ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ದಿವಂಗತ ಶ್ರೀ ಡಿ.ವಿ.ಸುಧೀಂದ್ರ ಅವರು ತಮ್ಮ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ 25ವರ್ಷ ತುಂಬಿದ ಸುಸಂದರ್ಭದಲ್ಲಿ ಅನ್ನದಾತರಾದ ನಿರ್ಮಾಪಕರಿಗೆ ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿದರು. ಎರಡು ಪ್ರಶಸ್ತಿಯೊಂದಿಗೆ ಆರಂಭವಾದ ಈ ಸಮಾರಂಭಕ್ಕೆ ಆಗಮಿಸಿದ ಗಣ್ಯರು ನಮ್ಮ ಸಂಸ್ಥೆಯ ಮೂಲಕ ಪ್ರಶಸ್ತಿ ನೀಡಲು ಮುಂದಾದರು.
ಈಗ ಪ್ರಶಸ್ತಿಗಳ ಸಂಖ್ಯೆ 11ಕ್ಕೇರಿದೆ. ಇಂದು ನಮ್ಮೊಂದಿಗೆ ಪ್ರಸಿದ್ದ ನಟರು, ಪತ್ರಕರ್ತರು ಹಾಗೂ ನಿರ್ದೇಶಕರು ಪ್ರಶಸ್ತಿ ಸಮಾರಂಭಕ್ಕೆ ಜೊತೆಯಾಗಿ ಈ ಸಂಸ್ಥೆಯ ಗೌರವವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಸಂಸ್ಥೆಯ 43ನೇ ವಾರ್ಷಿಕೋತ್ಸವ ಹಾಗೂ 19ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಹಲವು ಗಣ್ಯರ ಉಪಸ್ಥಿತಿಯಲ್ಲಿ ಜನವರಿ 25ರ ಶನಿವಾರ ಸಂಜೆ 5.30ಕ್ಕೆ ಚಾಮರಾಜಪೇಟೆಯ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆಯಲಿದೆ.
ಸಂಸ್ಥೆಯ ಸ್ಥಾಪಕರಾದ ದಿ.ಡಿವಿ.ಸುಧೀಂದ್ರ ಅವರ ವೃತಿಜೀವನದ ಕುರಿತು ಸಾಕ್ಷ್ಯಚಿತ್ರವೊಂದು ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಮೂಲಕ ನಿರ್ಮಾಣವಾಗಿದ್ದು, ಇದೇ ಸಂದರ್ಭದಲ್ಲಿ ಪ್ರದರ್ಶನವಾಗಲಿದೆ.
2019ರ ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿಗಳ ವಿವರ
ಶ್ರೀ ಕೆ. ಪ್ರಭಾಕರ್ ಹಿರಿಯ ಚಲನಚಿತ್ರ ನಿರ್ಮಾಪಕರು
(ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ)
ಶ್ರೀಮತಿ ಎಸ್.ಜಿ.ತುಂಗಾರೇಣುಕ(ಚಿತ್ರ ಸಹ ಸಂಪಾದಕಿ)ಹಿರಿಯ ಚಲನಚಿತ್ರ ಪತ್ರಕರ್ತರು
(ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ)
ಶ್ರೀಮತಿ ಪಿ.ಸುಶೀಲ ಖ್ಯಾತ ಹಿನ್ನಲೆಗಾಯಕರು
(`ಡಾ:ರಾಜ್‍ಕುಮಾರ್ ಪ್ರಶಸ್ತಿ’ ಶ್ರೀಮತಿ ಪಾರ್ವತಮ್ಮ ರಾಜ್‍ಕುಮಾರ್ ಅವರಿಂದ)
ಶ್ರೀಎಸ್.ಉಮೇಶ್ ನಿರ್ದೇಶಕರು
(ಯಜಮಾನ’ ಚಿತ್ರದ ಖ್ಯಾತಿ
ಆರ್.ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ’ ಶ್ರೀಮತಿ ಭಾರತಿ ವಿಷ್ಣುವರ್ಧನ ಅವರಿಂದ)
ಶ್ರೀಮತಿ ಪ್ರಮೀಳಾ ಜೋಷಾಯ್ ಕಲಾವಿದರು
(ಖ್ಯಾತ ಅಭಿನೇತ್ರಿ ಶ್ರೀಮತಿ ಜಯಮಾಲ ಎಚ್.ಎಂ.ರಾಮಚಂದ್ರ ಪ್ರಶಸ್ತಿ)
ಶ್ರೀ ಸಾಗರ್ ಗುರುರಾಜ್ ಅತ್ಯತ್ತಮ ಸಂಗೀತ ನಿರ್ದೇಶನ `ಗರ’ಚಿತ್ರಕ್ಕಾಗಿ
(ಎಂ.ಎಸ್.ರಾಮಯ್ಯ ಮೀಡಿಯಾ ಅಂಡ್ ಎಂಟರ್‍ಟೈನ್‍ಮೆಂಟ್ ಪ್ರೈ.ಲಿ ಪ್ರಶಸ್ತಿ)
eóÁ್ಞನಪೀಠ ಪ್ರಶಸ್ತಿ ವಿಜೇತ ಶ್ರೀ ಶಿವರಾಮ ಕಾರಂತ ಅತ್ಯುತ್ತಮ ಕಥಾಲೇಖಕರು ಮೂಕ್ಕಜ್ಜಿಯ ಕನಸುಗಳು’. (
ಖ್ಯಾತ ನಿರ್ದೇಶಕ, ನಿರ್ಮಾಪಕ ಶ್ರೀಕೆ.ವಿ.ಜಯರಾಂ ಪ್ರಶಸ್ತಿ’ ಶ್ರೀಮತಿ ಮೀನಾಕ್ಷಿ ಜಯರಾಂ ಅವರಿಂದ
`ಮೂಕ್ಕಜ್ಜಿಯ ಕನಸುಗಳು’ ಕಾದಂಬರಿಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ ಪಿ.ಶೇಷಾದ್ರಿ ಅವರಿಗೆ ಈ ಬಾರಿಯ ವಿಶೇಷ ಪ್ರಶಸ್ತಿ.
ಶ್ರೀ ಶ್ರೀನಿವಾಸ ಪ್ರಭು ಅತ್ಯುತ್ತಮ ಸಂಭಾಷಣೆ ಬಿಂಬ ಆ ತೊಂಭತ್ತು ನಿಮಿಷಗಳು’ ಚಿತ್ರಕ್ಕಾಗಿ (
ಖ್ಯಾತ ಚಿತ್ರ ಸಾಹಿತಿ ಶ್ರೀಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ’ ಡಾ:ಎಚ್.ಕೆ.ನರಹರಿ ಅವರಿಂದ)
ಶ್ರೀ ರಮೇಶ್ ಇಂದಿರ `ಪ್ರೀಮಿಯರ್ ಪದ್ಮಿನಿ’ ಹಾಗೂ ಕುಮಾರಿ ರೂಪಾ ರಾವ್ (ಗಂಟುಮೂಟೆ) ಚೊಚ್ಚಲ ಚಿತ್ರದ ನಿರ್ದೇಶನಕ್ಕಾಗಿ
(ರಂಗ ತಜû್ಞ, ಹಿರಿತೆರೆ – ಕಿರುತೆರೆ ನಿರ್ದೇಶಕ ಶ್ರೀಬಿ.ಸುರೇಶ್ ಪ್ರಶಸ್ತಿ)
ಶ್ರೀಕಿನಾಲ್ ರಾಜ್ ಗಿರ್ಮಿಟ್’ಚಿತ್ರದ (ಆರಂಭವೆ ಆನಂದವೆ) ಗೀತರಚನೆಗಾಗಿ (
ಹಿರಿಯ ಪತ್ರಕರ್ತರಾದ ಶ್ರೀಪಿ.ಜಿ.ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ’ ಪತ್ರಕರ್ತ ಶ್ರೀ ವಿನಾಯಕರಾಮ್ ಕಲಗಾರು ಅವರಿಂದ )
ಶ್ರೀ ರಮೇಶ್ ಭಟ್ ಹಿರಿಯ ಪೋಷಕ ಕಲಾವಿದರು
(ಹಿರಿಯ ಪತ್ರಕರ್ತ ಸಿ.ಸೀತಾರಾಂ ಸ್ಮರಣಾರ್ಥ ಪ್ರಶಸ್ತಿ)
Pingback: Plumbing Giant Rodanthe NC
Pingback: sex doll for sex offenders