ಕನಸಾಗಿಯೇ ಉಳಿದ ಪುನೀತ್ ಸಿನಿಮಾಗಳು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ಮರಣ ಕನ್ನಡ ಚಿತ್ರರಂಗವನ್ನು ಆಘಾತಕ್ಕೆ ದೂಡಿದೆ. ಸಾಲು ಸಾಲು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದ ಅಪ್ಪು ಚಿತ್ರಗಳು ಈಗ ಕನಸಾಗಿ ಉಳಿಯುವ ಸ್ಥಿತಿ ಬಂದಿದೆ.

ಬಹದ್ದೂರ್ ಚೇತನ್ ನಿರ್ದೇಶನದ ಜೇಮ್ಸ್‌ ಚಿತ್ರದ ಶೂಟಿಂಗ್‌ನಲ್ಲಿ ಅಪ್ಪು ತೊಡಗಿಸಿಕೊಂಡಿದ್ದರು. ಚಿತ್ರದ ಶೇ.25 ಶೂಟಿಂಗ್‌ ಮಾತ್ರ ಬಾಕಿ ಇತ್ತು. ಇತ್ತೀಚೆಗೆ ಚಿತ್ರದ ಲುಕ್‌ ಕೂಡ ವೈರಲ್‌ ಆಗಿತ್ತು. ಪೋಸ್ಟರ್ ಗಮನ ಸೆಳೆದಿತ್ತು.

ಜೇಮ್ಸ್ ಬಳಿಕ ಪುನೀತ್ ರಾಜಕುಮಾರ್ ದ್ವಿತ್ವ ಸಿನಿಮಾದಲ್ಲಿ ನಟಿಸ ಬೇಕಿತ್ತು. ಪವನ್‌ ಕುಮಾರ್ ದ್ವಿತ್ವ ಚಿತ್ರಕ್ಕೆ ನಿರ್ದೇಶನ ಮಾಡಬೇಕಿತ್ತು. ಸೈಕಾಲಾಜಿಕಲ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದ್ದ ದ್ವಿತ್ವ ಪೋಸ್ಟರ್ ಮೂಲಕವೇ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿತ್ತು.

ಬಳಿಕ ದಿನಕರ್ ತೂಗುದೀಪ್ ನಿರ್ದೇಶನದಲ್ಲಿ ಪುನೀತ್ ರಾಜಕುಮಾರ್ ಸಿನಿಮಾದಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಮುಂದಿನ ವರ್ಷ ಏಪ್ರಿಲ್ ನಂತರ ಸಂತೋಷ್ ಆನಂದ್ ರಾಮ್ ಜೊತೆಗೆ ಮತ್ತೊಂದು ಸಿನಿಮಾ ಸೆಟ್ಟೇರುವ ಮಾತುಕತೆ ನಡೆದಿತ್ತು.
ಪುನೀತ್ ಅವರ ಡೇಟ್ ಪಡೆದಿದ್ದ ಯೋಗರಾಜ್ ಭಟ್ ಅವರು ಪುನೀತ್‌ ರಾಜ್‌ಕುಮಾರ್‌ ಅವರಿಗೆ ತಕ್ಕ ಕಥೆ ಸಿದ್ದ ಮಾಡಿಕೊಳ್ಳುವಲ್ಲಿ ನಿರತರಾಗಿದ್ದರು.

ಇದಲ್ಲದೇ ಪುನೀತ್ ರಾಜ್ ಕುಮಾರ್ ತಮ್ಮ ಪಿಆರ್‌ಕೆ ಪ್ರೊಡಕ್ಷನ್ ಮೂಲಕ ಸಿನಿಮಾಗಳನ್ನು ನಿರ್ಮಾಣ ಮಾಡುವುದರಲ್ಲಿ ಬಿಜಿ ಆಗಿದ್ದರು. ನ.1ಕ್ಕೆ ಹೊಸ ಚಿತ್ರದ ಘೋಷಣೆ ಆಗಬೇಕಿತ್ತು. ಆದರೆ ಆ ಮುನ್ನ ಪುನೀತ್ ವಿಧಿಯ ಕರೆಗೆ ಓಗೊಟ್ಟು ಕಾಣದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!