ಜೈ ಸಿನಿಮಾ ಟಿಕೆಟ್ ಖರೀದಿಸಿದ ಸುದೀಪ್

ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಜೈ’ ಸಿನಿಮಾದ ಮೊದಲ ಟಿಕೆಟ್ ಖರೀದಿ ಮಾಡಿ ರೂಪೇಶ್‌ ಅವರಿಗೆ ಸುದೀಪ್ ಬೆಂಬಲ ನೀಡಿದ್ದಾರೆ.

ಮಾರ್ಕ್ ಸಿನಿಮಾದ ಶೂಟಿಂಗ್ ಮಧ್ಯೆ ರೂಪೇಶ್‌ರನ್ನು ಸೆಟ್‌ಗೆ ಕರೆಸಿಕೊಂಡ ಸುದೀಪ್, ₹501 ನೀಡಿ ಟಿಕೆಟ್ ಖರೀದಿಸಿ ಶುಭ ಹಾರೈಸಿದ್ದಾರೆ.

“ನನ್ನ ಮೊದಲ ಟಿಕೆಟ್ ಸುದೀಪ್ ಅವರ ಕೈಗೆ ಸಿಗಬೇಕು ಅನ್ನುವುದು ನನ್ನ ಕನಸು” ಎಂದು ರೂಪೇಶ್‌ ಹೇಳುತ್ತಿದ್ದಂತೆಯೇ, ಸುದೀಪ್ ತಾವು ಟಿಕೆಟ್ ಖರೀದಿಸುವುದಾಗಿ ಹೇಳಿ ರೂಪೇಶ್‌ರನ್ನು ಖುಷಿಗೊಳಿಸಿದ್ದಾರೆ. ಸುದೀಪ್ “ಆಲ್ ದ ಬೆಸ್ಟ್” ಎಂದು ಶುಭಕೋರಿರುವ ವಿಡಿಯೋ  ವೈರಲ್ ಆಗಿದೆ.

ರೂಪೇಶ್ ಶೆಟ್ಟಿ  ನಿರ್ದೇಶಿಸಿ ನಟಿಸಿರುವ ಜೈ’ ಸಿನಿಮಾ ನವೆಂಬರ್ 14ರಂದು ತೆರೆಗೆ ಬರುತ್ತಿದೆ. ತುಳು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಅದ್ವಿತಿ ಶೆಟ್ಟಿ, ರಾಜ್ ದೀಪಕ್ ಶೆಟ್ಟಿ, ಅರವಿಂದ್ ಬೋಳಾರ್ ಸೇರಿದಂತೆ ಅನೇಕ ನಟರು ಚಿತ್ರದಲ್ಲಿದ್ದಾರೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಂಗಳೂರು ಕನ್ನಡ ಶೈಲಿಯಲ್ಲಿ ಹಳ್ಳಿಯ ರಾಜಕೀಯದ ಹಿನ್ನೆಲೆಯ  ಜೈ ಸಿನಿಮಾ ಈಗಾಗಲೇ ಕುತೂಹಲ ಮೂಡಿಸಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!