‘ಜನ ನಾಯಗನ್’ ವಿಳಂಬದಿಂದ 100 ಕೋಟಿ ₹ ನಷ್ಟ

ದಳಪತಿ ವಿಜಯ್ ನಟನೆಯ ಸಿನಿಮಾ ‘ಜನ ನಾಯಗನ್’ ಬಿಡುಗಡೆ ವಿಳಂಬದಿಂದಾಗಿ ತಮಿಳುನಾಡಿನ ಚಿತ್ರಮಂದಿರಗಳಿಗೆ ಸುಮಾರು 100 ಕೋಟಿ ₹ ನಷ್ಟ ಉಂಟಾಗಿದೆ ಎನ್ನಲಾಗಿದೆ.

‘ಜನ ನಾಯಗನ್’ ಜನವರಿ 10ರಂದು ತೆರೆಗೆ ಬರಬೇಕಾಗಿತ್ತು. ಆದರೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬ ಆಗಿ ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಸಿನಿಮಾದ ಬಿಡುಗಡೆ ಇನ್ನಷ್ಟು ತಡವಾಗುವ ಸಾಧ್ಯತೆ ಇದೆ. ಸಿನಿಮಾ ಬಿಡುಗಡೆ ವಿಳಂಬದಿಂದಾಗಿ ಕೆವಿಎನ್‌ಗೆ  ಆರ್ಥಿಕ ನಷ್ಟ ಉಂಟಾಗಿದೆ.

‘ಜನ ನಾಯಗನ್’ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಚಿತ್ರಮಂದಿರಗಳು ಭಾರಿ ಜನಪ್ರವಾಹವನ್ನು ನಿರೀಕ್ಷಿಸಿದ್ದವು. ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಅಭಿಮಾನಿಗಳು ಮುಂಗಡ ಟಿಕೆಟ್ ಬುಕ್ ಮಾಡಿದ್ದರು. ಆದರೆ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದ್ದು, ಥಿಯೇಟರ್ ಉದ್ಯಮಕ್ಕೆ  ಹೊಡೆತ ನೀಡಿದೆ.

ಇತ್ತೀಚಿನ ವರ್ಷಗಳಲ್ಲಿ ವಿಜಯ್ ಸಿನಿಮಾಗಳು  ಚಿತ್ರಮಂದಿರಗಳಿಗೆ ಬಂಪರ್ ಲಾಭ ತಂದಿವೆ. ‘ಜನ ನಾಯಗನ್’ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಥಿಯೇಟರ್‌ಗಳು ಅಡ್ವಾನ್ಸ್ ನೀಡಿ ಸಿನಿಮಾ ಬಿಡುಗಡೆಗೆ  ಸಿದ್ಧತೆ ಮಾಡಿಕೊಂಡು ಕಾಯುತ್ತಿದ್ದವು. ಆದರೆ ಸಿನಿಮಾ ಬಿಡುಗಡೆಯೇ ಆಗದೆ ನಷ್ಟವಾಗಿದೆ.

ಪ್ರಕರಣದ  ವಿಚಾರಣೆ  ವಿಳಂಬವಾಗುವ ಸಾಧ್ಯತೆ ಇರುವುದರಿಂದ ನಿರ್ಮಾಪಕರು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದು ಸಿನಿಮಾವನ್ನು ಮತ್ತೆ ಸಿಬಿಎಫ್ಸಿ ರಿವ್ಯೂ ಕಮಿಟಿಗೆ ಕಳುಹಿಸುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!