ಪುಷ್ಪ ಯಶಸ್ಸು: ಸಂಭಾವನೆ ಏರಿಸಿದ ರಶ್ಮಿಕಾ

ಅಲ್ಲು ಅರ್ಜುನ್ ಹೀರೋ ಆಗಿರುವ ಪುಷ್ಪ ದ ರೈಸ್ ಚಿತ್ರ ಸೂಪರ್ ಹಿಟ್ ಆಗಿರುವ ಬೆನ್ನಿಗೇ, ಚಿತ್ರದ ಹೀರೋಯಿನ್ ರಶ್ಮಿಕಾ ಮಂದಣ್ಣ ಅವರು ಏಕಾಏಕಿ ತಮ್ಮ ಸಂಭಾವನೆಯನ್ನು ಭಾರಿ ಹೆಚ್ಚಳ ಮಾಡಿರುವ ಸುದ್ದಿ ಹರಿದಾಡುತ್ತಿದೆ.

ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿರುವ ಪುಷ್ಪ ಚಿತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಚಿತ್ರದ ಎರಡನೇ ಭಾಗಕ್ಕೆ ರಶ್ಮಿಕಾ ಮಂದಣ್ಣ ಅವರು ಸಂಭಾವನೆ ಏರಿಕೆ ಮಾಡಿರುವ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಸುಕುಮಾರ್ ನಿರ್ದೇಶನದ ಪುಷ್ಪ ಚಿತ್ರದ ಎರಡನೇ ಭಾಗಕ್ಕೆ ರಶ್ಮಿಕಾ ಮಂದಣ್ಣ ಅವರು ಭಾರೀ ಮೊತ್ತವನ್ನು ಡಿಮಾಂಡ್ ಮಾಡಿದ್ದಾರೆ. ಮೊದಲ ಭಾಗಕ್ಕೆ ಎರಡು ಕೋಟಿ ಸಂಭಾವನೆ ಪಡೆದಿದ್ದ ರಶ್ಮಿಕಾ ಅವರು ಪುಷ್ಪ : ದ ರೂಲ್ ಚಿತ್ರಕ್ಕೆ ಮೂರು ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಒಂದು ವೇಳೆ ಇಷ್ಟು ದೊಡ್ಡ ಮೊತ್ತದ ಸಂಭಾವನೆಯನ್ನು ರಶ್ಮಿಕ ಅವರು ಪಡೆದರೆ, ಇದು ಅವರ ವೃತ್ತಿಜೀವನದ ಅತೀ ದೊಡ್ಡ ಸಂಭಾವನೆ ಎನಿಸಿಕೊಳ್ಳಲಿದೆ.
ಈ ಮೊದಲು ಪುಷ್ಪ ಚಿತ್ರದ ನಿರ್ದೇಶಕ ಸುಕುಮಾರ್ ಅವರು ಫೆಬ್ರವರಿ ತಿಂಗಳಿನಲ್ಲಿ ಪುಷ್ಪ ಚಿತ್ರದ ಎರಡನೇ ಭಾಗ ಕೈಗೆತ್ತಿಕೊಳ್ಳುವುದಾಗಿ ಘೋಷಣೆ ಮಾಡಿದ್ದರು. 2022ರ ಕೊನೆಯ ಭಾಗದಲ್ಲಿ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಅವರು ಹೇಳಿದ್ದರು.
ಕನ್ನಡದ ‘ಕಿರಿಕ್ ಪಾರ್ಟಿ ‘ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ ನಟಿ ರಶ್ಮಿಕಾ ಅವರು ಈಗ ದಕ್ಷಿಣ ಭಾರತದ ಬಲು ಬೇಡಿಕೆಯ ನಟಿ ಆಗಿ ಗುರುತಿಸಿಕೊಂಡಿದ್ದಾರೆ.

ಪುಷ್ಪದಲ್ಲಿ ಲಾರಿ ಡ್ರೈವರ್ ಪುಷ್ಪ ರಾಜು ಆಗಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಚಂದನದ ಮರಗಳನ್ನು ಕಳ್ಳಸಾಗಾಣಿ ಮಾಡುವ ಕಥೆಯನ್ನು ಸಿನಿಮಾ ಹೊಂದಿದೆ. ಇಲ್ಲಿ ಪುಷ್ಪರಾಜ್ ಗೆಳತಿ ಆಗಿ ರಶ್ಮಿಕಾ ಮಂದಣ್ಣ ಅವರು ನಟಿಸಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್‌ ಮತ್ತು ಮುತ್ತಂಸೆಟ್ಟಿ ಮಿಡಿಯಾ ನಿರ್ಮಾಣದಲ್ಲಿ ತಯಾರಾಗಿರುವ ಪುಷ್ಪ ಸಿನಿಮಾದಲ್ಲಿ ಡಾಲಿ ಧನಂಜಯ್ ಕೂಡಾ ನಟಿಸಿದ್ದಾರೆ.
________

Be the first to comment

Leave a Reply

Your email address will not be published. Required fields are marked *

Translate »
error: Content is protected !!