ಸಮಂತಾಗೆ ಗಂಡು ಮಗು ಜನನ

ನಟಿ ಸಮಂತಾ ರುತ್ ಪ್ರಭು ಮತ್ತು ಚಿತ್ರ ನಿರ್ದೇಶಕ ರಾಜ್ ನಿಡಿಮೋರು ದಂಪತಿಗೆ ಗಂಡು ಮಗು ಜನಿಸಿದೆ.

ದಂಪತಿ ಮಗು ಹುಟ್ಟಿದ ದಿನವೇ ಹೆಸರನ್ನೂ ಇಟ್ಟಿದ್ದಾರೆ.’ನಮ್ಮ ಮುದ್ದಾದ ಗಂಡು ಮಗು ದೇವ್ ನಿಡಿಮೋರು 19.11.2026. ನಮ್ಮ ಹೃದಯಗಳು ಹಿಂದೆಂದೂ ಇಷ್ಟು ಸಂತೋಷದಿಂದಿರಲಿಲ್ಲ. ಸಮಂತಾ ಮತ್ತು ರಾಜ್” ಎಂದು  ಖುಷಿಯ ವಿಚಾರವನ್ನು   ಶುಕ್ರವಾರ ಸಮಂತಾ , ನವಜಾತ ಶಿಶುವಿನ ಮೊದಲ ಫೋಟೊವನ್ನು ಅಭಿಮಾನಿಗಳೊಂದಿಗೆ ಇನ್ಸ್ಟಾಗ್ರಾಂನಲ್ಲಿ  ಹಂಚಿಕೊಂಡಿದ್ದಾರೆ.

ಫೋಟೊದಲ್ಲಿ ಪೋಷಕರು ತಮ್ಮ ಮಗುವಿನ ಕೈಬೆರಳುಗಳನ್ನು ಪ್ರೀತಿಯಿಂದ ಹಿಡಿದುಕೊಂಡಿರುವ ದೃಶ್ಯವಿದೆ. ಸಿನಿಮಾ ರಂಗದ ಗಣ್ಯರು, ಅಭಿಮಾನಿಗಳಿಂದ ದಂಪತಿಗೆ ಶುಭಾಶಯಗಳ ಮಹಾಪೂರ  ಹರಿದು ಬಂದಿದೆ.

ಕಳೆದ ಜೂನ್‌ನಲ್ಲಿ ತಮ್ಮ ನಿರ್ಮಾಣದ ಚಿತ್ರ ‘ಮಾ ಇಂಟಿ ಬಂಗಾರಂ’ ಯಶಸ್ಸಿನ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸಮಂತಾ ಗರ್ಭವತಿ ಎಂಬ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದರು. ಈ ಚಿತ್ರ 100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿತ್ತು.

ಸಮಂತಾ ಮತ್ತು ರಾಜ್ ಅವರ ಸಂಬಂಧ ವೃತ್ತಿಪರ ಒಡನಾಟದಿಂದ ಆರಂಭವಾಗಿತ್ತು. 2021ರಲ್ಲಿ ಬಿಡುಗಡೆಯಾದ ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸರಣಿಯಲ್ಲಿ ಇಬ್ಬರೂ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ್ದರು. ಸಮಂತಾ ಅವರ ಮೊದಲ ನಿರ್ಮಾಣದ ಚಿತ್ರ ಶುಭಂನಲ್ಲೂ ರಾಜ್ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ ವರ್ಷ ಡಿಸೆಂಬರ್ 1ರಂದು ರಾಜ್ ನಿಡಿಮೋರು ಅವರನ್ನು ಸಮಂತಾ ವಿವಾಹವಾದರು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!