ಬಿಡುಗಡೆ ಮುನ್ನ ‘ಪುಷ್ಪ 2’ 1000 ಕೋಟಿ ಪ್ರೀ ರಿಲೀಸ್ ಬಿಸಿನೆಸ್

ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಸಿನಿಮಾದ ಎಲ್ಲಾ ಭಾಷೆಗಳ  ಆಡಿಯೋ ರೈಟ್ಸ್ 60 ಕೋಟಿಗೆ ಮಾರಾಟವಾಗಿದೆ ಎಂದು ವರದಿಯಾಗಿದೆ.

ಬಿಡುಗಡೆಗೂ ಮುನ್ನ ‘ಪುಷ್ಪ 2 ‘ ಚಿತ್ರ 1000 ಕೋಟಿ ಪ್ರೀ ರಿಲೀಸ್ ಬಿಸಿನೆಸ್ ಮಾಡಿದೆ. ಸಿನಿಮಾದ ಹಿಂದಿ ಅವತರಣಿಕೆಯ ವಿತರಣಾ ಹಕ್ಕು 200 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎಂದು ವರದಿಯಾಗಿದೆ.

 ‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದೆ. ಚಿತ್ರವು ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಆಗಸ್ಟ್ 15 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ವರದಿಗಳ ಪ್ರಕಾರ ಅನಿಲ್ ಥಡಾನಿ ಅವರು ‘ಪುಷ್ಪ 2’ ಹಿಂದಿ ಆವೃತ್ತಿಯನ್ನು ವಿತರಿಸಲು ಯೋಜಿಸುತ್ತಿದ್ದಾರೆ. ಇದಕ್ಕಾಗಿ 200 ಕೋಟಿ ಖರ್ಚು ಮಾಡಿದ್ದಾರೆ ಎಂಬ ಮಾತು ಬಾಲಿವುಡ್ ನಲ್ಲಿ ಕೇಳಿ ಬರುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ನೋಡಿ ಅಲ್ಲು ಅರ್ಜುನ್ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಹಾಡುಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಆಡಿಯೋ ರಿಲೀಸ್ ಆದ ನಂತರ  ‘ಪುಷ್ಪ 2’ ಸಿನಿಮಾದ ಕ್ರೇಜ್ ಹೆಚ್ಚಾಗಲಿದೆ.

ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪ್ಯಾನ್-ಇಂಡಿಯನ್ ಕ್ರೇಜ್ ಮತ್ತು ಬೇಡಿಕೆ ಎರಡನ್ನೂ ಹೊಂದಿದ್ದಾರೆ.  ಪುಷ್ಪ ಚಿತ್ರದ ನಂತರ ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಈಗ ಎಲ್ಲರ ಕಣ್ಣು  ‘ಪುಷ್ಪ 2’ ಚಿತ್ರದ ಮೇಲೆ ನೆಟ್ಟಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!