‘ಪುಷ್ಪ 3’ ಘೋಷಣೆ

‘ಪುಷ್ಪ 3: ದಿ ರಾಂಪೇಜ್’ ನ್ನು  ನಿರ್ಮಿಸಲಾಗುವುದು ಎಂದು ನಿರ್ದೇಶಕ ಸುಕುಮಾರ್ ದೃಢಪಡಿಸಿದ್ದಾರೆ.

ದುಬೈನಲ್ಲಿ ನಡೆದ ಸೈಮಾ ಚಿತ್ರೋತ್ಸವದಲ್ಲಿ ‘ಪುಷ್ಪ 2: ದಿ ರೂಲ್’ ಚಿತ್ರತಂಡ ಐದು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.  ಪುಷ್ಪ ತಂಡ ವೇದಿಕೆಗೆ ಬಂದ ನಂತರ ನಿರೂಪಕರು ತಮಾಷೆಯಾಗಿ ‘ಪಾರ್ಟಿ ಲೇದಾ ಪುಷ್ಪಾ? (ಪಾರ್ಟಿ ಇಲ್ಲವೇ, ಪುಷ್ಪಾ?)’ ಎಂದು   ಭನ್ವರ್ ಸಿಂಗ್ ಶೇಕಾವತ್ ಪಾತ್ರದ ಮಾಸ್ ಡೈಲಾಗ್ ನ್ನು ಉಲ್ಲೇಖಿಸಿ ಕೇಳಿದರು. ನಂತರ  ಪುಷ್ಪ 3  ಮಾಡುವಿರಾ ಎಂದು ಸುಕುಮಾರ್ ಅವರನ್ನು ಕೇಳಿದರು. ಅದಕ್ಕೆ ಸುಕುಮಾರ್ ಅವರು ನಿರ್ಮಾಪಕ ಮತ್ತು ಅರ್ಜುನ್ ಅವರ ಕಡೆಗೆ ನೋಡಿ  ಅವರು ಒಪ್ಪಿಗೆ ನೀಡಿದ ನಂತರ  ಖಂಡಿತವಾಗಿಯೂ ಪುಷ್ಪ 3 ಬರಲಿದೆ ಎಂದು ಹೇಳಿದರು.

ನಿರ್ದೇಶಕ ಸುಕುಮಾರ್, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಸಂಗೀತ ಸಂಯೋಜಕ ದೇವಿ ಶ್ರೀ ಪ್ರಸಾದ್, ಮೈತ್ರಿ ಮೂವಿ ಮೇಕರ್ಸ್‌ನ ನಿರ್ಮಾಪಕ ನವೀನ್ ಯೆರ್ನೇನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಲ್ಲು ಅರ್ಜುನ್‌ಗೆ ಅತ್ಯುತ್ತಮ ನಟ ಪ್ರಶಸ್ತಿ, ರಶ್ಮಿಕಾ ಮಂದಣ್ಣಗೆ ಅತ್ಯುತ್ತಮ ನಟಿ ಪ್ರಶಸ್ತಿ, ಸುಕುಮಾರ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ದೇವಿ ಪ್ರಸಾದ್ ಅವರಿಗೆ ಅತ್ಯುತ್ತಮ ಸಂಗೀತ ಸಂಯೋಜಕ ಪ್ರಶಸ್ತಿ ಮತ್ತು ಶಂಕರ್ ಬಾಬು ಕಂದುಕುರಿ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಲಭಿಸಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!