ಅಪ್ಪು ಸಾವಿಗೆ ಕಾರಣ?

ನಟ ಪುನೀತ್ ರಾಜ್‌ಕುಮಾರ್ ನಿಧನರಾಗಿ 5ವರ್ಷಗಳ ನಂತರ,  ಅವರ ವೈದ್ಯ  ಡಾ. ರಮಣ ರಾವ್ ಅವರು ಪುನೀತ್ ಅವರ ಸಾವಿಗೆ ಕಾರಣವಾದ ಅಂಶವನ್ನು ಬಹಿರಂಗ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಜಿಮ್‌ನಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಕಿಕ್‌ಬಾಕ್ಸಿಂಗ್ ಅಭ್ಯಾಸ ಮಾಡಿದ ನಂತರ ಪುನೀತ್ ತಮ್ಮ ಕ್ಲಿನಿಕ್‌ಗೆ ಬಂದಿದ್ದರು. ಇಸಿಜಿ ವರದಿಯಲ್ಲಿ ಹೃದಯದ ಮೇಲಿನ ಒತ್ತಡ  ಕಂಡು ಬಂತು’ ಎಂದು ಅವರು ವಿವರಿಸಿದ್ದಾರೆ.

‘ಅಪ್ಪು ಕ್ಲಿನಿಕ್‌ಗೆ ಬಂದಾಗ  ವಿಪರೀತ ಬೆವರು ಸುರಿಯುತ್ತಿತ್ತು. ಜಿಮ್‌ಗೆ ಹೋಗಿ ಒಂದೂವರೆ ಗಂಟೆಗಳ ಕಾಲ ಕಿಕ್‌ಬಾಕ್ಸಿಂಗ್ ಮಾಡಿದ್ದಾಗಿ ಅವರು ನನಗೆ ಹೇಳಿದರು. ಅಂದು ಅವರು ಮೊದಲ ಬಾರಿಗೆ ಇದನ್ನು ಪ್ರಯತ್ನಿಸಿ ತುಂಬಾ ಆಯಾಸಗೊಂಡಿದ್ದರು.  ಅವರಿಗೆ ಸುರಿಯುತ್ತಿದ್ದ ಬೆವರನ್ನು ಗಮನಿಸಿದಾಗ ಅವರ ಆರೋಗ್ಯ ಸ್ಥಿತಿಯಲ್ಲಿ ಗಂಭೀರವಾದ ಏನೋ ಇದೆ ಎಂದು ನನಗೆ ಅರಿವಾಯಿತು’ ಎಂದಿದ್ದಾರೆ.

‘ಇದು ಹೃದಯಾಘಾತವಲ್ಲ. ಬದಲಾಗಿ ದೇಹದ ಮೇಲಾದ ಅತಿಯಾದ ಒತ್ತಡ  ಆಗಿತ್ತು. ಏನೋ ಅನಾಹುತ ಸಂಭವಿಸಲಿದೆ ಎಂದು ನನಗೆ ಅರಿವಾಗಿತ್ತು. ನಾನು ಅವರಿಗೆ ಔಷಧ ನೀಡಿದೆ.  ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಿದೆವು. ಅವರು ತಮ್ಮ  ಕಾರಿನಲ್ಲಿ ಪ್ರಯಾಣಿಸಿದರು. ಆ ಸಮಯದಲ್ಲಿ ಅವರು ನಮ್ಮೊಂದಿಗೆ ಮಾತನಾಡುತ್ತಿದ್ದರು. ಕಾರಿನಲ್ಲಿ ಕುಳಿತುಕೊಳ್ಳಲು ಅವರು ಬಯಸಿದ್ದರು. ಆದರೆ ನಾನು ಅವರನ್ನು ಅವರ ಪತ್ನಿ ಅಶ್ವಿನಿ ಅವರ ಮಡಿಲಲ್ಲಿ ತಲೆ ಇಟ್ಟು ವಿಶ್ರಾಂತಿ ಪಡೆಯುವಂತೆ ಕೋರಿದೆ. ಆಸ್ಪತ್ರೆಗೆ ಕರೆದೊಯ್ಯುವಾಗ ಪುನೀತ್ ಗೆ ಪ್ರಜ್ಞೆ ಇತ್ತು ತಮ್ಮ ಸುತ್ತಲಿದ್ದವರೊಂದಿಗೆ ಮಾತನಾಡುತ್ತಿದ್ದರು’ ಎಂದು ಡಾ. ರಮಣ ರಾವ್ ವಿವರಿಸಿದ್ದಾರೆ.

‘ಆಸ್ಪತ್ರೆ ತಲುಪುವಷ್ಟರಲ್ಲಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಅವರು ಆಸ್ಪತ್ರೆ ತಲುಪಲು ಕೇವಲ ಒಂದು ನಿಮಿಷ ಬಾಕಿ ಇರುವಾಗ ಅವರ ಹೃದಯ ಬಡಿತ ನಿಂತುಹೋಗಿತ್ತು. ಅವರು ಆಸ್ಪತ್ರೆಯ ಒಳಗೆ ಪ್ರವೇಶಿಸಿದಾಗ  ಯಾವುದೇ ಹೃದಯ ಬಡಿತವಿರಲಿಲ್ಲ’  ಎಂದು ಅವರು ಹೇಳಿದ್ದಾರೆ.

‘ವಿಕ್ರಮ್ ಆಸ್ಪತ್ರೆಯ ವೈದ್ಯಕೀಯ ತಂಡ  ಅಗತ್ಯ ತುರ್ತು ಚಿಕಿತ್ಸಾ ವಿಧಾನಗಳನ್ನು ಅನುಸರಿಸುವ ಮೂಲಕ ನಟನನ್ನು ಉಳಿಸಿಕೊಳ್ಳಲು ಪ್ರಯತ್ನಿಸಿತು. ಆದರೆ ಪ್ರಯತ್ನಗಳು ಫಲ ನೀಡಲಿಲ್ಲ.  ಇದು ನಮ್ಮೆಲ್ಲರಿಗೂ ಅತ್ಯಂತ ದುಃಖಕರ ಕ್ಷಣಗಳಲ್ಲಿ ಒಂದಾಗಿತ್ತು.  ನನ್ನ ಸ್ವಂತ ಮಗನನ್ನೇ ಕಳೆದುಕೊಂಡಂತೆ ಭಾಸವಾಯಿತು’ ಎಂದಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!