ಸಂಕೇತ ಭಾಷೆಯಲ್ಲಿ ಬರಲಿದೆ ಸಂಜಯ್ ದತ್ ಚಿತ್ರ!

ಬಾಲಿವುಡ್ ನಟ ಸಂಜಯ್ ದತ್ ಅಭಿನಯದ ಬಹುನಿರೀಕ್ಷಿತ ‘ಆಖ್ರಿ ಸವಾಲ್’ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಕೇತ ಭಾಷೆಯಲ್ಲಿ ತೆರೆಗೆ ಬರಲಿದೆ.

ಹನುಮಾನ್ ಜಯಂತಿಯಂದು ಬಿಡುಗಡೆಯಾದ ಚಿತ್ರದ ಟೀಸರ್ ಗಮನ ಸೆಳೆದಿತ್ತು. ಸಂಕೇತ ಭಾಷೆಯಲ್ಲಿ ಬಿಡುಗಡೆಯಾಗಲಿರುವ ಭಾರತದ ಮೊದಲ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಶ್ರವಣ ದೋಷ ಹೊಂದಿರುವ ಪ್ರೇಕ್ಷಕರಿಗೆ ಸಿನಿಮಾ ಅನುಭವ ಸಿಗುವ ಉದ್ದೇಶದಿಂದ ಚಿತ್ರತಂಡ ಈ ವಿಭಿನ್ನ ಪ್ರಯತ್ನ ಕೈಗೊಂಡಿದೆ. ಚಿತ್ರ ಬಿಡುಗಡೆಯ ಮೊದಲ ದಿನದಿಂದಲೇ ಸಂಕೇತ ಭಾಷೆಯ ಆವೃತ್ತಿ ಚಿತ್ರಮಂದಿರಗಳಲ್ಲಿ ಲಭ್ಯವಾಗಲಿದೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಅಭಿಜೀತ್ ಮೋಹನ್ ವಾರಂಗ್ ಚಿತ್ರ ನಿರ್ದೇಶನ ಮಾಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯ ಕಥೆಯನ್ನು ಇದು ಒಳಗೊಂಡಿದೆ. ಮೇ 8ರಂದು ಸಿನಿಮಾ ಬಿಡುಗಡೆ ಆಗಲಿದೆ.

ಶ್ರವಣ ಸಮಸ್ಯೆ ಎದುರಿಸುತ್ತಿರುವ ಪ್ರೇಕ್ಷಕರು ಈ ಚಿತ್ರವನ್ನು ನೋಡಿ ಆನಂದಿಸಬಹುದು

Be the first to comment

Leave a Reply

Your email address will not be published. Required fields are marked *

Translate »
error: Content is protected !!