ಸಿಲ್ಕ್ ಸ್ಮಿತಾ ಕಚ್ಚಿದ ಸೇಬಿಗೆ ಲಕ್ಷ ಬೆಲೆ!

ತೆಲುಗು ಚಿತ್ರರಂಗದ ಪ್ರಭಾವಶಾಲಿ ನಟಿ ಸಿಲ್ಕ್ ಸ್ಮಿತಾ ಕಚ್ಚಿದ ಸೇಬನ್ನು ಹರಾಜಿನಲ್ಲಿ ಆ ಕಾಲದಲ್ಲಿ ಒಬ್ಬ ವ್ಯಕ್ತಿ ದೊಡ್ಡ ಮೊತ್ತಕ್ಕೆ  ಖರೀದಿಸಿದ್ದಾಗಿ ನಿರ್ದೇಶಕ ಜಯಕುಮಾರ್ ಹೇಳಿದ್ದಾರೆ.

‘ಒಂದು ಕಾಲದಲ್ಲಿ ಸಿಲ್ಕ್ ಸ್ಮಿತಾ ಮೇಲಿನ ಜನರ ಕ್ರೇಜ್ ಅಪಾರವಾಗಿತ್ತು. ಒಂದು ಸಮಾರಂಭದಲ್ಲಿ ಅವರು ಕಚ್ಚಿದ ಸೇಬನ್ನು ಹರಾಜಿನಲ್ಲಿ ಇಡಲಾಗಿದ್ದು, ಅದನ್ನು ಒಬ್ಬ ವ್ಯಕ್ತಿ ರೂ. 25,000ಕ್ಕೆ ಖರೀದಿಸಿದ್ದಾನೆ. ಆ ಕಾಲದಲ್ಲಿ ಇದು ಬಹಳ ದೊಡ್ಡ ಮೊತ್ತವಾಗಿತ್ತು. ಯಾವ ನಾಯಕಿಗೂ ಇಷ್ಟು ಮಟ್ಟಿನ ಜನಪ್ರಿಯತೆ ಇರಲಿಲ್ಲ” ಎಂದು ಅವರು ಹೇಳಿದ್ದಾರೆ.

‘ಆ ಸಮಯದಲ್ಲಿ ವಿತರಕರು ಸಹ ಸಿಲ್ಕ್ ಸ್ಮಿತಾ ನಟಿಸಿದ ಹಾಡು ಅಥವಾ ನೃತ್ಯ ಇರುವ ಚಿತ್ರಗಳನ್ನೇ ಖರೀದಿಸುತ್ತಿದ್ದರು. ಅವರ ಹೆಸರು   ಚಿತ್ರದ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸುವಂತಿತ್ತು. ಇದು ಅವರ ಅಪಾರ ಜನಪ್ರಿಯತೆಯ ಸ್ಪಷ್ಟ ಉದಾಹರಣೆಯಾಗಿದೆ’ ಎಂದು ಜಯಕುಮಾರ್ ತಿಳಿಸಿದ್ದಾರೆ.

‘ಸಿಲ್ಕ್ ಸ್ಮಿತಾ  ತುಂಬಾ ಸೌಮ್ಯ ಸ್ವಭಾವದವರಾಗಿದ್ದರು.  ತಮ್ಮನ್ನು ತಾವು ಸ್ಥಾಪಿಸಿಕೊಳ್ಳಲು ಹಲವು ಸಂಕಷ್ಟಗಳನ್ನು ಎದುರಿಸಿದ್ದರು. ಆ ಕಷ್ಟಗಳೇ ಅವರನ್ನು ಮತ್ತಷ್ಟು ದೃಢವಾಗಿಸಿವೆ’ ಎನ್ನುತ್ತಾರೆ ಅವರು

 ಸಿಲ್ಕ್ ಸ್ಮಿತಾ ಕ ಅವರ ಜೀವನದ ಅಂತ್ಯ ನಿಗೂಢವಾಗಿಯೇ ಉಳಿದಿದೆ. ಕೆಲವರು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರೆ, ಇನ್ನೂ ಕೆಲವರು ಅವರ ಸಾವಿನ ಹಿಂದೆ ಬೇರೆ ಕಾರಣಗಳಿರಬಹುದು ಎಂದು ಅನುಮಾನ ವ್ಯಕ್ತಪಡಿಸಿತ್ತಾರೆ.

ಸಿಲ್ಕ್  ತಮ್ಮ ಜೀವನದಲ್ಲಿ ಸಾಕಷ್ಟು ಸಂಪಾದನೆ ಮಾಡಿದ್ದರೂ, ಕೊನೆಯಲ್ಲಿ ಆರ್ಥಿಕ ಸಂಕಷ್ಟ ಮತ್ತು ಮೋಸಕ್ಕೆ ಒಳಗಾದರು ಎಂದು ಹೇಳಲಾಗುತ್ತದೆ. ಒಬ್ಬ ವೈದ್ಯರ ಪ್ರಭಾವದಿಂದ ಅವರು ತಮ್ಮ ವೃತ್ತಿಜೀವನದಲ್ಲಿ ಬದಲಾವಣೆ ಮಾಡಲು ಯತ್ನಿಸಿದ್ದು, ಅದರಿಂದ ಅವರಿಗೆ ನಷ್ಟ ಉಂಟಾಯಿತು ಎಂದು ಹೇಳಲಾಗುತ್ತದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!