ಮೈಸೂರಿನ ಮಹಾರಾಜ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಟೈಗರ್ ವಾರಿಯರ್ಸ್ ಕಪ್ ಕರಾಟೆ ಚಾಂಪಿಯನ್ಶಿಪ್ – 2026ರಲ್ಲಿ ಎವಲ್ಯೂಷನ್ ಆಫ್ ಕರಾಟೆ ತಂಡದ ವಿದ್ಯಾರ್ಥಿಗಳು 10 ಚಿನ್ನ, 1 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಚಿನ್ನದ ಪದಕವನ್ನು ಗೆದ್ದ ಅಲಿಯಾ ಆಯತ್, ಅದ್ವೈತ್ ಎನ್., ದುಹಿತಾ ಪಿ., ಯೋಗೇಶ್ ಆರ್., ಕೌಶಿಕ್ ದಾಸ್, ವಿಜಯ್ ಎಂ., ಮಾನ್ವಿತಾ ಎನ್., ಲಲಿತ್ ಎಸ್., ನಾಗೇಂದ್ರ ಪ್ರಸಾದ್ ಹಾಗೂ ಸಿದ್ಧಾರ್ಥ್ ಎನ್. ಬೆಳ್ಳಿ ಪದಕವನ್ನು ಕಿರಣ್ ಈಶ್ವರ್ ವೈ. ಹಾಗೂ ಕಂಚಿನ ಪದಕಗಳನ್ನು ಜಾನ್ವಿತ್ ಎನ್., ಜೈವರ್ಧನ್ ಬಿ. ಮತ್ತು ಹಿತೇಶ್ ಸಿ. ಮೋಹನ್ ಪಡೆದರು.

ತಂಡದ ಈ ಸಾಧನೆಗೆ ಮುಖ್ಯ ಕೋಚ್ ಸಯ್ಯದ್ ಅಮ್ಜದ್ ಪಾಶಾ, ತಂಡದ ವ್ಯವಸ್ಥಾಪಕ ಹೇಮಂತ್ ಕುಮಾರ್ ಕೆ.ಸಿ., ರಂಜಿನಿ ಜೆ, ಶ್ರೇಯಾ ಶ್ರೀ ಕೆ ಹಾಗೂ ಆರ್ಚರ್ಡ್ ಇಂಗ್ಲಿಷ್ ಸ್ಕೂಲ್ ಆಡಳಿತ ಮಂಡಳಿಯ ಮಾರ್ಗದರ್ಶನ ಪ್ರಮುಖ ಕಾರಣವಾಗಿದೆ. ವಿಜೇತ ವಿದ್ಯಾರ್ಥಿಗಳು ಹಾಗೂ ತರಬೇತುದಾರರ ತಂಡಕ್ಕೆ ವಿವಿಧ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.






Be the first to comment