ಚಿತ್ರ: ತಪಸ್ಸಿ
ನಿರ್ದೇಶನ: ಸ್ಪೆನ್ಸರ್ ಮ್ಯಾಥ್ಯೂ
ತಾರಾ ಬಳಗ: ಅಮ್ರೆಯ ಗೋಸ್ವಾಮಿ, ರವಿಚಂದ್ರನ್, ಭಾಸ್ಕರ್, ಸಚಿನ್, ಇತರರು
ರೇಟಿಂಗ್: 3
ಮಾದಕ ವಸ್ತುಗಳ ಚಟಕ್ಕೆ ಬಲಿಯಾದ ಯುವತಿಯ ಬದುಕು ಯಾವ ರೀತಿ ಆಗುತ್ತದೆ ಎನ್ನುವುದನ್ನು ತೋರಿಸುವ ಚಿತ್ರ ತಪಸ್ಸಿ.
ಈ ವಾರ ತೆರೆಗೆ ಬಂದಿರುವ ತಪಸ್ಸಿ ಚಿತ್ರದಲ್ಲಿ ನಾಯಕಿಗೆ ಫ್ಯಾಶನ್ ಲೋಕದಲ್ಲಿ ಹೆಸರು ಮಾಡುವ ಕನಸು. ಅವಳು ಇಷ್ಟವಿಲ್ಲದಿದ್ದರೂ ಅಲ್ಲಿನ ಕೀಚಕರ ಅಮಿಷಕ್ಕೆ ಬಲಿಯಾಗಿ ಮಾದಕ ವಸ್ತು, ಕುಡಿತದ ಚಟಕ್ಕೆ ದಾಸಳಾಗುತ್ತಾಳೆ. ಬಳಿಕ ಅವಳ ಗೆಳತಿಯರು ಅದರಿಂದ ಮುಕ್ತಗೊಳಿಸಲು ಮನಶಾಸ್ತ್ರಜ್ಞರ ಬಳಿ ಕರೆದುಕೊಂಡು ಹೋಗುತ್ತಾರೆ. ನಾಯಕಿ ಮಾದಕ ವಸ್ತುವಿನ ಜಗತ್ತಿನಿಂದ ಹೊರಗೆ ಬರುತ್ತಾಳೆಯೇ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.
ಅಮ್ರೆಯ ಗೋಸ್ವಾಮಿ ಪಾರ್ಟಿ ಮೂಡಿನಲ್ಲಿ ಸುಂದರವಾಗಿ ಕಾಣಿಸಿದ್ದಾರೆ. ರವಿಚಂದ್ರನ್ ಮನಶಾಸ್ತ್ರಜ್ಞ ಆಗಿ ತಮಗೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಇಡೀ ಚಿತ್ರ ಮಾದಕ ವಸ್ತು, ಮದ್ಯಪಾನ, ಅತ್ಯಾಚಾರ ವಿಷಯಗಳ ಸುತ್ತ ಸುತ್ತುತ್ತದೆ. ಮೋಜು -ಮಸ್ತಿಯ ದೃಶ್ಯಗಳು ಚಿತ್ರದಲ್ಲಿ ಸಾಕಷ್ಟಿವೆ. ಅಮಲಿನ ಸುತ್ತ ಸುತ್ತುವ ಚಿತ್ರದಲ್ಲಿ ಕಥೆ, ಚಿತ್ರಕಥೆ, ನಿರೂಪಣೆ ನಿರೀಕ್ಷಿತ ಮಟ್ಟದಲ್ಲಿ ಬಿಗಿಯಾಗಿಲ್ಲ. ಆದರೂ ನಿರ್ದೇಶಕರು ನೈಜ ಘಟನೆಯನ್ನು ಪ್ರೇಕ್ಷಕರ ಮುಂದೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.





Be the first to comment