ಅಕಾಲಿಕವಾಗಿ ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿರ್ಮಾಪಕರ ಮುಖದಲ್ಲಿ ನಗು ಮೂಡಿಸಿದ ನಟ ಆಗಿದ್ದರು. ಅವರು ಅತ್ಯಧಿಕ ಸಂಭಾವನೆ ಪಡೆಯುತ್ತಿದ್ದರೂ ಅವರ ಚಿತ್ರಗಳಿಂದ ಯಾವ ನಿರ್ಮಾಪಕರೂ ನಷ್ಟ ಅನುಭವಿಸಲಿಲ್ಲ ಎನ್ನುವುದು ವಿಶೇಷ.
2002ರಿಂದ ಒಟ್ಟು 28 ಚಿತ್ರಗಳಲ್ಲಿ ಪುನೀತ್ ಅವರು ನಾಯಕ ನಟನಾಗಿ ನಟಿಸಿದ್ದರು. ಮೊದಲ ಚಿತ್ರ ಅಪ್ಪು ಮೂಲಕ ಪುರಿ ಜಗನ್ನಾಥ್ ಅವರಿಂದ ಹಿಡಿದು ದಿನೇಶ್ಬಾಬು, ಮೇಹರ್ ರಮೇಶ್, ಎಸ್.ನಾರಾಯಣ್, ಮಹೇಶ್ಬಾಬು, ಡಿ.ರಾಜೇಂದ್ರ ಬಾಬು, ಪ್ರೇಮ್, ಜೇಕಬ್ ವರ್ಗಿಸ್, ಕೆ.ಮಾದೇಶ್, ಸೂರಿ, ಯೋಗರಾಜ್ಭಟ್, ಗಿರಿರಾಜ್, ಪವನ್ ಒಡೆಯರ್, ಸೂರಿ, ಹರ್ಷ, ಸಂತೋಷ್ ಆನಂದ್ ರಾಮ್ ಸೇರಿದಂತೆ ಅನೇಕ ನಿರ್ದೇಶಕರ ಜೊತೆ ಪುನೀತ್ ಸಿನಿಮಾ ಮಾಡಿದ್ದರು.
ಇತ್ತೀಚೆಗೆ ಕೋಟಿಗಟ್ಟಲೆ ಬಜೆಟ್ನ ಪ್ಯಾ ನ್ ಇಂಡಿಯಾ ಚಿತ್ರಗಳು ಸದ್ದು ಮಾಡುವಾಗ ಪುನೀತ್ ಅವರ ಕನ್ನಡ ಭಾಷೆಯ ಚಿತ್ರಗಳು ಅಖಿಲ ಭಾರತ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದವು. ಈ ಚಿತ್ರಗಳು ಪರಭಾಷೆಗಳಿಗೆ ಡಬ್ ಆಗುತ್ತಿದ್ದವು. ಪುನೀತ್ ರಾಜ್ಕುಮಾರ್ ಅವರ ಕಾಲ್ಶೀಟ್ ಸಿಕ್ಕಿದೆ ಎಂದರೆ ನಿರ್ಮಾಪಕರು ಗೆದ್ದಿದ್ದಾರೆ ಎನ್ನುವ ನಂಬಿಕೆ ಚಿತ್ರರಂಗದಲ್ಲಿತ್ತು.
ಕಥೆಗಳ ಆಯ್ಕೆಯಲ್ಲಿ ಸಾಕಷ್ಟು ಎಚ್ಚರಿಕೆ ವಹಿಸುತ್ತಿದ್ದ ಪುನೀತ್ ರಾಜ್ ಕುಮಾರ್ ಹೊಸ ಬಗೆಯ ಪಾತ್ರಗಳಿಗೆ, ಹೊಸತನಕ್ಕೆ ತುಡಿಯುತ್ತಿದ್ದರು. ಚಿತ್ರ ರಿಚ್ ಆಗಿ ಮೂಡಿ ಬರುವ ನಿಟ್ಟಿನಲ್ಲಿ ಕಾಳಜಿ ವಹಿಸುತ್ತಿದ್ದರು.
Be the first to comment