ್ರದ ಪೋಸ್ಟರ್‌ನಲ್ಲಿ ನಯನತಾರಾ ಅವರನ್ನು ಅಲಂಕೃತ ಕ್ಯಾಸಿನೊ ಪ್ರವೇಶದ್ವಾರದ ಮುಂದೆ ನಿಲ್ಲಿಸಲಾಗಿದೆ. ಕೈಯಲ್ಲಿ ಗನ್, ಐಷಾರಾಮಿ ವಾತಾವರಣ ಇದೆ.

ತಮಿಳು, ತೆಲುಗು, ಮಲಯಾಳಂ, ಕನ್ನಡ ಭಾಷೆಯ  75 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಳೆದ ಎರಡು ದಶಕಗಳಿಂದ ಅಭಿನಯಿಸುತ್ತಿರುವ ನಯನತಾರಾ ಕಳೆದ ವರ್ಷ ಶಾರುಖ್ ಖಾನ್ ಅವರ ಬ್ಲಾಕ್ಬಸ್ಟರ್ “ಜವಾನ್” ಜೊತೆಗೆ “ಆರಮ್”, “ಕೋಲಮಾವು ಕೋಕಿಲ” ಮತ್ತು “ನೆಟ್ರಿಕನ್” ನಂತಹ ಮಹಿಳಾ ಕೇಂದ್ರಿತ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ.

ಕೆಲ ದಿನಗಳ ಹಿಂದೆ ಟಾಕ್ಸಿಕ್ ಚಿತ್ರತಂಡ ಕಿಯಾರಾ ಅಡ್ವಾಣಿಯವರ ಫಸ್ಟ್ ಲುಕ್ ಬಿಡುಗಡೆ ಮಾಡಿತ್ತು.

“ಟಾಕ್ಸಿಕ್” ಚಿತ್ರವನ್ನು ಗೀತು ಮೋಹನ್ ದಾಸ್ ನಿರ್ದೇಶಿಸಿದ್ದಾರೆ. ಯಶ್ ಮತ್ತು ಗೀತಾ ಮೋಹನ್ ದಾಸ್ ಚಿತ್ರಕಥೆ ಬರೆದಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ  ಚಿತ್ರೀಕರಣ ಆಗುತ್ತಿದ್ದು, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ಡಬ್ ಮಾಡಲಾಗುತ್ತಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!