Rashmika Mandanna :’ಹೊಟ್ಟೆ ಸುಟ್ಟ ಹಾಗಾಗುತ್ತಿತ್ತು’ ಎಂದ ನಟಿ

‘ನಾನು  ಮೊದಲ ಸಿನಿಮಾದಲ್ಲಿ ಸಕ್ಸಸ್ ಪಡೆಯುವ ಮೊದಲು ಕನಿಷ್ಠ 25 ಬಾರಿ ರಿಜೆಕ್ಟ್ ಆಗಿದ್ದೇನೆ. ಆದರೆ ನಾನು ರಿಜೆಕ್ಟ್ ಆದಾಗ ನನಗೆ ಅತೀವ ಸಂಕಟವಾಗುತ್ತಿತ್ತು. ಹೊಟ್ಟೆ ಸುಟ್ಟ ಹಾಗಾಗುತ್ತಿತ್ತು’ ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ.

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿ ಜೀವನದ ಮೊದಲು ನಡೆದ ಘಟನೆಯನ್ನು ರಿವೀಲ್ ಮಾಡಿದ್ದಾರೆ.

‘ನಾನು ಒಂದು ಸಿನಿಮಾಗೆ  ಸೆಲೆಕ್ಟ್ ಆಗಿ ಎರಡು ತಿಂಗಳು ಟ್ರೇನಿಂಗ್ ಪಡೆದಿದ್ದೆ.ಆ ಸಿನಿಮಾಕ್ಕೆ ‘ಗೆಳಯರೇ ಗೇಳತಿಯರೇ’ ಎಂದು ಟೈಟಲ್ ಇಡಲಾಗಿತ್ತು. ಆದರೆ ಆ ಚಿತ್ರ ಟೇಕ್‌ ಅಪ್‌ ಆಗಲೇ ಇಲ್ಲ. ಅದಾದ ಬಳಿಕ ಕೂಡ ಹಲವು ಕಡೆ ರಿಜೆಕ್ಟ್ ಎಂದು ಬಾಯಿ ಬಿಟ್ಟು ಹೇಳದಿದ್ದರೂ ನಾನು ಸೆಲೆಕ್ಟ್ ಎಂದು ಹೇಳಲಿಲ್ಲ. ಹಲವರು ನನ್ನ ಫೇಸ್‌ ಆಕ್ಟಿಂಗ್‌ಗೆ ಸೂಟ್ ಆಗಲ್ಲ ಅಂದ್ರು. ಇನ್ನೂ ಕೆಲವರು ನನಗೆ ಆಕ್ಟಿಂಗ್ ಬರುವುದಿಲ್ಲ ಅಂದ್ರು. ಹಲವರು ನಾನು ನಟಿಯಾಗಲು ಸೂಕ್ತವಾಗಿಲ್ಲ ಅಂದ್ರು. ನಾನು ರಿಜೆಕ್ಟ್ ಆದಾಗ ನನಗೆ ಅತೀವ ಸಂಕಟವಾಗುತ್ತಿತ್ತು. ಹೊಟ್ಟೆ ಸುಟ್ಟ ಹಾಗಾಗುತ್ತಿತ್ತು. ನನ್ನನ್ನು ರಿಜೆಕ್ಟ್ ಮಾಡಿದವರ ಮೇಲೆ ನನಗೆ ಕೋಪ ಇರಲಿಲ್ಲ. ದ್ವೇಷ ಇರಲಿಲ್ಲ. ಆದರೆ ನನ್ನ ಮನಸ್ಸಿಗೆ ತುಂಬಾ ನೋವಾಗುತ್ತಿತ್ತು’ ಎಂದಿದ್ದಾರೆ ರಶ್ಮಿಕಾ.

ಇಷ್ಟೆಲ್ಲಾ ಆದ ಬಳಿಕ ರಶ್ಮಿಕಾ ಮಂದಣ್ಣ ಅವರಿಗೆ ಕನ್ನಡದ ‘ಕಿರಿಕ್ ಪಾರ್ಟಿ’ ಸಿಕ್ಕಿದ್ದು, ಆ ಮೂಲಕ ಅವರು ಯಶಸ್ಸಿನ ಮೆಟ್ಟಿಲೇರಿದ್ದು.  ರಶ್ಮಿಕಾ ‘ಕಿರಿಕ್ ಪಾರ್ಟಿ’ ಸಿನಿಮಾದ ಮೂಲಕ ರಾತ್ರೋ ರಾತ್ರಿ ನ್ಯಾಷನಲ್ ಕ್ರಶ್ ಪಟ್ಟ ಗಿಟ್ಟಿಸಿಕೊಂಡರು. ರಶ್ಮಿಕಾ ಸಕ್ಸಸ್ ಹಿಂದೆ ಅಪಾರವಾದ ನೋವಿದೆ, ಶ್ರಮವಿದೆ. ಅದನ್ನು ಅವರು ಎಲ್ಲೂ ಹೇಳಿಕೊಂಡಿಲ್ಲ.

ರಶ್ಮಿಕಾ ಮಂದಣ್ಣ ಅವರು ಸದ್ಯ ‘ಪುಷ್ಪಾ 2’ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಅಲ್ಲು ಅರ್ಜುನ್ ನಟನೆಯ ಈ ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!