ಸಾಲಿಗ್ರಾಮ’ ಚಿತ್ರದ ಧ್ವನಿಸಾಂದ್ರಿಕೆ ಬಿಡುಗಡೆ

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಸಾಲಿಗ್ರಾಮ’ ಚಿತ್ರದ ಧ್ವನಿಸಾಂದ್ರಿಕೆ ಬಿಡುಗಡೆ ಸಮಾರಂಭ  ವಸಂತನಗರದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಅದ್ದೂರಿಯಾಗಿ ನಡೆಯಿತು. ಹಿರಿಯ ನಿರ್ದೇಶಕ ಕೆ.ಎಸ್ ಭಗವಾನ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ ಚಿನ್ನೇಗೌಡ, ಹ್ಯಾಟ್ರಿಕ್ ಹೀರೋ ಶಿವರಾಜ ಕುಮಾರ್, ಚಿತ್ರಸಾಹಿತಿ ಕೆ. ಕಲ್ಯಾಣ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದು ‘ಸಾಲಿಗ್ರಾಮ’ ಚಿತ್ರದ ಆಡಿಯೋವನ್ನು ಬಿಡುಗಡೆಗೊಳಿಸಿದರು.

ಇದೇ ವೇಳೆ ಮಾತನಾಡಿದ ಹಿರಿಯ ನಿರ್ದೇಶಕ ಕೆ.ಎಸ್ ಭಗವಾನ್, ‘ಇಂದಿನ ಯುವ ಪೀಳಿಗೆಯು ಹೊಸ ಹೊಸ ಕಲ್ಪನೆಗಳೊಂದಿಗೆ ಚಿತ್ರಗಳನ್ನು ಜನರಿಗೆ ಉಣಬಡಿಸುತ್ತಿದ್ದಾರೆ. ಆಧುನಿಕ ನವ ನವೀನ ರೀತಿಯಲ್ಲಿ ವಿಕಾಸಗಳಾಗುತ್ತಿರುವಂತೆ, ಹೊಸತರದ ಸಿನಿಮಾಗಳು ಬರುತ್ತಿರುವುದು ಸಂತಸದ ವಿಷಯ. ಕನ್ನಡ ಚಿತ್ರರಂಗದಲ್ಲಿ ಈಗ ಸುವರ್ಣ ಯುಗ ಆರಂಭವಾಗಿದೆ.

ನಮ್ಮ ಕಾಲದಲ್ಲಿ ವರ್ಷಕ್ಕೆ 6-7 ಸಿನಿಮಾಗಳು ಬರುತ್ತಿದ್ದವು. ಈಗ 250 ಸಂಖ್ಯೆಯಲ್ಲಿ ತೆರೆ ಕಾಣುತ್ತಿರುವುದರಿಂದ ಚಂದನವನ ಪ್ರವರ್ಧಮಾನಕ್ಕೆ ಬರುತ್ತಿದೆ. ಹಿರಿತನ, ಸಿರಿತನ ಹೀಗೆ ಮುಂದುವರೆಯಲಿ’ ಎಂದರು. ‘ಸಾಲಿಗ್ರಾಮವನ್ನು ಪವಿತ್ರವಾದ ಕಲ್ಲಿನಲ್ಲಿ ತಿಕ್ಕಿದರೆ ಅದು ಬಂಗಾರವಾಗುತ್ತದೆಂದು ಹಿರಿಯರು ಹೇಳಿದ್ದಾರೆ. ಅದೇ ರೀತಿ ಈ ಚಿತ್ರ ಕೂಡ ಬಂಗಾರವಾಗಲಿ’ ಎಂದು ಪ್ರೇಮಕವಿ ಕೆ.ಕಲ್ಯಾಣ್.

ಸಿನಿಮಾಗಳ ಶೂಟಿಂಗ್ ಬೇಕಾದ ಸಾಮಗ್ರಿಗಳನ್ನು ಬಾಡಿಗೆಗೆ ನೀಡುವ ಉದ್ಯಮವನ್ನು ನಡೆಸುತ್ತಿರುವ, ಕಳೆದ ಒಂದೂವರೆ ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಹರ್ಷ ‘ಸಾಲಿಗ್ರಾಮ’ ಚಿತ್ರಕ್ಕೆ ಹರ್ಷ ಕತೆ ಬರೆದು, ಛಾಯಾಗ್ರಹಣ, ನಿರ್ಮಾಣ ಮತ್ತು ನಿರ್ದೇಶನದ ಹೊಣೆಯನ್ನೂ ವಹಿಸಿಕೊಂಡಿದ್ದಾರೆ.

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಹರ್ಷ, ‘ಕರ್ಮ ಎನ್ನುವ ಪರಿಕಲ್ಪನೆಯೊಂದಿಗೆ ಕತೆಯನ್ನು ಬರೆಯಲಾಗಿದೆ. ನಾಯಕನಾದವನು ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳು, ಪುನರ್ ಜನ್ಮದಲ್ಲಿ ಆತನ ಸಂಸಾರಕ್ಕೆ ಕಾಡುತ್ತದೆ. ಸಾಲಿಗ್ರಾಮ ಎನ್ನುವ ಪೂಜಿಸುವುದರೊಂದಿಗೆ ದುಷ್ಟಶಕ್ತಿಯನ್ನು ಹೋಗಲಾಡಿಸುವುದೇ ಒಂದು ಏಳೆಯ ಸಾರಾಂಶವಾಗಿದೆ’ ಎಂದು ಕತೆಯ ತಿರುಳನ್ನು ತೆರೆದಿಟ್ಟರು. ‘ಸಾಲಿಗ್ರಾಮ’ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಸನ್ನಿರಾಜ್ ಗೀತೆಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

This Article Has 1 Comment
  1. Pingback: Agile DevOps

Leave a Reply

Your email address will not be published. Required fields are marked *

Translate »
error: Content is protected !!