ದಕ್ಷಿಣ ಭಾರತದ ಚಿತ್ರರಂಗದ ಗ್ಲಾಮರ್ ನಟಿ ಆಗಿ ಮಿಂಚಿದ್ದ ರಂಭಾ ಅವರು ಸರಿಯಾಗಿ ನಡೆದಾಡಲು ಕಷ್ಟಪಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದ ದೃಶ್ಯಗಳು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ರಂಭಾ ನಿಧಾನವಾಗಿ ಹೆಜ್ಜೆ ಇಡುತ್ತಾ ಸಾಗುತ್ತಿರುವುದು ಕಂಡು ಬಂದಿದೆ. ಈ ಹಿಂದೆ ಸಂಭವಿಸಿದ್ದ ಕಾರು ಅಪಘಾತದ ಪರಿಣಾಮ ಅಥವಾ ಮಂಡಿ ನೋವಿನ ಸಮಸ್ಯೆಯಿಂದಾಗಿ ಅವರಿಗೆ ಈ ಸ್ಥಿತಿ ಎದುರಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ.
2022ರ ನವೆಂಬರ್ನಲ್ಲಿ ಕೆನಡಾದ ಟೊರೊಂಟೊದಲ್ಲಿ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ಮರಳುತ್ತಿದ್ದ ವೇಳೆ ರಂಭಾ ಅವರ ಕಾರಿಗೆ ಮತ್ತೊಂದು ವಾಹನ ಡಿಕ್ಕಿ ಹೊಡೆದಿತ್ತು. ಅವರ ಆರೋಗ್ಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ರಂಭಾ ಕನ್ನಡದಲ್ಲಿ ‘ಸರ್ವರ್ ಸೋಮಣ್ಣ’, ‘ಓ ಪ್ರೇಮವೇ’, ‘ಗಂಡುಗಲಿ ಕುಮಾರರಾಮ’, ‘ಭಾವ ಬಾಮೈದ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿ ಜನಪ್ರಿಯತೆ ಗಳಿಸಿದ್ದಾರೆ. ಸದ್ಯ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.





Be the first to comment