Raksha Nimbargi : ಸೀರಿಯಲ್ ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ರಕ್ಷಾ ನಿಂಬರ್ಗಿ

ಈಗಾಗಲೇ ಸಿನಿಮಾ ನಟನೆಯ ಮೂಲಕ ಗುರುತಿಸಿಕೊಂಡಿರುವ ಉದಯೋನ್ಮುಖ ಕಲಾವಿದೆ ರಕ್ಷಾ ನಿಂಬರ್ಗಿ (Raksha Nimbargi) ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ ಹೊಸ ಧಾರಾವಾಹಿ ” ಪ್ರೀತಿಯ ಅರಸಿ” ಯ ನಾಯಕಿ ಆಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಅಕ್ಟೋಬರ್ 16 ರಿಂದ ಪ್ರತಿ ದಿನ ರಾತ್ರಿ 9 ಗಂಟೆಗೆ ” ಪ್ರೀತಿಯ ಅರಸಿ ” ಧಾರವಾಹಿ ಪ್ರಸಾರ ಆಗುತ್ತಿದೆ. ಇದು ಅಪೂರ್ಣ ಮನಸ್ಸುಗಳ ಪರಿಪೂರ್ಣ ಪ್ರೇಮ ಕಥೆಯನ್ನು ಹೊಂದಿದೆ. ಈ ಧಾರಾವಾಹಿಯ ನಾಯಕಿ ಅಂಜಲಿ ಪಾತ್ರವನ್ನು ರಕ್ಷಾ ನಿಂಬರ್ಗಿ (Raksha Nimbargi ) ನಿರ್ವಹಿಸುತ್ತಿದ್ದಾರೆ. ಶೃತಿ ನಾಯ್ಡು ನಿರ್ಮಿಸಿ, ರಮೇಶ್ ಇಂದ್ರ ನಿರ್ದೇಶಸುತ್ತಿರುವ ಪ್ರೇಮ ಕಥೆಯಲ್ಲಿ ಕಥಾ ನಾಯಕ ರಾಕಿಯಾಗಿ ಪೃಥ್ವಿ ಶೆಟ್ಟಿ ನಟಿಸುತ್ತಿದ್ದಾರೆ.

ರಕ್ಷಾ ನಿಂಬರ್ಗಿ (Raksha Nimbargi) ಮೂಲತಃ ಹುಬ್ಬಳ್ಳಿಯವರು. ಈಗ ಅಭಿನಯದಲ್ಲಿ ತೊಡಗಿಸಿಕೊಂಡ ಮೇಲೆ ಬೆಂಗಳೂರಿನಲ್ಲಿ ಸೆಟ್ಲ್ ಆಗಿದ್ದಾರೆ. ಇವರು ಕಲಾ ಕುಟುಂಬದ ಹಿನ್ನೆಲೆಯನ್ನು ಹೊಂದಿದ್ದಾರೆ.

ಈಗಾಗಲೇ ರಕ್ಷಾ ನಿಂಬರ್ಗಿ(Raksha Nimbargi) ಅವರು ಬಿಂಗೂ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಶೇಕಡ 80ರಷ್ಟು ಇವರ ಪಾತ್ರದ ಶೂಟಿಂಗ್ ಈಗಾಗಲೇ ಮುಕ್ತಾಯ ಆಗಿದೆ. ಉಳಿದ ಶೂಟಿಂಗ್ ಅಕ್ಟೋಬರ್ ತಿಂಗಳಿನಲ್ಲಿ ನಡೆಯುವ ಸಾಧ್ಯತೆ ಇದೆ.

ರಕ್ಷಾ ನಿಂಬರ್ಗಿ (Raksha Nimbargi) ಅವರ ತಾಯಿ ನಂದಾ ನಿಂಬರ್ಗಿ ಅವರು ಯಶ್ ಸರ್ ದೇಶಪಾಂಡೆ ಅವರ ನಾಟಕಗಳಲ್ಲಿ ಅಭಿನಯಿಸಿದ ಅನುಭವವನ್ನು ಹೊಂದಿದ್ದಾರೆ. ಇವರ ತಂದೆ ದತ್ತಾತ್ರೇಯ ನಿಂಬರ್ಗಿ ಅವರು ಮೆಕಾನಿಕಲ್ ಇಂಜಿನಿಯರ್ ಆಗಿದ್ದಾರೆ.

ಕಲಾವಿದ ಕುಟುಂಬದ ಹಿನ್ನೆಲೆ ಹೊಂದಿರುವ ರಕ್ಷಾ ನಿಂಬರ್ಗಿ ಅವರು ಬಾಲ್ಯದಿಂದ ನಟನೆ, ನೃತ್ಯದಲ್ಲಿ ಆಸಕ್ತಿ ಹೊಂದಿದ್ದರು. ಇವರು ಯಾವುದೇ ಅಭಿನಯದ ತರಬೇತಿ ಪಡೆದಿಲ್ಲ. ಆದರೆ ಮಾಡಲಿಂಗ್ ಕ್ಷೇತ್ರದಲ್ಲಿ ಅನುಭವ ಹೊಂದಿದ್ದಾರೆ. ಮಿಸ್ ಮೈಸೂರು, ಮಿಸ್ ಕರ್ನಾಟಕ, ಮಿಸ್ ಹುಬ್ಬಳ್ಳಿ – ಧಾರವಾಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಗಿರಿಜಾ ಲೋಕೇಶ್, ಪದ್ಮ ವಾಸಂತಿ, ಜೈ ಜಗದೀಶ್, ನಾಗೇಂದ್ರ ಅರಸ್ ಸೇರಿದಂತೆ ಅನೇಕ ಹಿರಿಯ ಕಲಾವಿದರು ಇರುವ ಪ್ರೀತಿಯ ಅರಸಿ ಧಾರಾವಾಹಿಯ ಮೂಲಕ ಉತ್ತಮ ಮನ್ನಣೆಯನ್ನು ಗಳಿಸುವ ನಿರೀಕ್ಷೆಯನ್ನು ರಕ್ಷಾ ಹೊಂದಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!