ಶಾಂಕುತಲಂ ಚಿತ್ರದಲ್ಲಿ 30 ಲಕ್ಷದ ಸೀರೆ, 93 ಕೋಟಿಯ ಆಭರಣ ಧರಿಸುವ ಮೂಲಕ ಸಮಂತಾ ಸುದ್ದಿ ಆಗಿದ್ದಾರೆ.
ದೊಡ್ಡ ಚಿತ್ರದಲ್ಲಿ ನಟಿಸುತ್ತಿರುವ ಸಮಂತಾ ಚಿತ್ರಕ್ಕಾಗಿ ವಿಶೇಷವಾಗಿ ಅಲಂಕಾರ ಮಾಡಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪುರಾಣ ಹಿನ್ನೆಲೆಯ ಶಾಕುಂತಲಂ ಚಿತ್ರವನ್ನು ಗುಣಶೇಖರ್ ನಿರ್ದೇಶಿಸಿದ್ದು, ನೀಲಿಮಾ ಗುಣ ಮತ್ತು ದಿಲ್ ರಾಜು ಜಂಟಿಯಾಗಿ ನಿರ್ಮಿಸಿದ್ದಾರೆ.
ಶಾಕುಂತಲಂ ಸಿನಿಮಾ ಕಾಳಿದಾಸನ ಅಭಿಜ್ಞಾನಶಾಕುಂತಲಂ ಮಹಾಕಾವ್ಯಆಧರಿಸಿದೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಶಾಕುಂತಲಂ ಸಿನಿಮಾ ಫೆಬ್ರವರಿ 17ರಂದು ವಿಶ್ವಾದ್ಯಂತ ಬಿಡುಗಡೆ ಆಗುತ್ತಿದೆ.
ಚಿತ್ರದ ಟ್ರೇಲರ್, ಹಾಗೂ ‘ಮಲ್ಲಿಕಾಮಲ್ಲಿಕಾ..’ ಹಾಡು ಜನಪ್ರಿಯವಾಗಿದ್ದು, ಸಿನಿಮಾದಲ್ಲಿ ಸಮಂತಾ ತೊಟ್ಟಿರುವ ಸೀರೆ, ಆಭರಣಗಳ ಬೆಲೆಭಾರೀ ಚರ್ಚೆಗೆ ಕಾರಣವಾಗಿದೆ.
___

Be the first to comment