ಮಂಗಳಮುಖಿಯರ ಬದುಕನ್ನು ಆಧರಿಸಿದ ಶಿವಲೀಲಾ ಚಿತ್ರ, 5 ಭಾಷೆಗಳಲ್ಲಿ ಬರಲಿದ್ದು ಚಿತ್ರದಲ್ಲಿ ಸ್ವತಃ ಮಂಗಳ ಮುಖಿಯರು ನಟಿಸಲಿದ್ದಾರೆ.
ಚಿತ್ರತಂಡ ಮಂಗಳ ಮುಖಿಯರಿಗೆ ಆರು ತಿಂಗಳ ತರಬೇತಿ ನೀಡಿದೆ. 4 ರಿಂದ 5 ಸಾವಿರ ಮಂಗಳಮುಖಿಯರು ಚಿತ್ರದಲ್ಲಿ ಭಾಗಿಯಾಗಿರುವುದು ವಿಶೇಷ ಆಗಿದೆ.
ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ಅಶೋಕ್ ಜಯರಾಮ್, ಚಿತ್ರ ಮಂಗಳಮುಖಿಯರ ಕಥೆಯನ್ನು ಹೊಂದಿದೆ. ಇಲ್ಲಿ ಮಂಜಮ್ಮ ಜೋಗತಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಇದು ಅವರ ಜೀವನ ಕಥೆ ಅಲ್ಲ. ಮಂಜಮ್ಮ ಅವರು ಚಿತ್ರದಲ್ಲಿ ಹಾಡಲಿದ್ದಾರೆ. ಚಿತ್ರ ಮಂಗಳಮುಖಿಯರ ಕಷ್ಟ, ಜೀವನದ ಬಗ್ಗೆ ಬೆಳಕನ್ನು ಚೆಲ್ಲುತ್ತದೆ ಎಂದು ಹೇಳಿದ್ದಾರೆ.
ಚಿತ್ರ ಒಟ್ಟು ಐದು ಭಾಷೆಗಳಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತಯಾರಾಗುತ್ತಿದೆ. ಕಥೆ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ಮಾಣ, ನಿರ್ದೇಶನದ ಜೊತೆಗೆ ಸಾಹಸ ದೃಶ್ಯಗಳನ್ನು ತಾವೇ ಸಂಯೋಜನೆ ಮಾಡುತ್ತಿರುವುದಾಗಿ ಸ್ವತಃ ಫೈಟ್ ಮಾಸ್ಟರ್ ಆಗಿರುವ ಅಶೋಕ್ ಜಯರಾಮ್ ಹೇಳಿದ್ದಾರೆ.
ಚಿತ್ರಕ್ಕೆ ಚಂದ್ರು ಓಬಯ್ಯ ಅವರು ಸಂಗೀತ ನೀಡಿದ್ದಾರೆ. ಕಲಾ ನಿರ್ದೇಶನ ಲೀಜಾ ಥಾಮಸ್ ಅವರದ್ದು ಆಗಿದೆ. ಕ್ಯಾಮೆರಾ ಚಿತ್ತೂರು ಸೂರಿ ಅವರದ್ದು. ಹೊಸ ಪರಿಚಯ ಆಗಿರುವ ಆರ್ಯನ್ ಅವರು ನಾಯಕ ನಟ ಆಗಿ ನಡೆಸುತ್ತಿದ್ದಾರೆ. ಚಿತ್ರದಲ್ಲಿ ನಾಗೇಂದ್ರ ಅರಸ್, ಉಗ್ರಂ ರವಿ, ಟೆನಿಸ್ ಕೃಷ್ಣ, ಉಮೇಶ್, ಮೂಗೂರು ಸುರೇಶ್ ಇತರರು ನಟಿಸಿದ್ದಾರೆ ಎಂದು ಹೇಳಿದ್ದಾರೆ.
ಈಗಾಗಲೇ ಬೆಂಗಳೂರು, ತುಮಕೂರು, ಬಳ್ಳಾರಿ, ಹೊಸಪೇಟೆಯಲ್ಲಿ ಶೂಟಿಂಗ್ ಮಾಡಲಾಗಿದೆ. ಶೇಕಡ 80ರಷ್ಟು ಶೂಟಿಂಗ್ ಮಾಡಲಾಗಿದ್ದು ಉಳಿದ ಶೂಟಿಂಗ್ ಮೈಸೂರಿನಲ್ಲಿ ಮಾಡಲಾಗುವುದು. ಕೇರಳ ಹಾಗೂ ಗೋವಾದಲ್ಲಿ ಕೂಡ ಶೂಟಿಂಗ್ ಮಾಡಲಾಗಿದೆ ನಿರ್ದೇಶಕರು ತಿಳಿಸಿದ್ದಾರೆ.
_____
Be the first to comment