ದರ್ಶನ್‌ಗೆ ವಾಕಿಂಗ್, ಊಟದ ಸೌಲಭ್ಯ ಬಂದ್

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರಿಗೆ ಕನಿಷ್ಠ ಸೌಲಭ್ಯಗಳಿಗೂ ಪರದಾಡಬೇಕಾದ ಪರಿಸ್ಥಿತಿ ಬಂದಿದೆ.

ಜೈಲಿನ ಶಿಸ್ತು ಮತ್ತು ಭದ್ರತೆ ಹೆಚ್ಚಿಸುವ ಹಿನ್ನೆಲೆಯಲ್ಲಿ ಜೈಲು ಆಡಳಿತವು ಹಲವು ಸೌಲಭ್ಯಗಳನ್ನು ಹಿಂತೆಗೆದುಕೊಂಡಿದ್ದು,ಹೊಸ ಆದೇಶದಂತೆ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳ ಬೆನ್ನಲ್ಲೇ ಐಪಿಎಸ್ ಅಧಿಕಾರಿ ಅಂಶು ಕುಮಾರ್ ಅವರನ್ನು ಮುಖ್ಯ ಜೈಲು ಅಧೀಕ್ಷಕರಾಗಿ ನೇಮಕ ಮಾಡಲಾಗಿದೆ. ಅವರು ಅಧಿಕಾರ ಸ್ವೀಕರಿಸಿದ ನಂತರ  ಜೈಲಿನ ಎಲ್ಲಾ ಘಟಕಗಳಲ್ಲಿ ಮಾನಿಟರಿಂಗ್ ನಡೆಯುತ್ತಿದೆ.

ದರ್ಶನ್ ಅವರ ಮೇಲೂ  ಕಠಿಣ ಕ್ರಮಗಳ ಪರಿಣಾಮ ನೇರವಾಗಿ ಬಿದ್ದಿದೆ. ಅವರಿಗೆ ಕೊಠಡಿಗೆ ಊಟ, ತಿಂಡಿ ತಲುಪಿಸುವ ವ್ಯವಸ್ಥೆ ನಿಲ್ಲಿಸಲಾಗಿದೆ. ಜೈಲಿನ ಸಿಬ್ಬಂದಿಯೇ ತಂದುಕೊಡುತ್ತಿದ್ದ ಆಹಾರವನ್ನು ಇನ್ನು ಮುಂದೆ ದರ್ಶನ್ ತಾವೇ  ಹೋಗಿ ಪಡೆದುಕೊಳ್ಳಬೇಕಾಗಿದೆ.  ಬಟ್ಟೆ ಒಗೆಯುವುದು ಮತ್ತು ಒಣಗಿಸುವ ಅಗತ್ಯ ಕೆಲಸಗಳಿಗಾಗಿ ಮಾತ್ರ ಹೊರಗೆ ಬರುವ ಅವಕಾಶ ನೀಡಲಾಗಿದೆ.  ಅವರ ಜೈಲು ದಿನಚರಿಯನ್ನು ಇನ್ನಷ್ಟು ಕಠಿಣಗೊಳಿಸಿದೆ.

ದರ್ಶನ್ ಕೊಠಡಿ ಹೊರಭಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಅವರ ಕೊಠಡಿಗೆ ಪ್ರವೇಶಿಸುವ ವಾರ್ಡರ್‌ಗಳಿಗೆ ವೋರ್ನ್ ಕ್ಯಾಮೆರಾ  ಧರಿಸುವುದು ಕಡ್ಡಾಯ ಮಾಡಲಾಗಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!