ಬಲ ಕೈನಲ್ಲಿ ಕೊಟ್ಟಿದ್ದು ಎಡಕೈ ಗೂ ಗೊತ್ತಾಗಬಾರದು ಅನ್ನುವ ಮಾತನ್ನು ಕೇಲವರು ನಿಜ ಮಾಡಿರುತ್ತಾರೆ ಅವರ ಸಾಲಿನಲ್ಲಿ ಈಗ ಸಾಹಸ ಸಿಂಹ ವಿಷ್ಣುವರ್ಧನ್ ಕೂಡ ಸೇರಿದ್ದಾರೆ…ಈಗೀನ ಯುವ ಪೀಳಿಗೆಯ ಜನರಿಗೆ ಇವರ ಬಗ್ಗೆ ಅದೆಷ್ಟೊ ವಿಚಾರಗಳು ಯಾರಿಗು ಅಷ್ಟಾಗಿ ತಿಳಿದಿರುವುದಿಲ್ಲಾ ಅಂಥಹದ್ದೆ ಒಂದು ಸುದ್ದಿ ವಿಷ್ಣು ಖರೀದಿಸಿದ್ದ ಮೊದಲ ಕಾರ್ ನದ್ದು…
ವಿಷ್ಣುವರ್ಧನ್ ಬಳಸಿದ ಮೊದಲ ಕಾರ್ ಯಾವ್ದು?ಆ ಕಾರ್ ಈಗ ಎಲ್ಲಿದೆ?ಎನ್ನುವ ಬಗ್ಗೆ ಪ್ರಶ್ನೆಗೆ ಉತ್ತರ ಇಲ್ಲಿದೆ..ಎಸ್ ವಿಷ್ಣುವರ್ಧನ್ ಅವರು ಬಳಸುತ್ತಿದ್ದ ಮೊದಲ ಕಾರ್ ಈಗ ಧರ್ಮಸ್ಥಳದ ಮ್ಯೂಸಿಯಂ ನಲ್ಲಿಯಿದೆ..ಅಷ್ಟಕ್ಕೂ ಈ ಕಾರ್ ಬೆಂಗಳೂರಿನಿಂದ ಧರ್ಮಸ್ಥಳವನ್ನು ತಲುಪಲು ಕಾರಣವೇನು?ಅನ್ನೊದಕ್ಕೆ ಉತ್ತರ ಇಲ್ಲಿದೆ..ಡಾ.ವೀರೇಂದ್ರ ಹೆಗ್ಗಡೆ ಯವರು ಧರ್ಮಸ್ಥಳದ ಮ್ಯೂಸಿಯಂ ಆರಂಭ ಮಾಡಿದಾಗ ಸಾಹಸ ಸಿಂಹ ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿದ್ದರಂತೆ..ಆಗ ವಸ್ತು ಸಂಗ್ರಹಾಲಯಕ್ಕೆ ನಿಮ್ಮ ಕಡೆಯಿಂದ ಏನಾನ್ನದರೂ ನೀಡಿ ಎಂದು ಕೇಳಿದಾಗ ವಿಷ್ಣು ತಾನು ಇಷ್ಟು ದಿನ ಪ್ರೀತಿಯಿಂದ ಬಳಸುತ್ತಿದ್ದ ಕಾರ್ ಅನ್ನೇ ತೆಗೆದುಕೊಂಡು ಹೋಗಿ ಅಂದರಂತೆ.ವಿಷ್ಣು ಬಳಸುತ್ತಿದ್ದ ಡಾಟ್ಸ್ ನ್ ಅನ್ನೊ ಕೆ.ಎ ೦೪ ಎಂ ೭೦೭ನಂಬರ್ ನ ಈ ಕಾರು ಇಂದಿಗೂ ಧರ್ಮಸ್ಥಳದ ಮ್ಯೂಸಿಯಂ ನಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು ಈ ಕಾರು ಸಹ ಅತ್ಯಂತ ಪ್ರಸಿದ್ದಿ ಪಡೆದಿದೆ.
Be the first to comment