ಒಟಿಟಿಗೆ ಬಂತು ಸಪ್ತಸಾಗರದಾಚೆ ಎಲ್ಲೊ ಸೈಡ್ ಬಿ

 ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರ ಸಪ್ತಸಾಗರದಾಚೆ ಎಲ್ಲೊ ಸೈಡ್ ಬಿ ಒಟಿಟಿಯಲ್ಲಿ ಬಿಡುಗಡೆಯಾಗಿದೆ.

ನಿನ್ನೆ ಮಧ‍್ಯರಾತ್ರಿಯಿಂದ ಸಪ್ತಸಾಗರದಾಚೆ ಎಲ್ಲೊ ಸೈಡ್ ಬಿ ಅಮೆಝೋನ್ ಪ್ರೈಮ್ ನಲ್ಲಿ ಪ್ರಸಾರ ಕಾಣುತ್ತಿದೆ. ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗಿ ಎರಡು ತಿಂಗಳ ಬಳಿಕ  ಒಟಿಟಿಯಲ್ಲಿ ಬಿಡುಗಡೆಯಾಗಿದೆ.

ಸಪ್ತಸಾಗರದಾಚೆ ಎಲ್ಲೊ ಸೈಡ್ ಬಿ ಒಟಿಟಿಯಲ್ಲಿ ಬಿಡುಗಡೆ ಯಾವಾಗ ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದರು. ಡಿಸೆಂಬರ್ ಕೊನೆಯಲ್ಲಿ ಬಿಡುಗಡೆಯಾಗಲಿದೆ ಎಂದು ವದಂತಿಗಳಿತ್ತು. ಕೊನೆಗೂ ಸಪ್ತಸಾಗರದಾಚೆ ಎಲ್ಲೊ ಸೈಡ್ ಬಿ ಒಟಿಟಿಯಲ್ಲಿ ಬಿಡುಗಡೆಯಾಗಿದೆ.

ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ  ರುಕ್ಮಿಣಿ ವಸಂತ್, ಚೈತ್ರಾ ಜೆ ಆಚಾರ್ ಸೇರಿದಂತೆ ಹಲವರು ನಟಿಸಿದ್ದಾರೆ. ಇದೊಂದು ಭಾವನಾತ್ಮಕ ಕತೆಯಾಗಿದ್ದು, ಥಿಯೇಟರ್ ನಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!