ಸದ್ಯ ಸ್ಯಾಂಡಲ್ ವುಡ್ ನಲ್ಲಿ ವೈರಲ್ ಆಗ್ತಿರೋ ಒಂದು ಪದ ಅಂದ್ರೆ ಅದು ಡ್ರಗ್ಸ್. ಈ ಬಾರಿ ಮತ್ತೆ ಸ್ಯಾಂಡಲ್ ವುಡ್ ಡ್ರಗ್ಸ್ ಅಂತ ಸದ್ದು ಮಾಡ್ತಿದೆ. ಡ್ರಗ್ಸ್ ನಂಟು ಈ ಬಾರಿ ನಿರ್ದೇಶಕ ಜಯತೀರ್ಥ ಅವರನ್ನು ಹುಡುಕಿಕೊಂಡು ಬಂದಿದೆ. ಹೌದಾ! ಅಂತಾ ಹುಬ್ಬೇರಿಸಬೇಡಿ. ಯಾಕಂದ್ರೆ ಈ ಬಾರಿ ಡ್ರಗ್ಸ್ ಸ್ಯಾಂಡಲ್ ವುಡ್ ನಲ್ಲಿ ಸಕಾರಾತ್ಮಕವಾಗಿ ಸುದ್ದಿ ಮಾಡ್ತಿದೆ.
ನಿರ್ದೇಶಕ ಜಯತೀರ್ಥ ಅವರು ಡ್ರಗ್ಸ್ ಕುರಿತಾದ ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಹಿರಿಯ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಶಾಲೆಯ ‘ಡೈರೆಕ್ಷನ್ ಇನ್ ಫಿಲಂ ಮೇಕಿಂಗ್’ ಸಿನಿಮಾ ವಿದ್ಯಾರ್ಥಿಗಳಿಗಾಗಿ ಮಾಡಿರುವ ಕಿರುಚಿತ್ರ.
ಡ್ರಗ್ಸ್ ಕೇವಲ ಸಿನಿಮಾ ಸೆಲೆಬ್ರಿಟಿಗಳನ್ನು ಹೇಗೆ ಬಾಧಿಸುತ್ತಿದೆ ಎನ್ನುವಂತಹ ಸ್ಯಾಂಡಲ್ ವುಡ್ ಡಿಫೆಂಡ್ ಮಾಡಿಕೊಳ್ಳುವಂಥ ವಿಷಯಗಳಿಗೆ ಆದ್ಯತೆ ನೀಡಿಲ್ಲ. ಬದಲಿಗೆ ಡ್ರಗ್ಸ್ ಎಲ್ಲೆಲ್ಲಿ ಹರಡಿಕೊಂಡಿದೆ? ಮುಖ್ಯವಾಗಿ ಸುದ್ದಿ ವಾಹಿನಿಗಳಿಗೆ ಡ್ರಗ್ಸ್ ಏರಿಸುತ್ತಿರುವ ನಶೆ ಎಂಥದ್ದು? ಡ್ರಗ್ಸ್ ಎನ್ನುವ ಸಾಮಾಜಿಕ ಪಿಡುಗನ್ನು ಬದಲಿಸುವ ಬದಲಿಗೆ ಸುದ್ದಿವಾಹಿನಿಗಳು ಅದನ್ನು ಬಿಂಬಿಸಿದ ಬಗೆಯನ್ನು ಇಲ್ಲಿ ಚರ್ಚಿಸಲಾಗಿದೆ.
‘ ಬ್ಯೂಟಿಫುಲ್ ಮನಸ್ಸುಗಳು’ ಸಿನಿಮಾದಲ್ಲಿ ಮಾಧ್ಯಮಗಳ ಬಗ್ಗೆ ಚರ್ಚೆ ಮಾಡಲಾಗಿತ್ತು. ಆದ್ರೆ ಅಲ್ಲೂ ಕೂಡ ಒಂದಷ್ಟು ಸೀಮಿತತೆ ಇತ್ತು. ಆದ್ರೆ ಈ ಕಿರುಚಿತ್ರದಲ್ಲಿ ಅಂತಹ ಯಾವುದೇ ಬಂಧನಗಳಿಲ್ಲದೇ, ಅನಿಸಿದ್ದನ್ನು ಅನಿಸಿದ ಹಾಗೆಯೇ ಹೇಳಿದ್ದೇವೆ. ಅಲ್ಲದೇ ಮಾಧ್ಯಮಗಳ ಹೊಣೆಗಾರಿಕೆ ಹೇಗಿರಬೇಕು ಅನ್ನೋ ಸಾಮಾನ್ಯ ನಾಗರಿಕನ ಧ್ವನಿಯಾಗಿ ಈ ಕಿರುಚಿತ್ರ ರೂಪುಗೊಂಡಿದೆ ‘ ಎಂದು ಕಿರುಚಿತ್ರದ ಕಥಾಹಂದರವನ್ನು ಬಿಡಿಸುತ್ತಾರೆ ನಿರ್ದೇಶಕ ಜಯತೀರ್ಥ.ಇನ್ನೂ ಈ ಕಿರುಚಿತ್ರ ಮೂಡಿಬಂದ ಬಗೆಯನ್ನ ಜಯತೀರ್ಥರವರು ವಿವರಿಸೋದು ಹೀಗೆ. ಈ ಕಿರುಚಿತ್ರದ ಚಿತ್ರಕಥೆ ಸಿದ್ಧ ಮಾಡಿರುವುದು ಟೆಂಟ್ ಸಿನಿಮಾದ ವಿದ್ಯಾರ್ಥಿಗಳು. ಟೆಂಟ್ ಸಿನಿಮಾದ ವಿದ್ಯಾರ್ಥಿಗಳು ಮತ್ತು ಆನ್ಲೈನ್ ಚಿತ್ರಕಥಾ ರಚನೆ ಕಾರ್ಯಗಾರದ ವಿದ್ಯಾರ್ಥಿಗಳೊಟ್ಟಿಗೆ ಜಯತೀರ್ಥರವರು ಚರ್ಚೆ ನಡೆಸಿದ್ದಾರೆ. ಡ್ರಗ್ಸ್ ಎನ್ನುವ ವಿಷಯವನ್ನು ಕೊಟ್ಟ ಕೂಡಲೇ ಪ್ರತಿ ವಿದ್ಯಾರ್ಥಿಗಳು ಒಂದೊಂದು ಕಥೆಯನ್ನು ಹೇಳಿದ್ದಾರೆ. ಆದರೆ ಜಯತೀರ್ಥರವರು ಅಂತಿಮವಾಗಿ ಆಯ್ಕೆ ಮಾಡಿದ್ದು ವಿದ್ಯಾರ್ಥಿ ಧನುಷ್ ಹೇಳಿದ ಸಣ್ಣ ಎಳೆ.
ಇನ್ನೂ ನಿರ್ದೇಶನದ ಜೊತೆಗೆ ಅಭಿನಯಾಸಕ್ತ ವಿದ್ಯಾರ್ಥಿಗಳಿಗೂ ಅತ್ಯುತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ. ಟೆಂಟ್ ಸಿನಿಮಾ ಶಾಲೆಯ ಅಭಿನಯ ತರಗತಿಗಳಿಗೆ ಭಾರೀ ಡಿಮ್ಯಾಂಡ್ ಇದೆ . ಕಲಾವಿದರಾಗಬೇಕು ಎನ್ನುವವರಿಗೆ ನಟನೆಯ ವಿಶೇಷ ತರಗತಿಗಳಿವೆ. ಧ್ವನಿ ಏರಿಳಿತ, ಪಾತ್ರಗಳ ಮ್ಯಾನರಿಸಮ್, ಫೇಶಿಯಲ್ ಎಕ್ಸ್ಪ್ರೆಷನ್ಸ್ ಗಳಂತಹ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.ಈಗಾಗಲೇ ಟೆಂಟ್ ಸಿನಿಮಾ ಶಾಲೆಯಿಂದ ಹೊರಬಂದ ಹಲವಾರು ವಿದ್ಯಾರ್ಥಿಗಳು ಕಿರುತೆರೆಯಲ್ಲಿ ಗಮನಾರ್ಹ ಪಾತ್ರಗಳಲ್ಲಿ ಅಭಿನಯಿಸಿ ಭರವಸೆ ಮೂಡಿಸಿದ್ದಾರೆ. ಜನಪ್ರಿಯ ಗೀತಾ ಧಾರಾವಾಹಿಯ ನಾಯಕ ಧನುಷ್(ವಿಜಯ್), ಯಾರಿವಳು ಧಾರಾವಾಹಿ ಖ್ಯಾತಿಯ ಐಶ್ವರ್ಯ, ಗಿಣಿರಾಮ ಸೀರಿಯಲ್ ನ ವರುಣ್ ಹೆಗ್ಡೆ ಯಂತಹ ಯುವ ಕಲಾವಿದರನ್ನು ಹುರಿಗೊಳಿಸಿದ ಹೆಮ್ಮೆ ಟೆಂಟ್ ಸಿನಿಮಾ ಶಾಲೆಗಿದೆ.
Be the first to comment