ರಾಯ ಫಿಲಂಸ್ ಲಾಂಛನದಲ್ಲಿ ಮಂಜುನಾಥ್ ಟಿ.ಆರ್ ನಿರ್ಮಿಸಿ, ನಿರ್ದೇಶಿಸಿರುವ “NH66” ಚಿತ್ರದಲ್ಲಿ ತಮ್ಮ ಅಭಿನಯದಿಂದ ರಂಗಭೂಮಿ, ಕಿರುತೆರೆ ಹಾಗೂ ಹಿರಿತೆರೆಯ ಅಭಿಮಾನಿಗಳ ಮನಸೂರೆಗೊಂಡಿರುವ ನಟ ರಾಜೇಶ್ ನಟರಂಗ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್, ರಾಜೇಶ್ ನಟರಂಗ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ರಾಜೇಶ್ ನಟರಂಗ ಅವರ ಫಸ್ಟ್ ಲುಕ್ ಅನಾವರಣವಾಗಿದೆ.
ಡಿಫರೆಂಟ್ ಲುಕ್ ನಲ್ಲಿ ರಾಜೇಶ್ ನಟರಂಗ ಅವರು ಕಾಣಿಸಿಕೊಂಡಿದ್ದು, ಅವರ ಪಾತ್ರ ಏನಿರಬಹುದು ಎಂದು ಕುತೂಹಲ ಹುಟ್ಟಿಸಿದೆ. ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್ ಹಾಗೂ ರಾಜೇಶ್ ನಟರಂಗ ಈ ಚಿತ್ರದ ಪ್ರಮುಖಪಾತ್ರಧಾರಿಗಳು. ಮಂಗಳೂರಿನಿಂದ ಗೋವಾ ಮೂಲಕ ಮುಂಬೈಗೆ ಹೋಗುವ ಮಾರ್ಗದಲ್ಲಿ ನಡೆಯುವ ಕಥೆ ಇದು. ಪ್ರಮೋದ್ ಶೆಟ್ಟಿ ಈ ಚಿತ್ರದಲ್ಲಿ ಕ್ಯಾಬ್ ಡ್ರೈವರ್ ಆಗಿ ಕಾಣಿಸಿಕೊಂಡರೆ, ಶೃತಿ ಹರಿಹರನ್ ಅವರದು ಪಯಣಿಗರ ಪಾತ್ರ. ರಾಜೇಶ್ ನಟರಂಗ ಅವರ ಪಾತ್ರ ಏನು ಎಂಬುದನ್ನು ನಿರ್ದೇಶಕರು ಗೌಪ್ಯವಾಗಿಟ್ಟಿದ್ದಾರೆ. ಒಟ್ಟಿನಲ್ಲಿ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿರುವ ಈ ಚಿತ್ರದ ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಪೂರ್ಣವಾಗಿದ್ದು, ಬಿಡುಗಡೆ ಹಂತಕ್ಕೆ ಹತ್ತಿರವಾಗುತ್ತಿದೆ.
ಮಂತ್ರಾಲಯ ಗುರುಸಾರ್ವಭೌಮರ ಪರಮಭಕ್ತರಾದ ನಿರ್ಮಾಪಕ ಟಿ.ಆರ್.ಮಂಜುನಾಥ್ ರಾಯರ ಸನ್ನಿಧಿಯಲ್ಲೇ ಈ ಚಿತ್ರ ಆರಂಭ ಮಾಡಿದ್ದರು. ಈಗ ಅಂದುಕೊಂಡ ಹಾಗೆ ಚಿತ್ರ ಪೂರ್ಣವಾಗಿರುವುದು ರಾಯರ ಕರುಣೆಯಿಂದಲೆ ಎನ್ನುತ್ತಾರೆ ನಿರ್ಮಾಪಕ ಹಾಗೂ ನಿರ್ದೇಶಕ ಟಿ.ಆರ್.ಮಂಜುನಾಥ್.
ನಿರ್ದೇಶಕರೆ ಅವರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಸುನೀತ್ ಹಲಗೇರಿ ಅವರ ಛಾಯಾಗ್ರಹಣ ಹಾಗೂ ಸ್ವಾಮಿನಾಥನ್ ಅವರ ಸಂಗೀತ ನಿರ್ದೇಶನವಿದೆ. “ONE HIGHWAY MANY SECRETS” ಎಂಬ ಅಡಿಬರಹ “NH66” ಚಿತ್ರಕ್ಕಿದೆ.





Be the first to comment